ದಾವಣಗೆರೆ : ಅಡಕೆಯನ್ನು ಗುಟ್ಕಾಗೆ ಬಳಸುವ ಬದಲು ‘ಗುಡ್ ಕಾಸ್’ ಗೆ ಉಪಯೋಗಿಸಿದರೆ ಅದರ ಗೌರವ ಹೆಚ್ಚಾಗುತ್ತದೆ ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ, ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ (ದಾಮ್‌ಕೋಸ್) ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಂಗಳ ಕಾರ್ಯಗಳಲ್ಲಿ ಅಡಕೆ, ಎಲೆ ಕೊಡುವುದು ನಮ್ಮ ಸಂಸ್ಕೃತಿಯಾಗಿದೆ. ಅಡಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಇದೇ ಕಾರಣಕ್ಕೆ ಕೇಂದ್ರದಲ್ಲಿ ಅಡಕೆಯ ಮಾನ, ಮರ್ಯಾದೆ ಹರಾಜಾಗುತ್ತಿದೆ ಎಂದು ತಿಳಿಸಿದರು. ಅಡಕೆಗೆ ಸೇರಿಸುವ ಪದಾರ್ಥಗಳಿಂದ ರೋಗ ಬರುವ ಸಾಧ್ಯತೆ ಇರುತ್ತದೆ. ಆ ಗುಟ್ಕಾದಿಂದ ಅಡಕೆಯ ಗೌರವಕ್ಕೆ ಧಕ್ಕೆ ಬಂದಿದೆಯೇ ಹೊರತು ಅಡಕೆಯಿಂದಲ್ಲ. ಅದರಿಂದ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಬಹುದು ಎಂದು ಹೇಳಿದರು. ‘ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಮಾತಿದೆ. ಆದರೆ ಈಗ ಕಾಲ ಬದಲಾಗಿದೆ. ಅಡಕೆ ಬೆಳೆಯುವ ರೈತರ ಸಂಖ್ಯೆ ಜಾಸ್ತಿಯಾಗಿದೆ. ಅವರು ಆರ್ಥಿಕವಾಗಿಯೂ ಅಭಿವೃದ್ಧಿಯಾಗಿದ್ದಾರೆ. ಮುಂದೊಂದು ದಿನ ಬೆಲೆ ಕುಸಿದರೆ ರೈತರ ಗತಿಯೇನು ಎಂಬ ಪ್ರಶ್ನೆಯೂ ಎದುರಾಗುತ್ತದೆ ಎಂದು ತಿಳಿಸಿದರು. ದಾಮ್‌ಕೋಸ್ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಮಾತನಾಡಿ, ಪ್ರತಿ ಹಳ್ಳಿಗೂ ಹೋಗಿ ಸಂಸ್ಥೆಯ ಸದಸ್ಯತ್ವ ಹೆಚ್ಚಿಸಲು ಪ್ರಯತ್ನಿಸಲಾಗುವುದು. ಸಂಸ್ಥೆಗೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು. ಸಂಸ್ಥಾಪಕ ಅಧ್ಯಕ್ಷ ಎಚ್. ಜಯಣ್ಣ, ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ, ಮುದೇಗೌಡ್ರು ಗಿರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ಹಿರಿಯ ಪತ್ರಕರ್ತ ಸದಾನಂದ ಹೆಗಡೆ ಮಾತನಾಡಿದರು. ದಾಮ್‌ಕೋಸ್ ಆಡಳಿತ ಮಂಡಳಿಯ ಸದಸ್ಯರಾದ ಎಚ್.ಜಿ. ಮಲ್ಲಿಕಾರ್ಜುನ್, ಎ.ಜಿ. ರೇವಣಸಿದ್ದಪ್ಪ, ಎಚ್.ಜಿ. ಮರುಳಸಿದ್ದಪ್ಪ, ಬಿ. ಬಸವರಾಜಯ್ಯ, ಕೆ.ಜಿ. ಉಮೇಶ್, ಎಂ.ಆರ್. ಮಂಜುನಾಥಯ್ಯ, ಜಿ.ಸಿ. ವಾಮದೇವಪ್ಪ, ಎಚ್.ಎಸ್. ಮಂಗಳಗೌರಮ್ಮ, ಕೆ. ಸುಧಾ, ಬಿ. ಫಾಲಾಕ್ಷಮ್ಮ, ರಸಗೊಬ್ಬರ ಕಂಪನಿಯ ಕೆ. ನಾಗರಾಜ, ಜಿ.ಆರ್. ಪ್ರಕಾಶ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಸಂಗಮೇಶ್ವರ ಗೌಡ್ರು, ಶಾಮನೂರು ಲಿಂಗರಾಜ ಇದ್ದರು. ಸದಾನಂದ ಸ್ವಾಗತಿಸಿದರು. ನಾಗರಾಜ ನಿರೂಪಿಸಿದರು. ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. … (ಬಾಕ್ಸ್) ತಜ್ಞರೊಂದಿಗೆ ಸಮಾಲೋಚನೆ ಮಲೆನಾಡು ಭಾಗದಲ್ಲಿ ಅಡಕೆಯ ಕೊಳೆ ರೋಗದ ನಿಯಂತ್ರಣ ಮತ್ತು ಪರಿಹಾರ ಸಂಬಂಧ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಇತ್ತೀಚೆಗೆ ಮಲೆನಾಡು ಪ್ರದೇಶದ ರೈತರು ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು ಎಂದು ತಿಳಿಸಿದರು. ಅಡಕೆಯ ಆಮದು-ರಫ್ತು, ಸಾಗಾಣಿಕೆ, ಗೋಡೌನ್ ನಿರ್ಮಾಣ, ಕಾರ್ಖಾನೆ ಸ್ಥಾಪನೆ ಸೇರಿದಂತೆ ಅಡಕೆ ಬೆಳೆಗಾರರ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಜಿಲ್ಲೆಯಲ್ಲಿ 20 ಸಾವಿರ ಅಡಕೆ ಬೆಳೆಗಾರರಿದ್ದರೂ ದಾಮ್‌ಕೋಸ್ ಸದಸ್ಯರ ಸಂಖ್ಯೆ ಕಡಿಮೆ ಇದೆ. ಸದಸ್ಯತ್ವ ಹೆಚ್ಚಿಸಿಕೊಳ್ಳುವ ಮೂಲಕ ಸಂಸ್ಥೆ ಬೆಳೆಯಬೇಕಿದೆ ಎಂದು ಅಭಿಪ್ರಾಯಪಟ್ಟರು. … (ಬಾಕ್ಸ್) ಆಮದು ಬಗ್ಗೆ ಬೇಡ ಆತಂಕ ಭೂತಾನ್‌ನಿಂದ 17 ಸಾವಿರ ಮೆಟ್ರಿಕ್ ಟನ್‌ನಷ್ಟು ಮಾತ್ರ ಅಡಕೆ ಆಮದಾಗುತ್ತಿದ್ದು ಈ ಬಗ್ಗೆ ರೈತರಿಗೆ ಆತಂಕ ಬೇಡ ಎಂದು ಮಂಗಳೂರಿನ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ದೇಶದ ರಕ್ಷಣೆಯ ದೃಷ್ಟಿಯಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅದರ ಪ್ರಮಾಣ ಕಡಿಮೆ ಇರುವುದರಿಂದ ತೊಂದರೆ ಇಲ್ಲ. ಅಡಕೆ ಹಾನಿಕಾರಕವಲ್ಲ. ಅದರಿಂದ ಕ್ಯಾನ್ಸರ್ ಬರುವುದಿಲ್ಲ. ನಿಟ್ಟೆ ವಿಶ್ವವಿದ್ಯಾಲಯದಿಂದ ನಡೆಸಿದ ಸಂಶೋಧನೆಯಲ್ಲಿ ಇದು ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು. ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯಗಳಲ್ಲೂ ಅಡಕೆ ಕೃಷಿ ವ್ಯಾಪಿಸುತ್ತಿದೆ. ದೇಶದ ದೊಡ್ಡ ಕಂಪನಿಯೊಂದು ಆಫ್ರಿಕಾದಲ್ಲಿ 2500 ಎಕರೆಯಲ್ಲಿ ಅಡಕೆ ಬೆಳೆಯಲು ಯೋಜಿಸಿದೆ ಎಂಬ ಮಾಹಿತಿ ಇದೆ. ಇಂಥ ಬೆಳವಣಿಗೆಗಳು ದುರದೃಷ್ಟಕರ ಎಂದರು. ಅಡಕೆ ಖರೀದಿಸುವಾಗ ತೇವಾಂಶ ಶೇ. 7 ರಷ್ಟು ಇರಬೇಕು ಎಂಬ ನಿಯಮವಿದೆ. ಅದನ್ನು ಶೇ. 11 ರ ವರೆಗೆ ತೇವಾಂಶ ಇದ್ದರೂ ಖರೀದಿಸಲು ಅವಕಾಶ ಮಾಡಿಕೊಡಬೇಕು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬೇಕು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದರು. … (ಕೋಟ್) ಬೆಳೆಗಾರರು ಸಹಕಾರ ಸಂಘದಲ್ಲೇ ಅಡಕೆ ಮಾರಾಟ ಮಾಡಬೇಕು. ಇದರಿಂದ ಸಂಸ್ಥೆಯೂ ಬೆಳೆಯುತ್ತದೆ, ರೈತರಿಗೂ ಅನುಕೂಲವಾಗುತ್ತದೆ. ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಆರ್.ಎಂ. ರವಿ, ತುಮ್‌ಕೋಸ್ ಅಧ್ಯಕ್ಷ …
ಅಡಕೆ ಗುಟ್ಕಾಗೆ ಬದಲು ‘ಗುಡ್ ಕಾಸ್’ಗೆ ಬಳಕೆಯಾಗಲಿ
Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…
ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…
ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…
ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach ) ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…
Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..
ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan) ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…