ಯುವ ದಸರಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ

ಮೈಸೂರು: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಈಗಾಗಲೇ ಅದೆಷ್ಟೋ ಸಂದರ್ಭಗಳಲ್ಲಿ ಕಣ್ಣೀರು ಹಾಕಿದ್ದಾರೆ. ಹಾಗೇ ಮೈಸೂರು ದಸರಾ ಮಹೋತ್ಸವದ ವೇಳೆ ಕೂಡ ಅತ್ತಿದ್ದಾರೆ.

ಯುವ ದಸಾರ ಕಾರ್ಯಕ್ರಮದಲ್ಲಿ ವಿಜಯ್​ ಪ್ರಕಾಶ್​ ಹಾಡು ಕೇಳಿ ಕಣ್ಣೀರು ಹಾಕಿದ್ದಾರೆ. ಒಳಿತು ಮಾಡು ಮನುಷಾ, ನೀ ಇರೋದು ಮೂರು ದಿವಸಾ ಹಾಡು ಕೇಳಿದ ಎಚ್​ಡಿಕೆ ಭಾವುಕರಾಗಿದ್ದಾರೆ.

ಗಾಯಕರಾದ ವಿಜಯ್​ ಪ್ರಕಾಶ್​ ಮತ್ತು ರಕ್ಷಿತ್​ ಜತೆಯಾಗಿ ಈ ಹಾಡಿದ್ದು, ಅದನ್ನು ಕೇಳುತ್ತಲೇ ಮುಖ್ಯಮಂತ್ರಿ ಗದ್ಗದಿತರಾಗಿದ್ದಾರೆ. ಹಾಡು ಮುಗಿದ ಬಳಿಕ ಕುಳಿತಲ್ಲಿಂದಲೇ ವಿಜಯ್​ ಪ್ರಕಾಶ್ ಅವರಿಗೆ ಕೈ ಮುಗಿದಿದ್ದಾರೆ.