ಪಾರ್ವತಮ್ಮನಿಗೆ ನೈಜಘಟನೆಯ ನಂಟು

ಸುಮಲತಾ ಅಂಬರೀಷ್ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರ ಶುಕ್ರವಾರ (ಮೇ 24) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಇದೇ ಮೊದಲ ಬಾರಿಗೆ ತನಿಖಾಧಿಕಾರಿ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಆರಂಭದಿಂದಲೂ ಇದೊಂದು ಕ್ರೖೆಂ ಥ್ರಿಲ್ಲರ್ ಸಿನಿಮಾ ಎಂದಷ್ಟೇ ಹೇಳಲಾಗಿತ್ತಾದರೂ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಈಗ ಆ ಕುರಿತು ಬ್ರೇಕಿಂಗ್ ನ್ಯೂಸ್​ವೊಂದು ಹೊರಬಿದ್ದಿದೆ.

ಕೆಲ ವರ್ಷಗಳ ಹಿಂದೆ ಕರ್ನಾಟಕ ಮತ್ತು ಆಂಧ್ರ ಗಡಿಯಲ್ಲಿ ನಡೆದ ಕ್ರೖೆಂ ಪ್ರಕರಣವೊಂದರ ಸುತ್ತ ಇಡೀ ಸಿನಿಮಾದ ಕಥೆ ಸಾಗಲಿದೆಯಂತೆ. ಆದರೆ, ಆ ಪ್ರಕರಣವೇನು? ಯಾರಿಗೆ ಸಂಬಂಧಿಸಿದ್ದು? ಇತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಇನ್ನು, ‘…ಪಾರ್ವತಮ್ಮ’ನಿಗೆ ಚಿತ್ರಮಂದಿರಗಳ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆಯಂತೆ. ಈಗಾಗಲೇ ರಾಜ್ಯದ 200 ಚಿತ್ರಮಂದಿರಗಳು ಈ ಸಿನಿಮಾಕ್ಕಾಗಿ ಮೀಸಲಾಗಿವೆ. ‘ಆರಂಭದಲ್ಲಿ ನಾವು 150 ಥಿಯೆಟರ್​ಗಳಲ್ಲಿ ರಿಲೀಸ್ ಮಾಡಬೇಕು ಎಂದು ಪ್ಲಾ್ಯನ್ ರೂಪಿಸಿದ್ದೆವು. ಆದರೆ, ನಮ್ಮ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ನೀಡಲು ಮಾಲೀಕರೇ ಮುಂದೆ ಬಂದಿದ್ದಾರೆ. ಹಾಗಾಗಿ, ಆ ಸಂಖ್ಯೆ 200 ತಲುಪಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಶಂಕರ್. ಸ್ಟಾರ್ ಹೀರೋಗಳ ಸಿನಿಮಾಗಳಿಗೆ 150ರಿಂದ 200 ಥಿಯೇಟರ್ ಸಿಗುವುದು ಸಾಮಾನ್ಯ. ಆದರೆ, ಮಹಿಳಾ ಪ್ರಧಾನ ಸಿನಿಮಾವೊಂದಕ್ಕೆ ಇಷ್ಟೊಂದು ಪ್ರಮಾಣದ ಪರದೆಗಳು ಸಿಗುತ್ತಿರುವುದು ನಿರ್ವಪಕರ ಸಂತಸವನ್ನು ಹೆಚ್ಚಿಸಿದೆ. ಇದರ ಜತೆಗೆ, ಚಿತ್ರಕ್ಕಾಗಿ ನಟ ಧನಂಜಯ ಬರೆದಿರುವ ’ಜೀವಕ್ಕಿಲ್ಲಿ ಜೀವ ಬೇಟೆ..’ ಹಾಡನ್ನು ಬಿಬಿಸಿ ರೇಡಿಯೋ ಪ್ರಸಾರ ಮಾಡಿದೆ. ಐಎಂಡಿಬಿ ವೆಬ್​ಸೈಟ್​ನ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘…ಪಾರ್ವತಮ್ಮ’ನಿಗೆ ಎರಡನೇ ಸ್ಥಾನ ಸಿಕ್ಕಿರುವುದು ಮತ್ತೊಂದು ವಿಶೇಷ.

ತಾಯಿ-ಮಗಳಿಗೆ ಸೆಲ್ಪಿ ಸ್ಪರ್ಧೆ!

‘ಡಾಟರ್ ಆಫ್ ಪಾರ್ವತಮ್ಮ’ ತಾಯಿ-ಮಗಳ ಸಂಬಂಧದ ಕುರಿತ ಸಿನಿಮಾವಾಗಿದೆ. ಹಾಗಾಗಿ, ಚಿತ್ರತಂಡ ಸೆಲ್ಪಿ ಸ್ಪರ್ಧೆಯೊಂದನ್ನು ಆಯೋಜಿಸಿದೆ. ತಾಯಿಯ ಜತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಅದನ್ನು ಕಳುಹಿಸಿದರೆ, ಅತ್ಯುತ್ತಮ ಸೆಲ್ಪಿಗೆ ‘..ಪಾರ್ವತಮ್ಮ’ ಬಳಗದಿಂದ ಅಕರ್ಷಕ ಬಹುಮಾನ ಸಿಗಲಿದೆ. ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿಪ್ರಿಯಾ ಮಾಹಿತಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *