10ರಿಂದ ದಸರಾ ಸಾಂಸ್ಕೃತಿಕ ಉತ್ಸವ

ಮಹಾಲಿಂಗಪುರ: ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ 28ನೇ ವರ್ಷದ ದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಅ.10 ರಿಂದ 18ರವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಎಸ್. ಅಂಬಿ ಹೇಳಿದರು.

ಗದಗದ ಪುಟ್ಟರಾಜ ಗವಾಯಿಗಳ ಪರಮ ಶಿಷ್ಯರಾದ ಪುರಾಣ ಪ್ರವೀಣ ಮಹಾಲಿಂಗ ಶಾಸ್ತ್ರಿಗಳಿಂದ ನಿತ್ಯ ಸಂಜೆ 7 ರಿಂದ 8 ಗಂಟೆಗೆ ದೇವಿ ಪುರಾಣ ಪ್ರವಚನ ನಡೆಯಲಿದೆ. ವೀರೇಶ್ವರ ಪುಣ್ಯಾಶ್ರಮ ಗದಗ- ದಾವಣಗೆರೆಯ ಆನಂದ ಕುಮಾರ ಪಾಟೀಲ ಮತ್ತು ಬೆಂಗಳೂರಿನ ಷಣ್ಮುಖಯ್ಯ ಲಕ್ಕುಂಡಿ ಇವರಿಂದ ಸಂಗೀತ ಸೇವೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

10ರಂದು ಸ್ಥಳೀಯ ಕಲಾವಿದೆ ರೂಪಾ ಯಾದವಾಡ ತಂಡದಿಂದ ಸಂಗೀತ ಮತ್ತು ಭರತನಾಟ್ಯ, 11ರಂದು ಬೆಂಗಳೂರಿನ ಆಕಾಶವಾಣಿ ದೂರದರ್ಶನದ ಕಲಾವಿದ ವಿದ್ವಾನ್ ಗಣೇಶ ಕೆ.ಎಸ್. ಇವರಿಂದ ಕೊಳಲು ವಾದನ, 12ರಂದು ಸರಿಗಮಪ ಕಲಾವಿದ ಸುಹಾನ್ ಸೈಯದ್​ರಿಂದ ಸುಗಮ ಸಂಗೀತ, 13ರಂದು ದೂರದರ್ಶನ ಕಲಾವಿದ ಮಹಿಬೂಬ್ ಹರ್ಲಾಪುರ ಸುಗಮ ಸಂಗೀತ, 14ರಂದು ಮಹಾಲಿಂಗಪುರ ಕಲಾ ಚೇತನ ಬಳಗದಿಂದ ಜನಪದ ಸಂಗೀತ, 15ರಂದು ಕೋತಬಾಳದ ಅರುಣೋದಯ ಕಲಾತಂಡದಿಂದ ಜನಪದ ವೈವಿಧ್ಯ ನೃತ್ಯ, 16ರಂದು ಗೋಕಾಕದ ಕಾಮಿಡಿ ಕಿಲಾಡಿ ಕಲಾವಿದ ಪ್ರವೀಣ ಕುಮಾರ ಗಸ್ತಿ ಅವರಿಂದ ಹಾಸ್ಯ ಸಂಜೆ, 17ರಂದು ದೂರದರ್ಶನ ಕಲಾವಿದ ಶ್ರೀರಾಮ ಕಾಸರ ಹಾಗೂ ಸಂಗಡಿಗರಿಂದ ಸುಗಮ ಸಂಗೀತ, 18ರಂದು ಸ್ಥಳೀಯ ಪ್ರತಿಭೆ ರವೀಂದ್ರ ಸೋರಗಾಂವಿ ಅವರಿಂದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಮಾಜದ ಹಿರಿಯರಾದ ಡಾ.ಬಿ.ಡಿ. ಸೋರಗಾಂವಿ, ಗುರುನಾಥ ಜಮಖಂಡಿ, ಜಿ.ಎಸ್. ಗೊಂಬಿ, ಗುರುಪಾದ ಅಂಬಿ, ಶ್ರೀಶೈಲಪ್ಪ ಬಾಡನವರ, ಶ್ರೀಶೈಲಪ್ಪ ಬಾಡನವರ, ನಾರಾಯಣ ಕಿರಗಿ, ಲಕ್ಕಪ್ಪ ಚಮಕೇರಿ, ಸಿದಗಿರೆಪ್ಪ ಕಾಗಿ, ಈಶ್ವರ ಚಮಕೇರಿ, ಬಿ.ಸಿ. ಪೂಜೇರಿ, ಮಲ್ಲಪ್ಪ ಭಾವಿಕಟ್ಟಿ, ಮಹಾದೇವ ಹುಣಶ್ಯಾಳ, ಸಂಜು ಅಂಬಿ, ಸತೀಶ ಸೋರಗಾಂವಿ, ಸುನೀಲ ಜಮಖಂಡಿ ಮತ್ತಿತರರಿದ್ದರು.