ದಸರಾ ಜಂಬೂಸವಾರಿ ಮುನ್ನವೇ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಪರಮೇಶ್ವರ್

ಮೈಸೂರು: ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಿರ್ಹಸಲ್‌ ಹೆಸರಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ.

ಪ್ರತೀ ವರ್ಷ ಜಂಬೂಸವಾರಿ ವೇಳೆ ಮಾತ್ರ ನಂದಿಧ್ವಜ ಪೂಜೆ ಮತ್ತು ಗಜಪಡೆಗೆ ಪುಷ್ಪಾರ್ಚನೆ ಮಾಡುವುದು ವಾಡಿಕೆ. ಜಂಬೂ ಸವಾರಿ ವೇಳೆ ಮುಖ್ಯಮಂತ್ರಿ ಪೂಜೆ ಸಲ್ಲಿಸುತ್ತಿದ್ದರು. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕವೇ ಜಂಬೂಸವಾರಿ ಆರಂಭವಾಗುತ್ತಿತ್ತು.

ಆದರೆ ಈ ಬಾರಿ ಮಾತ್ರ ರಿಹರ್ಸಲ್‌ ಹೆಸರಿನಲ್ಲಿ ಇಂದು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಡಿಸಿಎಂ, ಗಜಪಡೆಗೆ ಪುಷ್ಪಾರ್ಚನೆ ನೇರವೇರಿಸಿದ್ದಾರೆ. ಜನರೇ ಇಲ್ಲದಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಾಗಿ ಜಂಬೂ ಸವಾರಿ ರಿರ್ಹಸಲ್ ನಡೆಸಲಾಯಿತು. (ದಿಗ್ವಿಜಯ ನ್ಯೂಸ್)