ದಾವಣಗೆರೆ : ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ (14 ವರ್ಷದೊಳಗಿನ ಬಾಲಕರ ವಿಭಾಗ)ಬೆಂಗಳೂರು ವಿಭಾಗದ ಹಿರಿಯೂರು ತಾಲೂಕು ಧರ್ಮಪುರದ ಸ್ವಾಭಿಮಾನ ವಸತಿ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಕ್ಕಳ ಈ ಸಾಧನೆಯ ಬಗ್ಗೆ ಹಿರಿಯ ಕ್ರೀಡಾಪಟು ಹಾಗೂ ದಾವಣಗೆರೆ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಟಿ. ಕುಮಾರ ಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
