ನಿಯಮ ಉಲ್ಲಂಘಿಸಿದ ಬಡಾವಣೆ ವಿರುದ್ಧ ಕ್ರಮ 

blank

ದಾವಣಗೆರೆ : ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಎಚ್ಚರಿಕೆ    ವಿಜಯವಾಣಿ ಸುದ್ದಿಜಾಲ ದಾವಣಗೆರೆ  ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಡಾವಣೆಗಳಲ್ಲಿ ನಕ್ಷೆಯನ್ನು é ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳಲು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.  ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆವರಗೆರೆ ಗ್ರಾಮದ ಅಂಬಿಕಾ ಬಡಾವಣೆಯ 9 ಎಕರೆ 37 ಗುಂಟೆ ಪ್ರದೇಶದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ತಿಳಿಸಿದರು.  ಅಲ್ಲಿನ ನಾಗರಿಕ ಸೌಲಭ್ಯ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ರೈಲು ಹಳಿಯ ಪಕ್ಕದಲ್ಲಿ ಮನೆಗಳನ್ನು ಕಟ್ಟಿದ್ದಾರೆ. ಇದೊಂದು ಅಕ್ರಮ ಬಡಾವಣೆ ಆಗಿರುವುದರಿಂದ ಇದರ ನಕ್ಷೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.  ಈ ಬಡಾವಣೆಯ ವಿಚಾರವಾಗಿ 2017 ರಲ್ಲಿ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯವಾಗಿತ್ತು. ಅಂತಿಮ ವಿನ್ಯಾಸ ಇನ್ನೂ ಅನುಮೋದನೆಯಾಗಿಲ್ಲ. ಈ ಹಂತದಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.  ಅಕ್ರಮ ಬಡಾವಣೆ ಆಗಿರುವುದರಿಂದ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಇಂಥ ಬಡಾವಣೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ಕಡಿಮೆ ದರಕ್ಕೆ ನಿವೇಶನ ದೊರೆಯುತ್ತದೆ ಎಂಬ ಕಾರಣಕ್ಕೆ ಖರೀದಿಸಿ ತೊಂದರೆಗೆ ಸಿಲುಕಬಾರದು. ಬಡಾವಣೆಯು ನಿಯಮಾನುಸಾರ ಇದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು.  ದಾವಣಗೆರೆ ಮತ್ತು ಹರಿಹರದಲ್ಲಿ ಒಟ್ಟು 21 ವಿವಿಧ ಅಳತೆಯ ನಾಗರಿಕ ಸೌಲಭ್ಯ ನಿವೇಶನಗಳು ಲಭ್ಯವಿದ್ದು, ಸರ್ಕಾರಿ ಕಚೇರಿ ಕಟ್ಟಡಗಳಿಗೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರಾಧಿಕಾರಕ್ಕೆ ರ್ಜಿ ಸಲ್ಲಿಸಬಹುದು ಎಂದು ಮನವಿ ಮಾಡಿದರು.  ದೂಡಾ ಸದಸ್ಯರಾದ ವಾಣಿ ಬಕ್ಕೇಶ್, ಅಬ್ದುಲ್ ಜಬ್ಬಾರ್ ಖಾನ್, ಆಯುಕ್ತ ಹುಲ್ಮನಿ ತಿಮ್ಮಣ್ಣ, ಅಧಿಕಾರಿಗಳಾದ ರವಿ, ದೇವರಾಜ ಇದ್ದರು.  …    (ಬಾಕ್ಸ್)  ಸಿಎ ಸೈಟ್ ಒತ್ತುವರಿ  ಹರಿಹರದ ಗ್ರೀನ್ ಸಿಟಿ ಬಡಾವಣೆಯಲ್ಲಿ ನಾಗರಿಕ ಸೌಲಭ್ಯ ಉದ್ದೇಶಕ್ಕಾಗಿ ಕಾಯ್ದಿರಿಸಿರುವ ಮತ್ತು ಪ್ರಾಧಿಕಾರದ ಮಾಲೀಕತ್ವದಲ್ಲಿರುವ ನಿವೇಶನದಲ್ಲಿ ಅತಿಕ್ರಮಣ ಮಾಡಿ ಅನಧಿಕೃತವಾಗಿ ಪವರ್ ಗ್ರಿಡ್ ನಿರ್ಮಿಸಲಾಗಿದೆ.  