More

  ‘ದಸರಾ’ ಟೀಸರ್ ಬಿಡುಗಡೆ ಮಾಡಿದ ರಕ್ಷಿತ್​ ಶೆಟ್ಟಿ; ಮಾಸ್​ ಲುಕ್​ನಲ್ಲಿ ನಾನಿ

  ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಸಾಯಿಪಲ್ಲವಿ ಅಭಿನಯದ ‘ಗಾರ್ಗಿ’ ಚಿತ್ರದ ಟೀಸರ್​ ಬಿಡುಗಡೆ ಮಾಡಿದ್ದರು ರಕ್ಷಿತ್​ ಶೆಟ್ಟಿ. ಆ ನಂತರ ‘ಪೊನ್ನಿಯನ್​ ಸೆಲ್ವನ್​’ ಕನ್ನಡ ಅವತರಣಿಕೆಯ ಟ್ರೇಲರ್​ ರಿಲೀಸ್​ ಮಾಡಿದ್ದೂ ಅವರೇ. ಈಗ ರಕ್ಷಿತ್ ಇನ್ನೊಂದು ಪರಭಾಷಾ ಚಿತ್ರದ ಕನ್ನಡ ಅವತರಣಿಕೆಯ ಟೀಸರ್​ ಬಿಡುಗಡೆ ಮಾಡಿದ್ದಾರೆ. ಅದೇ ‘ದಸರಾ’.

  ಇದನ್ನೂ ಓದಿ: ಇನ್ಮುಂದೆ ರಜನಿಕಾಂತ್​ ಹೆಸರು, ಫೋಟೋ, ಧ್ವನಿ ಬಳಸುವಂತಿಲ್ಲ … ಅನುಕರಣೆ ಮಾಡುವಂತಿಲ್ಲ

  ‘ನ್ಯಾಚುರಲ್ ಸ್ಟಾರ್’ ನಾನಿ ಮೊದಲ ಬಾರಿಗೆ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ‘ದಸರಾ’, ಪ್ಯಾನ್​ ಇಂಡಿಯಾ ಸಿನಿಮಾ ಆಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟೀಸರ್​ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

  ತೆಲುಗು ಅವತರಣಿಕೆಯ ಟೀಸರ್​ನ್ನು ಸ್ಟಾರ್ ನಿರ್ದೇಶಕ ಎಸ್​.ಎಸ್. ರಾಜಮೌಳಿ ಬಿಡುಗಡೆ ಮಾಡಿದರೆ, ಕನ್ನಡದ್ದನ್ನು ರಕ್ಷಿತ್​ ಅನಾವರಣಗೊಳಿಸಿದ್ದಾರೆ. ಇನ್ನು, ಶಾಹೀದ್​ ಕಪೂರ್​, ಧನುಷ್​ ಮತ್ತು ದುಲ್ಕರ್​ ಸಲ್ಮಾನ್​, ಹಿಂದಿ, ತಮಿಳು ಮತ್ತು ಮಲಯಾಳಂ ಟೀಸರ್​ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

  ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುವ ದಸರಾ ಹಬ್ಬವನ್ನು ಭಾರತದಾದ್ಯಂತ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಅದರಂತೆ ‘ದಸರಾ’ ಚಿತ್ರವೂ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುದಕ್ಕೆ ಟೀಸರ್ ತುಣುಕು ಸಾಕ್ಷಿಯಾಗಿದೆ.

  ಇದನ್ನೂ ಓದಿ: ‘ಪಠಾಣ್​’ ಯಶಸ್ಸು: ಈ ದೇಶ ಯಾವತ್ತೂ ಖಾನ್​ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದ ಕಂಗನಾ ರಣಾವತ್​

  ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ನಾನಿಗೆ ನಾಯಕಿಯಾಗಿ ಕೀರ್ತಿ ಸುರೇಶ್​ ಇದ್ದಾರೆ. ಕನ್ನಡದ ದೀಕ್ಷಿತ್​ ಶೆಟ್ಟಿ, ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸುಧಾಕರ್ ಚೆರುಕುರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಂತೋಷ್​ ನಾರಾಯಣ್​ ಸಂಗೀತ ಸಂಯೋಜಿಸುತ್ತಿದ್ದಾರೆ.

  See also  ಫ್ರಾನ್ಸ್​ನ ಥ್ರೀ ಕಾಂಟಿನೆಂನ್ಟ್ಸ್​ ಫೆಸ್ಟಿವಲ್​ನಲ್ಲಿ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ'ಗೆ ಪ್ರಶಸ್ತಿ

  ದಾರಿ ತಪ್ಪಿದ್ದ ರಜನಿಕಾಂತ್​ ಬದಲಾಗಿದ್ದು ಯಾರಿಂದ ಗೊತ್ತಾ? ಅವರೇ ಹೇಳಿದ್ದಾರೆ ಕೇಳಿ …

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts