ಜಿಲ್ಲೆಯಲ್ಲಿ ನಡೆದಿದೆ ಜಾನುವಾರು ಗಣತಿ

blank

ದಾವಣಗೆರೆ  : ರೈತರ ಒಡನಾಡಿಯಾದ ಜಾನುವಾರುಗಳು ದೇಶದ ಸಂಪತ್ತು. ಐದು ವರ್ಷಗಳಿಗೊಮ್ಮೆ ನಡೆಯುವ ಅವುಗಳ ಗಣತಿ ಕಾರ್ಯ ಜಿಲ್ಲೆಯಲ್ಲೀಗ ಪ್ರಗತಿಯಲ್ಲಿದೆ. ಡಿಸೆಂಬರ್‌ನಲ್ಲಿ ಆರಂಭವಾಗಿರುವ ಈ ಪ್ರಕ್ರಿಯೆ ಫೆ. 28ರ ವರೆಗೆ ಮುಂದುವರಿಯಲಿದೆ.  ಜಿಲ್ಲೆಯ 157 ಗಣತಿದಾರರು, 57 ಮೇಲ್ವಿಚಾರಕರು ಜಾನುವಾರು ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿಯೂ ಇರುತ್ತಾರೆ. ಗಣತಿದಾರರು ದಿನಕ್ಕೆ 60-70 ಮನೆಗಳಿಗೆ ಭೇಟಿ ನೀಡುತ್ತಾರೆ. ಅವರ ಮನೆಯಲ್ಲಿ ದನಗಳೆಷ್ಟಿವೆ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ ಇತ್ಯಾದಿ ಮಾಹಿತಿ ಪಡೆಯುತ್ತಾರೆ. ಪ್ರತಿ ಗಣತಿದಾರ 2 ರಿಂದ 3 ಸಾವಿರ ಮನೆಗಳ ಬಾಗಿಲಿಗೆ ಹೋಗಬೇಕಾಗುತ್ತದೆ.  ಅಷ್ಟೇ ಅಲ್ಲದೇ ದೊಡ್ಡ ಜಾನುವಾರುಗಳೆಷ್ಟು, ಕರುಗಳೆಷ್ಟು, ಹಾಲು ಕೊಡುವ ಪ್ರಾಣಿಗಳು ಎಷ್ಟು ಎನ್ನುವ ವಿವರವನ್ನೂ ಪಡೆಯಲಾಗುತ್ತದೆ. ಯಾವ ಬಗೆಯ ಜಾನುವಾರುಗಳಿವೆ, ಅವುಗಳಿಂದ ಆ ಕುಟುಂಬಕ್ಕೆ ಅನುಕೂಲವಾಗಿದೆಯೆ ಎನ್ನುವ ವಿಚಾರ ತಿಳಿಯುತ್ತದೆ.  ಜಾನುವಾರುಗಳ ಸಂಖ್ಯೆ ಮತ್ತು ಉತ್ಪನ್ನಗಳಿಂದ ಬರುವ ಆದಾಯವನ್ನು ದಾಖಲಿಸಲಾಗುತ್ತದೆ. ಆಯಾ ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ. ಅವರ ಉದ್ಯೋಗವೇನು ಎನ್ನುವ ಅಂಶವೂ ಗಣತಿಯ ಭಾಗವಾಗಿರುತ್ತದೆ. ಗಣತಿದಾರರು ಜಿಲ್ಲೆಯ 892 ಹಳ್ಳಿಗಳು, ನಗರ ಪ್ರದೇಶದ ವಾರ್ಡುಗಳಿಗೂ ಹೋಗುತ್ತಾರೆ.  …    (ಬಾಕ್ಸ್)  2019 ರ ಅಂಕಿ ಅಂಶಗಳು  ಜಿಲ್ಲೆಯಲ್ಲಿ 2019 ರಲ್ಲಿ ನಡೆಸಿದ ಜಾನುವಾರು ಗಣತಿಯ ಪ್ರಕಾರ 2.37 ಲಕ್ಷ ದನ ಕರುಗಳು, 91,896 ಎಮ್ಮೆಗಳು, 2.38 ಲಕ್ಷ ಕುರಿಗಳಿದ್ದವು.  ಮೇಕೆಗಳ ಸಂಖ್ಯೆ 79,429, ಹಂದಿಗಳು 2117 ಇದ್ದವು. 1605 ಮೊಲಗಳು, 12,190 ನಾಯಿಗಳು, 25.05 ಲಕ್ಷ ಕೋಳಿಗಳಿದ್ದವು.  …    (ಕೋಟ್)  ಜಾನುವಾರು ಗಣತಿ 5 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹಿಂದೆ 2019 ರಲ್ಲಿ ಜಾನುವಾರು ಗಣತಿ ಆಗಿತ್ತು. ಈಗ ಹೊಸದಾಗಿ ಪ್ರಕ್ರಿಯೆ ನಡೆಯುತ್ತಿದೆ. ಹಿಂದಿನ ಗಣತಿಗೆ ಹೋಲಿಸಿದರೆ ಈ ಬಾರಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದೆಯೆ ಅಥವಾ ಕಡಿಮೆಯಾಗಿದೆಯೆ, ಅವುಗಳ ಉತ್ಪನ್ನಗಳು, ಆರ್ಥಿಕ ಕೊಡುಗೆ ಏನು, ಅವುಗಳನ್ನು ಸಾಕಾಣಿಕೆ ಮಾಡಿದ್ದರಿಂದ ರೈತನಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ ಎನ್ನುವ ಮಾಹಿತಿ ಲಭಿಸುತ್ತದೆ. ಸರ್ಕಾರಗಳು ಯೋಜನೆಗಳನ್ನು ರೂಪಿಸುವಾಗ ಈ ಅಂಕಿ ಅಂಶಗಳು ಸಹಾಯಕವಾಗುತ್ತವೆ. ಇದರ ಆಧಾರದ ಮೇಲೆ ಕಾರ್ಯಕ್ರಮಗಳನ್ನು ರೂಪಿಸಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುತ್ತದೆ.   ಡಾ.ಎಚ್.ಎಂ. ಮಹೇಶ್, ಪಶುಪಾಲನಾ ಇಲಾ

blank
Share This Article

ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು? Health Tips

Health Tips: ನೀವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲ. ಇದು…

ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುತ್ತೀರಾ?ಈ ಅಭ್ಯಾಸ ಬಿಟ್ಟುಬಿಡಿ.. Mobile phone

Mobile phone: ತಜ್ಞರು ಫೋನ್ ಬಳಸುವುದು ಅಪಾಯಕಾರಿ ಎಂದು ಹೇಳುತ್ತಾರೆ. ಇನ್ನೂ ಮುಖ್ಯವಾಗಿ, ಬೆಳಿಗ್ಗೆ ಬೇಗನೆ…