More

  30 ಸಾವಿರ ಕ್ರಿಮಿನಲ್ಸ್‌ಗಳ ಡೇಟಾ ಪೊಲೀಸರ ಸಿಸಿ ಕ್ಯಾಮರಾದಲ್ಲಿ; ಏನಿದು ಸೇಫ್ ಸಿಟಿ

  Must Read

  ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುವ ಸಮಾಜಘಾತುಕ ಶಕ್ತಿಗಳ ಮೇಲೆ ಬೆಂಗಳೂರು ನಗರ ಪೊಲೀಸರ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಯಾಮರಾಗಳು ನಿಗಾ ವಹಿಸಲಿವೆ. 3 ಸಾವಿರ ಸ್ಥಳಗಳಲ್ಲಿ 7,500 ಕ್ಯಾಮರಾಗಳು ಅಳವಡಿಸಿದ್ದು, 30 ಸಾವಿರ ಅಪರಾಧ ಹಿನ್ನೆಲೆಯುಳ್ಳರ ಮೇಲೆ ಹದ್ದಿನ ಕಟ್ಟಿದ್ದಾರೆ.

  ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇಫ್ ಸಿಟಿ ಯೋಜನೆ (ನಿರ್ಭಯ ನಿಧಿ) 2ನೇ ಹಂತ ಅನುಷ್ಠಾನ ಮಾಡುವಲ್ಲಿ ಬೆಂಗಳೂರು ನಗರ ಪೊಲೀಸರು ಅಂತಿಮ ಹಂತದಲ್ಲಿ ಇದ್ದಾರೆ. ಇದರ ಭಾಗವಾಗಿ ನಗರದ ಅಲಿ ಅಸ್ಕರ್ ರಸ್ತೆಯಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಕಮಾಂಡ್ ಸೆಂಟರ್ ನಿರ್ಮಿಸಲಾಗಿದೆ.
  ಪೊಲೀಸ್ ಆಯುಕ್ತ ಕಚೇರಿ ಕಟ್ಟಡದಲ್ಲಿದ್ದ ನಮ್ಮ-112 ಮತ್ತು ಸಿಸಿ ಕ್ಯಾಮರಾ ನಿಗಾ ಘಟಕವನ್ನು ಹೊಸ ಕಮಾಂಡ್ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ. 2ನೇ ಹಂತದಲ್ಲಿ 4 ಸಾವಿರ ಅತ್ಯಾಧುನಿಕ ಕ್ಯಾಮರಾ, 20 ಸೇಫ್ಟಿ ಐಲ್ಯಾಂಡ್, ಡ್ರೋನ್, ಬಾಡಿವೋರ್ನ್ ಕ್ಯಾಮರಾ ಖರೀದಿಸಲಾಗುತ್ತಿದೆ.
  ಡಿಸೆಂಬರ್ ಅಂತ್ಯಕ್ಕೆ 3 ಸಾವಿರ ಸ್ಥಳಗಳಲ್ಲಿ 6300 ಸ್ಥಿರ ಕ್ಯಾಮರಾ, 800 ಪಿಟಿಜಡ್ ಕ್ಯಾಂರಾ, 400 ಹೈ ರೆಸಲೂಷನ್ ಕ್ಯಾಮರಾ ಅಳವಡಿಕೆ ಪೂರ್ಣವಾಗಿದೆ.

