ಸಿನಿಮಾ

7 ಬೈಕ್ ವಶ, ವಿವಿಧ ಠಾಣೆಯ ಪ್ರಕರಣ ಪತ್ತೆ

ದಾವಣಗೆರೆ: ಬೈಕ್ ಕಳ್ಳತನ ಜಾಲವನ್ನು ಭೇದಿಸಿರುವ ಇಲ್ಲಿನ ಕೆಟಿಜೆ ನಗರ ಠಾಣೆಯ ಪೊಲೀಸರು 3 ಲಕ್ಷ ರೂ. ಮೌಲ್ಯದ 7 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
 ಪ್ರಕರಣ ಸಂಬಂಧ ಆರೋಪಿ ಕೆ.ಎಲ್. ರಾಕೇಶ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ದಸ್ತಗಿರಿ ಮಾಡಲಾಗಿದೆ.
 ಇದರೊಂದಿಗೆ ಕೆ.ಟಿಜೆ ನಗರ, ವಿದ್ಯಾನಗರ, ಮಲೇಬೆನ್ನೂರು, ಹದಡಿ  ಪೊಲೀಸ್ ಠಾಣೆಗಳ ತಲಾ 1, ಚನ್ನಗಿರಿ ಪೊಲೀಸ್ ಠಾಣೆಯ 3 ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
 ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ. ಬಸರಗಿ, ಡಿಸಿಐಬಿ ಘಟಕದ ಡಿವೈಎಸ್ಪಿ ರೋಷನ್ ಜಮೀರ್ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಶಶಿಧರ ಯು.ಜೆ, ಪಿಎಸ್‌ಐ ಎನ್.ಆರ್. ಕಾಟೆ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Latest Posts

ಲೈಫ್‌ಸ್ಟೈಲ್