ತೆರವುಗೊಳಿಸುವಂತೆ ಎರಡು ನೋಟಿಸ್ ನೀಡಿದ್ದರೂ ಪ್ರತಿಕ್ರಿಯೆ ಬಂದಿಲ್ಲದ ಕಾರಣ ನಿಯಮಾನುಸಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.  …    (ಬಾಕ್ಸ್)  ಹರಿಹರದಲ್ಲಿ ಶಾಖಾ ಕಚೇರಿ  ಪ್ರಾಧಿಕಾರದ ಶಾಖಾ ಕಚೇರಿಯನ್ನು ಹರಿಹರದ ನಗರಸಭೆ ಕಟ್ಟಡದಲ್ಲಿ ಬರುವ ಸೋಮವಾರ ಆರಂಭಿಸಲಾಗುವುದು ಎಂದು ದಿನೇಶ ಶೆಟ್ಟಿ ತಿಳಿಸಿದರು.  ಅಂದು ಬೆಳಗ್ಗೆ 11 ಗಂಟೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ಮಾಡಲಿದ್ದಾರೆ. ಶಾಸಕರು, ನಗರಸಭೆ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹರಿಹರದಲ್ಲೇ ಶಾಖಾ ಕಚೇರಿ ಆರಂಭಿಸುವುದರಿಂದ ಅಲ್ಲಿನ ನಾಗರಿಕರು ದಾವಣಗೆರೆಗೆ ಅಲೆದಾಡುವುದು ತಪ್ಪಲಿದೆ. ಹರಿಹರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.  …    (ಬಾಕ್ಸ್)  ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಯೋಜನೆ  ಬಿಡಿಎ ಮಾದರಿಯಲ್ಲಿ ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ದೂಡಾ ಅಧ್ಯಕ್ಷ ತಿಳಿಸಿದರು.  ಅಲ್ಲಿ ಸುಸಜ್ಜಿತ ಮಾಲ್ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡುವ ಉದ್ದೇಶವೂ ಇದೆ ಎಂದು ಹೇಳಿದರು.  ಹಲವು ವೃತ್ತಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಚಿಂತನೆಯಿದೆ. ಒಟ್ಟು 1226 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶವಿದ್ದು ಅನುದಾನ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.  ನಗರದಲ್ಲಿ ವಸತಿ ನಿವೇಶನಕ್ಕಾಗಿ 24 ಸಾವಿರ ಅರ್ಜಿಗಳು ಪ್ರಾಧಿಕಾರದ ಮುಂದಿವೆ. ರೈತರೊಂದಿಗೆ 50 : 50 ಅನುಪಾತದಲ್ಲಿ ದಾವಣಗೆರೆ ಮತ್ತು ಹರಿಹರದಲ್ಲಿ 100 ಎಕರೆಯಲ್ಲಿ ವಸತಿ ಯೋಜನೆ ಕೈಗೆತ್ತಿಕೊಳ್ಳಲು ಪ್ರಯತ್ನ ನಡೆದಿದೆ. ರೈತರು ಭೂಮಿ ನೀಡಲು ಮುಂದೆ ಬರಬೇಕಿದೆ ಎಂದರು.  ನಗರದ ಹಳೆಯ ಭಾಗದಲ್ಲಿ 5 ಕೋಟಿ ರೂ. ವೆಚ್ಚದ ಉದ್ದೇಶಿತ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ತಿಳಿಸಿದರು.

Share This Article

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…

ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್​ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars

Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…

ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್​ ಮಾಡೋದೆ ಇಲ್ಲ | Health Tips

ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…