ದಾವಣಗೆರೆ : ಆಧುನಿಕ ಜಗತ್ತಿನಲ್ಲಿ ಇದ್ದುಕೊಂಡೇ ನಮ್ಮ ಪ್ರಾಚೀನ ಕಲೆ, ಸಾಂಸ್ಕೃತಿಕ ಪರಂಪರೆ ಉಳಿಸಿ, ಬೆಳೆಸಬೇಕಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ(ಆಡಳಿತ) ಶಬ್ಬೀರ್ ಬಾಷಾ ಗಂಟಿ ಹೇಳಿದರು. ನಗರದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯ ವಿಶ್ವಕಲಾ ಗ್ಯಾಲರಿಯಲ್ಲಿ ಗುರುವಾರ, ವಜ್ರ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ದೃಶ್ಯಕಲಾ ಸ್ನಾತಕೋತ್ತರ ಪೇಂಟಿಂಗ್ ವಿಭಾಗದ ವಿದ್ಯಾರ್ಥಿಗಳಾದ ಕೆ. ಪ್ರೇಮ್ ಕುಮಾರ್, ಎನ್. ರಾಜ ಅವರ ಕಲಾಕೃತಿಗಳ ಪ್ರದರ್ಶನ ‘ದೃಶ್ಯಾನುಭವ-2024’ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಡಾ. ಜೈರಾಜ ಚಿಕ್ಕಪಾಟೀಲ್ ಮಾತನಾಡಿ, ವಿವಿಯ ಉನ್ನತಾಧಿಕಾರಿಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಈ ಮಹಾ ವಿದ್ಯಾಲಯಕ್ಕೆ ಅಗತ್ಯ ಭೌತಿಕ ಸೌಲಭ್ಯಗಳು ಬೇಗನೆ ದೊರಕುತ್ತಿವೆ. ವಜ್ರ ಮಹೋತ್ಸವ ಕಾರ್ಯಕ್ರಮಕ್ಕೂ ವಿವಿ ಸಹಕರಿಸುತ್ತಿದೆ ಎಂದರು. ದೃಶ್ಯಕಲಾ ಕಾಲೇಜಿನ ಸಲಹಾ ಮಂಡಳಿ ಸದಸ್ಯರಾದ ಮಹಾಲಿಂಗಪ್ಪ, ಬಾ.ಮ. ಬಸವರಾಜ್ ಮಾತನಾಡಿದರು. ಕಲಾಕೃತಿಗಳನ್ನು ಪ್ರದರ್ಶಿಸಿದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಕೆ. ಪ್ರೇಮ್ ಕುಮಾರ್ ಮತ್ತು ಎನ್. ರಾಜ ಅನಿಸಿಕೆ ಹಂಚಿಕೊಂಡರು. ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ ಸ್ವಾಗತಿಸಿದರು. ಸಹಸಂಚಾಲಕ ಡಿ.ಎಚ್. ಸುರೇಶ ನಿರೂಪಿಸಿದರು. ಮತ್ತೊಬ್ಬ ಸಹಸಂಚಾಲಕ ಶಿವಶಂಕರ ಸುತಾರ್ ವಂದಿಸಿದರು. ಶಾರದಾ ಜಾವಗಲ್ ಪ್ರಾರ್ಥಿಸಿದರು. ಬೋಧನಾ ಸಹಾಯಕರಾದ ದತ್ತಾತ್ರೇಯ ಎನ್. ಭಟ್ಟ, ಡಾ. ಸಂತೋಷ ಕುಲಕರ್ಣಿ, ಹರೀಶ್ ಹೆಡ್ನವರ್, ಕೆ.ವಿ. ಪ್ರಮೋದ್, ಓಂಕಾರಮೂರ್ತಿ, ರಂಗನಾಥ್ ಕುಲಕರ್ಣಿ, ನವೀನ್ ಕುಮಾರ್, ಕಲಾಸಕ್ತ ಪನ್ನಾಲಾಲ್, ಬೋಧಕೇತರ ನೌಕರರು, ವಿದ್ಯಾರ್ಥಿಗಳು ಇದ್ದರು. ಕಲಾ ಪ್ರದರ್ಶನದಲ್ಲಿ ಪ್ರೇಮ್ ಕುಮಾರ್ ಮತ್ತು ಎನ್. ರಾಜ ಅವರ 21 ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಕೆಲವು ಆಕ್ರೇಲಿಕ್ ಆನ್ ಕ್ಯಾನವಾಸ್ ಕಲಾಕೃತಿಗಳು, ಕೆಲವು ಚಿತ್ರ ರಚನಾ ಕಾಗದದ ಮೇಲೆ ಚಾರ್ಕೋಲ್‌ನಿಂದ ಮಾಡಿದವು. ಕ್ರೀಡೆ, ಸ್ತ್ರೀ ಸಂವೇದನೆ ಕುರಿತ ಚಿತ್ರಗಳು ಹೆಚ್ಚಾಗಿವೆ. ಈ ಕಲಾ ಪ್ರದರ್ಶನ ಮೇ 18 ರ ವರೆಗೆ ನಡೆಯಲಿದ್ದು ಬೆಳಗ್ಗೆ 10.30ರಿಂದ ಸಂಜೆ 5.30ರ ವರೆಗೆ ವೀಕ್ಷಿಸಬಹುದಾಗಿದೆ.