  ಇವು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಯಾಮರಾಗಳು ಆಗಿದ್ದು, ಪೊಲೀಸ್ ಐಟಿ ಮತ್ತು ಹಳೆಯ 30 ಸಾವಿರ ಆರೋಪಿಗಳ ಡೇಟಾವನ್ನು ಸಂಯೋಜನೆ ಮಾಡಲಾಗಿದೆ. ಆಫ್ಟಿಕಲ್ ಕೇಬಲ್ ಆಧಾರಿತ ನೆಟ್‌ವರ್ಕ್, ವಿಡಿಯೋ ವಾಲ್ ರೂಮ್‌ನಲ್ಲಿ ಲೈವ್ ಮತ್ತು ರೆಕಾರ್ಡಿಂಗ್ ಆಗಲಿದೆ.
  ಕಮಾಂಡ್ ಸೆಂಟರ್‌ನಲ್ಲಿ ಕುಳಿತು 30 ಸಾವಿರ ಸ್ಥಳಗಳ ಮೇಲೆ ನಿಗಾ ವಹಿಸಲಾಗಿದೆ. ಡೇಟಾ ಬೇಸ್‌ನಲ್ಲಿ ಇರುವ 30 ಸಾವಿರ ಕ್ರಿಮಿನಲ್‌ಗಳು ಏನಾದರೂ ಓಡಾಡಿದ್ದರೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಹಾಯದಿಂದ ಮುಖ ಚಹರೆ ಗುರುತು ಮಾಹಿತಿ ನೀಡಲಿದೆ. ಕ್ಯಾಮರಾಗಳಲ್ಲಿ ಜಿಐಎಸ್(ಜಿಯೋಗ್ರಾಫಿಕಲ್ ಇನ್‌ರ್ಮಮೇಷನ್ ಸಿಸ್ಟಮ್) ಅಳವಡಿಸಲಾಗಿದೆ. ನಮ್ಮ-112ಗೆ ಸಹಾಯ ಕೋರಿ ಕರೆ ಮಾಡಿದರೇ ಅವರ ಲೋಕೇಷನ್ ಸಮೇತ ಮಾಹಿತಿ ಸಿಗಲಿದೆ. ತಕ್ಷಣ ಕಮಾಂಡ್ ಸೆಂಟರ್ ಸಿಬ್ಬಂದಿ ಸಂತ್ರಸ್ತರ ಹತ್ತಿರ ಇರುವ ಹೊಯ್ಸಳ, ಗಸ್ತು ಪೊಲೀಸರಿಗೆ ಮಾಹಿತಿ ರವಾನೆ ಮಾಡಿ ಲೋಕೇಷನ್ ನೀಡಲಿದ್ದಾರೆ.

  ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಸಿ ಕ್ಯಾಮರಾ ವೀಕ್ಷಣೆಯನ್ನು 112 ಸ್ಟೇಷನ್‌ಗಳಲ್ಲಿ ಮತ್ತು 8 ಡಿಸಿಪಿ ಕಚೇರಿ ಮತ್ತು 8 ಹೆಚ್ಚುವರಿ ವೀಕ್ಷಣಾ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಈ ಎಲ್ಲ ಮಾಹಿತಿ ಕಮಾಂಡ್ ಸೆಂಟರ್‌ಗೆ ಸಿಗಲಿದೆ. 30 ದಿನಗಳ ಡೇಟಾವನ್ನು ಸಂಗ್ರಹ ಮಾಡಲಾಗುತ್ತದೆ. ಅಪರಾಧ ಕೃತ್ಯಗಳು ಮತ್ತು ಪುರಾವೆಗೆ ಬೇಕಾದ ಡೇಟಾವನ್ನು 60 ದಿನಗಳ ಕಾಲ ಸಂಗ್ರಹ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಯಾವ ಏರಿಯಾದಲ್ಲಿ ಯಾವ ಕ್ರೈಂ ಹೆಚ್ಚು ? :

  ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣ ಮತ್ತು ಸೋಷಿಯಲ್ ಡೆಮೋಗ್ರಾಫಿಕ್ ಇಂಟೆಲಿಜೆನ್ಸ್ ಸಹಾಯದಿಂದ ಅಪರಾಧ ಮತ್ತು ಅಪರಾಧ ಸ್ಥಳಗಳನ್ನು ವಿಶ್ಲೇಷಣೆ ಮಾಡಲಿದೆ. ಅಂದರೇ ನಮ್ಮ-112ಗೆ ಬರುವ ಕರೆಗಳು ಮತ್ತು ಸಿಸಿ ಕ್ಯಾಮರಾಗಳಲ್ಲಿ ಸೆರೆ ಆಗುವ ಅಪರಾಧ ಕೃತ್ಯಗಳನ್ನು ವಿಶ್ಲೇಷಣೆ ಮಾಡಲಿದೆ. ಸರ ಕಳ್ಳತನ, ಲೈಂಗಿಕ ದೌರ್ಜನ್ಯ, ಸುಲಿಗೆ ಯಾವ ಸ್ಥಳದಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿವೆ. ಅಲ್ಲಿನ ಪರಿಸ್ಥಿತಿ ಏನು ಎಂಬುದನ್ನು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಹಾಯದಿಂದ ಡೇಟಾ ಸಿದ್ದವಾಗಿ ಪೊಲೀಸರಿಗೆ ಸಿಗಲಿದೆ.

