ಅಂಬಿ ಮೀಸೆ ಹಿಡಿದು ತಿರುವಿದ ಯಶ್​ ಮಗಳು : ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಅಪ್​ಲೋಡ್​ ಮಾಡಿದ ಸುಮಲತಾ

ಬೆಂಗಳೂರು : ಸಂಸದೆ ಸುಮಲತಾ ಮನೆಗೆ ಚಿತ್ರನಟ ಯಶ್​ ತಮ್ಮ ಪತ್ನಿ ರಾಧಿಕಾ ಪಂಡಿತ್​ ಹಾಗೂ ಮಗಳ ಸಮೇತ ತೆರಳಿ ಮಗಳಿಗೆ ಮನೆಯಲ್ಲಿದ್ದ ಗೊಂಬೆ ತೋರಿಸಿದ್ದಾರೆ.


ತಮ್ಮ ಮನೆಗೆ ನಟ, ಯಶ್​ ಪತ್ನಿ ರಾಧಿಕಾ ಪಂಡಿತ್​ ಹಾಗೂ ಮಗಳು ಬಂದಿರುವುದನ್ನು ಸಮಲತಾ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.


ಯಶ್​ ಮಗಳು ನಮ್ಮ ಮನೆಯಲ್ಲಿದ್ದ ಗೊಂಬೆಗಳನ್ನು ವೀಕ್ಷಿಸಿದ್ದಾಳೆ. ಅಲ್ಲದೆ ತನ್ನ ಅಪ್ಪನ ಜೊತೆ ಫೋಟೋದಲ್ಲಿರುವ ಅಂಬರೀಷ್​ ಮೀಸೆ ಹಿಡಿದು ತಿರುವಿದ್ದಾಳೆ ಎಂದು ಬರೆದುಕೊಂಡಿದ್ದಾರೆ.


ಯಶ್​ ಮಗಳು ಅಂಬರೀಷ್​ ಮೀಸೆ ಹಿಡಿದಿರುವ ಫೋಟೋವನ್ನು ಕೂಡ ಅಪ್​ಲೋಡ್​ ಮಾಡಿದ್ದಾರೆ.

Leave a Reply

Your email address will not be published. Required fields are marked *