ವಿಡಿಯೋ ಕಾಲ್​ನಲ್ಲಿ ಅಭಿಮಾನಿಗಳಿಗೆ ಚಾಲೆಂಜಿಂಗ್​ ಸ್ಟಾರ್​ ಹೇಳಿದ್ದೇನು?

ಮೈಸೂರು: ದಚ್ಚು ಅವರನ್ನು ನೋಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದು ಆಸ್ಪತ್ರೆ ಮುಂದೆ ನೆಚ್ಚಿನ ನಟನಿಗಾಗಿ ಕಾದು ಕೂತಿದ್ದ ಅಭಿಮಾನಿಗಳಿಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ವಿಡಿಯೋ ಕಾಲ್​ ಮೂಲಕ ಅಭಿಮಾನಿಗಳನ್ನು ಸಂತೈಸಿದ್ದಾರೆ.

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕಾರು ಅಪಘಾತವಾದ ಮೇಲೆ ರಾಜ್ಯಾದ್ಯಂತ ಅಭಿಮಾನಿಗಳು ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದರು. ಅನೇಕ ಅಭಿಮಾನಿಗಳು ಆಸ್ಪತ್ರೆಯ ಬಳಿಯೇ ಬಂದು ನೆಲೆಯೂರಿದ್ದರು. ಈ ಎಲ್ಲ ಅಭಿಮಾನಿಗಳ ಆತಂಕವನ್ನು ದಚ್ಚು ವಿಡಿಯೋ ಕಾಲ್​ ಮೂಲಕ ದೂರ ಮಾಡಿದ್ದಾರೆ.

5 ಸೆಕೆಂಡುಗಳ ವಿಡಿಯೋ ಕಾಲ್​ನಲ್ಲಿ ಅಭಿಮಾನಿಗಳತ್ತ ಕೈಬೀಸಿ ಮಾತನಾಡಿದ ದರ್ಶನ್​, ನಾನು ಆರೋಗ್ಯವಾಗಿದ್ದೇನೆ, ಆತಂಕ ಬೇಡ ಎಂದು ಹೇಳಿದರು. ದರ್ಶನ್​ ಮುಖ ನೋಡುತ್ತಿದ್ದಂತೆ ಸಂತಸ ಪಟ್ಟ ಅಭಿಮಾನಿಗಳು ಆಸ್ಪತ್ರೆ ಮುಂದೆಯೇ ಜೈಕಾರ ಹಾಕಿದರು. ದರ್ಶನ್​ ಆಪ್ತರೊಬ್ಬರು ಅಭಿಮಾನಿಗಳ ಆತಂಕ ದೂರಗೊಳಿಸಲೆಂದೇ ಆಸ್ಪತ್ರೆ ಹೊರಗೆ ಬಂದು ವಿಡಿಯೋ ಕಾಲ್​ ಮಾಡಿದ್ದರು. (ದಿಗ್ವಿಜಯ ನ್ಯೂಸ್​)