ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ಗಜಪಡೆಯ ಆಕರ್ಷಣೆ ‘ದ್ರೋಣ’ ಇನ್ನಿಲ್ಲ

ಮೈಸೂರು: ವಿಶ್ವವಿಖ್ಯಾತ ದಸರಾ ವೈಭವದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂ ಸವಾರಿಯ ಗಜಪಡೆಯಲ್ಲಿ ಒಬ್ಬನಾದ ‘ ದ್ರೋಣ ‘(37) ಮೃತಪಟ್ಟು ಜಂಬೂ ಸವಾರಿ ಪ್ರಿಯರಿಗೆ ಆಘಾತವಾಗಿದೆ.

ಕೊಡಗು ಜಿಲ್ಲೆಯ ತಿತಿಮತಿ ವಲಯದ ಮತ್ತಿಗೋಡು ಆನೆ ಶಿಬಿರದಲ್ಲಿ ದ್ರೋಣನನ್ನು ಪೋಷಿಸಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದ್ರೋಣ ನೀರು ಕುಡಿಯಲು ಹೋದಾಗ ಟ್ಯಾಂಕ್​ ಬಳಿ ಕುಸಿದು ಬಿದ್ದಿದ್ದ, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ವೈದ್ಯ ಮುಜೀಬ್ ರೆಹಮಾನ್‌ರೊಂದಿಗೆ ಆಗಮಿಸಿ ಚಿಕಿತ್ಸೆ ನೀಡಿದಾದರೂ ಫಲಕಾರಿಯಾಗದೆ ಸಾವಿಗೀಡಾಗಿದೆ.

2006ರಲ್ಲಿ ಹಾಸನ ಜಿಲ್ಲೆಯಲ್ಲಿ ದ್ರೋಣನನ್ನು ಸೆರೆ ಹಿಡಿಯಲಾಗಿತ್ತು. ಬಳಿಕ ಮತ್ತಿಗೋಡು ಶಿಬಿರದಲ್ಲಿ ದಷ್ಟಪುಷ್ಟವಾಗಿ ಬೆಳೆದಿದ್ದ ದ್ರೋಣ 2017 ಹಾಗೂ 2018ರಲ್ಲಿ ದಸರಾದಲ್ಲಿ ಪಾಲ್ಗೊಂಡಿದ್ದ. (ದಿಗ್ವಿಜಯ ನ್ಯೂಸ್​)

2 Replies to “ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ಗಜಪಡೆಯ ಆಕರ್ಷಣೆ ‘ದ್ರೋಣ’ ಇನ್ನಿಲ್ಲ”

Leave a Reply

Your email address will not be published. Required fields are marked *