ದಾವಣಗೆರೆ : ದಾಸ ಸಾಹಿತ್ಯವನ್ನು ಪುನರುತ್ಥಾನ ಗೊಳಿಸಿದ ಕೀರ್ತಿ ವಿಜಯದಾಸರಿಗೆ ಸಲ್ಲುತ್ತದೆ ಎಂದು ವೇದ ಪಂಡಿತ ವೆಂಕಟೇಶಾಚಾರ್ ಮಣ್ಣೂರು ಹೇಳಿದರು. ವಿಜಯ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಪಿ.ಜೆ. ಬಡಾವಣೆಯ ರಾಯರ ಮಠದಲ್ಲಿ ಸೋಮವಾರ ಉಪನ್ಯಾಸ ನೀಡಿದರು. ಪುರಂದರ ದಾಸರ ನಂತರ 80 ವರ್ಷಗಳ ಕಾಲ ಯಾವುದೇ ದಾಸರೂ ಇರಲಿಲ್ಲ. ವಿಜಯ ದಾಸರು ಬಂದ ನಂತರ ದಾಸ ಪರಂಪರೆ ಅವಿಚ್ಛಿನ್ನವಾಗಿ ಮುಂದುವರಿಯಿತು ಎಂದು ತಿಳಿಸಿದರು. ವಿಜಯ ದಾಸರಿಗೆ ದೊಡ್ಡ ಶಿಷ್ಯ ಪರಂಪರೆ ಇದೆ. ಗೋಪಾಲ ದಾಸರು, ಮೋಹನ ದಾಸರು ಅವರ ಸಾಕ್ಷಾತ್ ಶಿಷ್ಯರು. ವಿಜಯ ದಾಸರ ಮಹಿಮೆ ಅಪಾರವಾದುದು. ಹಾಡು, ಕೀರ್ತನೆ, ಉಗಾಭೋಗ, ಕೀರ್ತನೆಗಳನ್ನು ನೋಡಿದಾಗ ಅವರ ಜ್ಞಾನದ ಮಟ್ಟ ತಿಳಿಯುತ್ತದೆ ಎಂದರು. ಮಧ್ವ ಸಿದ್ಧಾಂತದ ಬಗ್ಗೆ ವಿಜಯ ದಾಸರಿಗೆ ಅಪಾರವಾದ ನಿಷ್ಠೆ ಇತ್ತು. ಅವರು ರಚಿಸಿದ ಹಾಡುಗಳಲ್ಲಿ ಮಧ್ವಾಚಾರ್ಯರ ಸಿದ್ಧಾಂತವನ್ನು ಎತ್ತಿ ಹಿಡಿದಿದ್ದಾರೆ. ಜ್ಞಾನದಿಂದ ಭಕ್ತಿ ಬರುತ್ತದೆ, ಮಧ್ವ ಶಾಸ್ತ್ರ ಓದಿದಾಗ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. ವಿಜಯ ದಾಸರು ಸಾಮಾನ್ಯರಲ್ಲ. ಅಪರೋಕ್ಷ ಜ್ಞಾನಿಗಳಾಗಿದ್ದರು. ಅವರು ಉಪಯೋಗಿಸಿದ ಸಾಣೇಕಲ್ಲು, ಬಿಂದಿಗೆ, ತಂಬೂರಿ, ಗೆಜ್ಜೆಗಳು ಇನ್ನೂ ಇವೆ. ಅವರು 30 ವರ್ಷ ಕಡು ಬಡತನ ಅನುಭವಿಸಿದರು, ಅವಮಾನ ಸಹಿಸಿದರು. ಆದರೂ ವಿಚಲಿತರಾಗಲಿಲ್ಲ. ನಂತರದ 40 ವರ್ಷ ಅದ್ಭುತ ಸಾಧನೆ ಮಾಡಿದರು. ಒಟ್ಟು 73 ವರ್ಷ ಅವರ ಜೀವಿತಾವಧಿಯಾಗಿತ್ತು ಎಂದು ಹೇಳಿದರು. ನಮ್ಮ ಮನಸ್ಸು ಭಗವಂತನ ವಿಷಯದಲ್ಲಿ ಎಚ್ಚರವಾಗಿರಬೇಕು. ಹಾಳು ಹರಟೆಯಿಂದ ಕಾಲ ವ್ಯರ್ಥ ಮಾಡಬಾರದು. ಧರ್ಮ, ಜ್ಞಾನ, ಭಕ್ತಿ ಯಿಂದ ಮುಕ್ತಿ ಸಾಧ್ಯ ಎಂದು ದಾಸರು ಪ್ರತಿಪಾದಿಸಿದರು ಎಂದು ತಿಳಿಸಿದರು. ವಿಜಯ ದಾಸರ ಕೃತಿಗಳನ್ನು ಓದಬೇಕು. ಅವರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ನಮ್ಮಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಅವರು ಹೇಳಿದ ಮಾರ್ಗದಲ್ಲಿ ಸಾಗುವ ಮೂಲಕ ಅವರು ಸಂತೋಷ ಪಡುವಂತೆ ಮಾಡಬೇಕು ಎಂದು ತಿಳಿಸಿದರು. ಸಂಸ್ಕೃತ ಪಂಡಿತ ಜಯತೀರ್ಥಾಚಾರ್ ವಡೇರ್ ಮಾತನಾಡಿ, ಶಾಸ್ತ್ರಗಳ ಬಗ್ಗೆ ಅನೇಕರಿಗೆ ಸಂಶಯಗಳಿರುತ್ತವೆ. ಕೆಲವರಿಗೆ ಏನೂ ತಿಳಿದಿರುವುದಿಲ್ಲ. ಅಂಥವರು ಗುರುಗಳ ಸೇವೆ ಮಾಡಬೇಕು. ಭಗವಂತನ ಸಂಕೀರ್ತನೆಯಲ್ಲಿ ತೊಡಗಬೇಕು. ದೇವರಿಗೆ ನಮ್ಮ ಭಕ್ತಿಯ ಮೊರೆ ಕೇಳಿದರೆ ಸಾಕು ಆತ ಕೃಪೆ ತೋರುತ್ತಾನೆ ಎಂದರು. ಜ್ಞಾನಿಗಳ ವಿಚಾರಗಳನ್ನು ಕೇಳಬೇಕು. ನಮ್ಮ ಶಾಸ್ತ್ರಗಳ ಬಗ್ಗೆ ತಿಳಿಯಬೇಕು. ಸಾಧಕರ ಸಾಧನೆಯನ್ನು ಅರಿತು ಅನುಸರಿಸಬೇಕು. ಧರ್ಮ ಮಾರ್ಗದಲ್ಲಿ ಸಾಗಿ, ನಿರಂತರ ಸಾಧನೆ ಮಾಡಬೇಕು ಎಂದು ತಿಳಿಸಿದರು. …
ದಾಸ ಸಾಹಿತ್ಯ ಪುನರುತ್ಥಾನ ಗೊಳಿಸಿದ ವಿಜಯ ದಾಸರು
ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips
ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…
ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips
ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…
Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!
Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…