ವಿದ್ಯಾರ್ಥಿಗಳ ಕಲ್ಪನೆಯಲ್ಲಿ ಅರಳಿದ ಆವಿಷ್ಕಾರ  

blank

ದಾವಣಗೆರೆ : ಟೊಮ್ಯಾಟೋ ಸಂರಕ್ಷಿಸುವ ಸ್ಮಾರ್ಟ್ ವಿಧಾನ, ಸಂವಾದ ನಡೆಸುವ ರೋಬೋಟ್, ಕಾರ್ ಬಾಗಿಲು ತೆರೆಯಲು ಆಧುನಿಕ ತಂತ್ರಜ್ಞಾನ ಬಳಸಿ ಅಪಘಾತ ತಡೆಗಟ್ಟುವಿಕೆ. ಕಾಟನ್ ಬಟ್ಟೆಗಳಿಗೆ ಬೆಂಕಿಯಿಂದ ರಕ್ಷಣೆ, ಪರಿಸರಸ್ನೇಹಿ ಪೇಪರ್ ಬ್ಯಾಗ್‌ಗಳು.  ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ, ‘ನಿರ್ಮಾಣ 5.0’ ಪ್ರಾಜೆಕ್ಟ್‌ಗಳ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಮಾದರಿಗಳ ಝಲಕ್ ಇದು.  ಕಾಟನ್ ಬಟ್ಟೆಗಳನ್ನು ಬೆಂಕಿಯಿಂದ ರಕ್ಷಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಅವರು ಪೈನ್ಯಾಪಲ್ ಹಣ್ಣಿನ ಸಿಪ್ಪೆಯನ್ನು ಬಳಸಿದ್ದಾರೆ. ಅದರಲ್ಲಿರುವ ಗುಣವು ಬಟ್ಟೆಯನ್ನು ಸಂರಕ್ಷಿಸುತ್ತದೆ ಎಂದು ವಿದ್ಯಾರ್ಥಿಗಳು ವಿವರಿಸಿದರು. ವಿಶೇಷವಾಗಿ ಮಕ್ಕಳು ಧರಿಸುವ ಬಟ್ಟೆಗಳಿಗೆ, ಮನೆಯೊಳಗೆ ಬಳಸುವ ಕರ್ಟನ್ ಇನ್ನಿತರ ಬಟ್ಟೆಗಳಿಗೆ ಇದು ಉಪಯುಕ್ತವಾಗಲಿದೆ.  ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಿ, ಅದಕ್ಕೆ ಪರ್ಯಾಯವಾಗಿ ಸೆಲ್ಯುಲೋಸ್ ಕೋಟೆಡ್ ಪೇಪರ್ ಬ್ಯಾಗ್‌ಗಳನ್ನು ಬಳಸುವ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ. ಈ ಪೇಪರ್ ಬ್ಯಾಗ್‌ಗಳು ನೀರು ಮತ್ತು ಎಣ್ಣೆಯಿಂದ ತೇವವಾಗುವುದಿಲ್ಲ. ಪರಿಸರ ಸ್ನೇಹಿಯೂ ಆಗಿವೆ.  ಹೀಗೆ ಕಾಲೇಜಿನ 9 ವಿಭಾಗಗಳ 60ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು. 3 ಸಾವಿರಕ್ಕೂ ಹೆಚ್ಚು ವಿವಿಧ ಶಾಲೆಯ ಮಕ್ಕಳು ಪ್ರದರ್ಶನ ವೀಕ್ಷಿಸಿದರು.  ಪ್ರದರ್ಶನ ಉದ್ಘಾಟಿಸಿದ ಬೆಂಗಳೂರು 1 ಪೇಜ್ ಸಂಸ್ಥಾಪಕ ಪೂರಣ ಪ್ರಸಾದ್ ರಾಜಣ್ಣ ಮಾತನಾಡಿ, ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳನ್ನು ಆವರಿಸಿದ್ದು ಇಂಜಿನಿಯರಿಂಗ್ ವಿನ್ಯಾಸಗಳನ್ನು ಅತಿ ಕಡಿಮೆ ಸಮಯದಲ್ಲಿ ಮಾಡಬಹುದು ಎಂದು ತಿಳಿಸಿದರು.  ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ, ಸಂಚಾಲಕ ಡಾ. ಎ.ಜಿ. ಶಂಕರಮೂರ್ತಿ ಹಾಗೂ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.  

blank
Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank