
ಯಲಬುರ್ಗಾ: ಜೀವನದಲ್ಲಿ ಬರುವ ವಿಪತ್ತನ್ನು ಪರಿಹರಿಸಿಕೊಳ್ಳಲು ಆಪತ್ಕಾಲದ ರಕ್ಷಕನನ್ನು ಸದಾ ಸ್ಮರಿಸಬೇಕೆಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಗದಗ ವಿಭಾಗೀಯ ಸಂಚಾಲಕಿ ರಾಜಯೋಗಿನಿ ಜಯಂತಿ ಅಕ್ಕ ಹೇಳಿದರು.
ಇದನ್ನೂ ಓದಿ: ಬ್ರಹ್ಮಾವರ ಆಕಾಶವಾಣಿ ಕೇಂದ್ರ ಜಾಗದಲ್ಲಿ ಕೊಳಚೆ ನೀರು
ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿನಿತ್ಯ ಬಾಬಾನ ಸ್ಮರಣೆ ಮಾಡುವುದರಿಂದ ನಕರಾತ್ಮಕತೆ ನಮ್ಮಿಂದ ದೂರಾಗುತ್ತದೆ. ಬದುಕಿನಲ್ಲಿ ಸನ್ನಢತೆ, ಸಂಸ್ಕಾರ ಬೆಳೆಸಿಕೊಂಡರೆ ಅಸುರ ಶಕ್ತಿ ನಮ್ಮನ್ನು ಪ್ರವೇಶಿಸುವುದಿಲ್ಲ.
ಹೀಗಾಗಿ ಸತ್ಸಂಗ, ಸತ್ಕರ್ಮಗಳ ಸಂಗದಲ್ಲಿ ನಾವು ಇರಬೇಕಾಗಿದೆ. ಯಾವ ಬೀಜ ಬಿತ್ತುತ್ತೆವೆಯೋ ಅದೇ ಫಲ ದೊರಕುತ್ತದೆ. ಒಮ್ಮೆ ಹುಟ್ಟಿದ ಜನ್ಮ ಮತ್ತೆ ಬರುವುದಿಲ್ಲ. ಎಷ್ಟು ದಿನ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲ. ಬದುಕಿನ ಅವಧಿಯಲ್ಲಿ ನಾವು ಹೇಗೆ ಇದ್ದೇವೆ ಎನ್ನುವುದು ಮುಖ್ಯ. ಮಾನವ ಜನ್ಮ ದೊಡ್ಡದು ಅದನ್ನು ಸಾರ್ಥಕ ಪಡಿಸಿಕೊಳ್ಳೊಣ. ದಾಸವರೇಣ್ಯರು ಹೇಳಿದ ಮಾತನ್ನು ಪರಿಪಾಲಿಸಿರಿ ಎಂದರು.
ಸ್ಥಳೀಯ ಸಂಚಾಲಕಿ ಗೀತಾ ಅಕ್ಕ, ಪ್ರಮುಖರಾದ ಶ್ವೇತಾ ಅಕ್ಕ, ಸಿದ್ದಯ್ಯ ಕಣ್ಣೂರು, ಚಂದ್ರು ಮಸಬಹಂಚಿನಾಳ, ನಿಂಗಪ್ಪ ಯರಾಶಿ,ಫಕೀರಪ್ಪ ಗಾಣಗೇರ, ರುದ್ರಗೌಡ ಗೋಣಿ, ರವಿ ಸಂಶಿ, ವೀರಣ್ಣ ನಿಂಗೋಜಿ ಇತರರಿದ್ದರು.