ದಸರಾ ಹಬ್ಬಕ್ಕೆ ವಿಶೇಷ ರೈಲು ಸೌಲಭ್ಯ

ಬೆಳಗಾವಿ: ದಸರಾ ಪ್ರಯುಕ್ತ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಆದೇಶದ ಮೇರೆಗೆ ನೈಋತ್ಯ ರೈಲ್ವೆ ವಲಯವು ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಸುವಿಧಾ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

ಸುವಿಧಾ ಸ್ಪೆಷಲ್ ರೈಲು (ಸಂಖ್ಯೆ: 82661/82662) ಯಲಹಂಕ, ಕಲಬುರಗಿ ಮಧ್ಯೆ ಸಂಚರಿಸಲಿದೆ. ಯಲಹಂಕದಿಂದ ಅ. 4, 7ರಂದು ಸಂಜೆ 5ಕ್ಕೆ ಹೊರಟು ಮರುದಿನ ಬೆಳಗ್ಗೆ 4.20ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಅ.5, 8ರಂದು ರಾತ್ರಿ 8.30ಕ್ಕೆ ಹೊರಟು, ಮಾರನೇ ದಿನ ಬೆಳಗ್ಗೆ 8.40ಕ್ಕೆ ಯಲಹಂಕ ತಲುಪಲಿದೆ.

ಬೆಂಗಳೂರು-ಕಾರವಾರ: ಅ.7ರಂದು ರಾತ್ರಿ 11.55ಕ್ಕೆ ಬೆಂಗಳೂರಿನಿಂದ ಹೊರಡುವ ಸುವಿಧಾ ವಿಶೇಷ ರೈಲು (ಸಂಖ್ಯೆ: 82665) 8ರಂದು ಮಧ್ಯಾಹ್ನ 3ಕ್ಕೆ ಕಾರವಾರ ತಲುಪಲಿದೆ. 5ರಂದು ಸಂಜೆ 5ಕ್ಕೆ
ಕಾರವಾರದಿಂದ ಹೊರಡುವ ರೈಲು (ಸಂಖ್ಯೆ: 82666) 6ರಂದು ಬೆಳಗ್ಗೆ 8ಕ್ಕೆ ಯಲಹಂಕ ತಲುಪಲಿದೆ. ಅ.4ರಂದು 10.20ಕ್ಕೆ ಹೊರಡುವ ರೈಲು (ಸಂಖ್ಯೆ:82655) 5ರಂದು ಮಧ್ಯಾಹ್ನ 2.30ಕ್ಕೆ ಕಾರವಾರ ತಲುಪಲಿದೆ. 8ರಂದು ಸಂಜೆ 5.15ಕ್ಕೆ ಕಾರವಾರದಿಂದ ಹೊರಡುವ ರೈಲು (ಸಂಖ್ಯೆ:82656) 9ರಂದು ಬೆಳಗ್ಗೆ 8ಕ್ಕೆ ಯಲಹಂಕ ತಲುಪಲಿದೆ.

Leave a Reply

Your email address will not be published. Required fields are marked *