ದತ್ತ ವೆಂಕಟೇಶ್ವರ ಸ್ವಾಮಿ 20ನೇ ಬ್ರಹ್ಮೋತ್ಸವ

ಮೈಸೂರು: ನಗರದ ಊಟಿ ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿರುವ ಆರು ದಿನಗಳ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಯ 20ನೇ ಬ್ರಹ್ಮೋತ್ಸವ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 77ನೇ ವರ್ಧಂತ್ಯುತ್ಸವ ಹಾಗೂ ನಾದ ಮಂಟಪದ 21ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ವಿದ್ವಾನ್ ಅಂಬಿ ಸುಬ್ರಹ್ಮಣ್ಯ ಮತ್ತು ವಿದ್ವಾನ್ ಮಹೇಶ್ ರಾಘವನ್ ಹೊರತಂದಿರುವ ‘ಧ್ವನಿ ಮುದ್ರಿಕೆ’ಯನ್ನು ಲೋಕಾರ್ಪಣೆ ಮಾಡಿದರು. ಬಳಿಕ ನಾದನಿಧಿ ಡಾ.ಎಲ್.ಸುಬ್ರಹ್ಮಣ್ಯಂ ಮತ್ತು ತಂಡ ಸಂಗೀತ ಕಾರ್ಯಕ್ರಮ ನೀಡಿತು.

ಇದಕ್ಕೂ ಮುನ್ನ ವೆಂಕಟೇಶ್ವರ ದೇವರ ಮೂರ್ತಿಯನ್ನು ಆಶ್ರಮದ ಆವರಣದಲ್ಲಿ ಮೆರವಣಿಗೆ ಮೂಲಕ ನಾದ ಮಂಟಪಕ್ಕೆ ತಂದು ಪೂಜೆ ಮಾಡಲಾಯಿತು. ಮಚ್ಚಲಿಪಟ್ಟಣದ ಪಂಡಿತರು ಆಗಮಿಸಿ ಬ್ರಹ್ಮೋತ್ಸವದಲ್ಲಿ ವೇದ ಪಠಿಸಿದರು. ಶ್ರೀ ದತ್ತ ವಿಜಯಾನಂದ ತೀರ್ಥಸ್ವಾಮೀಜಿ ಇದ್ದರು.

Leave a Reply

Your email address will not be published. Required fields are marked *