  ಸೇಫ್ಟಿ ಐಲ್ಯಾಂಡ್ :

  ಮಹಿಳೆಯರ ಸುರಕ್ಷತೆ ಸಲುವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಬಸ್ ನಿಲ್ದಾಣ, ಶಾಲಾ ಕಾಲೇಜು ಸಮೀಪ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸೇಫ್ಟಿ ಐಲ್ಯಾಂಡ್ ಸ್ಥಾಪಿಸಲಾಗಿದೆ. ತುರ್ತು ಸೇವೆ ಅಗತ್ಯ ಇರುವರು ನೇರ ಬಟನ್ ಒತ್ತಿದರೇ ಸಾಕು, ಕಮಾಂಡ್ ಸೆಂಟರ್ ಸಿಬ್ಬಂದಿಗೆ ಸಂಪರ್ಕ ಸಿಗಲಿದೆ. ಕಮಾಂಡ್ ಸೆಂಟರ್‌ನಿಂದಲೇ ಕ್ಯಾಮರಾದಲ್ಲಿ ಸಂತ್ರಸ್ತರನ್ನು ವೀಕ್ಷಣೆ ಮಾಡುತ್ತಾ ಅವರಿಗೆ ಅಗತ್ಯ ಇರುವ ತುರ್ತು ಸೇವೆಯನ್ನು ಕಲ್ಪಿಸಲಾಗುತ್ತದೆ. ಮೊದಲ ಹಂತದಲ್ಲಿ 30 ಕಡೆ ಸ್ಥಾಪಿಸಲಾಗಿತ್ತು. ಇದೀಗ 50 ಕಡೆ ಸೇಫ್ಟಿ ಐಲ್ಯಾಂಡ್ ನಿರ್ಮಾಣ ಮಾಡಲಾಗಿದೆ.

  ನಗರದ ಅಲಿ ಅಸ್ಕರ್ ರಸ್ತೆಯಲ್ಲಿ ನಿರ್ಮಾಣ ಆಗಿರುವ ಬೆಂಗಳೂರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡವನ್ನು ಶುಕ್ರವಾರ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದರು. ಗೃಹ ಸಚಿವ ಡಾ.ಜಿ. ಪರಮೇಶ್ವರ ಭಾಗವಹಿಸಿದ್ದರು.

  ಅಪರಾಧ ಹಿನ್ನೆಲೆಯುಳ್ಳವರು, ಶಂಕಾಸ್ಪದ ವ್ಯಕ್ತಿಗಳ ಮೇಲೆ ಆರ್ಟಿಫಿಷಿಯಲ್ ಕ್ಯಾಮರಾಗಳೇ ನಿಗಾ ವಹಿಸಲಿವೆ. ಧರಿಸುವ ಬಟ್ಟೆ, ಬಳಸುವ ವಾಹನ, ಮುಖ ಚಹರೆ ಎಲ್ಲವೂ ಕ್ಷಣಾರ್ಧದಲ್ಲಿ ಸಿಗಲಿದೆ.
  ರಮಣ ಗುಪ್ತಾ- ಹೆಚ್ಚುವರಿ ಪೊಲೀಸ್ ಆಯುಕ್ತ

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ೇ ಸಿಟಿ ಯೋಜನೆಯಡಿ(ನಿರ್ಭಯ ನಿಧಿ) 661 ಕೋಟಿ ರೂ. ವೆಚ್ಚದಲ್ಲಿ ಕಮಾಂಡ್ ಸೆಂಟರ್, ಸಿಸಿ ಕ್ಯಾಮರಾ, ಅತ್ಯಾಧುನಿಕ ಉಪಕರಣಗಳ ಖರೀದಿ ಮಾಡಲಾಗಿದೆ.
  ಬಿ. ದಯಾನಂದ್-ನಗರ ಪೊಲೀಸ್ ಆಯುಕ್ತ

  30 ಸಾವಿರ ಕ್ರಿಮಿನಲ್ಸ್‌ಗಳ ಡೇಟಾ ಪೊಲೀಸರ ಸಿಸಿ ಕ್ಯಾಮರಾದಲ್ಲಿ; ಏನಿದು ಸೇಫ್ ಸಿಟಿ
  - Advertisement -spot_img
  - Advertisement -spot_img

  Latest News

  ವಿಕಸಿತ ಭಾರತಕ್ಕಾಗಿ; ಪ್ರಬಲ ಜನಾದೇಶ

  ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ಚುರುಕು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದು, ಮುಂದಿನ 100 ದಿನಗಳ ಕಾಲ...
  - Advertisement -spot_img

  More Articles Like This

  - Advertisement -spot_img