ತನ್ನ ಆಸೆಯಂತೆ ನಟ ದರ್ಶನ್​ ಕಣ್ತುಂಬಿಕೊಂಡು ಶಾಶ್ವತವಾಗಿ ಕಣ್ಮುಚ್ಚಿದ ಅಭಿಮಾನಿ

ಮದ್ದೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟ ದರ್ಶನ್​ ಅಭಿಮಾನಿ ಪೂರ್ವಿಕಾ(10) ಶುಕ್ರವಾರ ಮೃತಪಟ್ಟಿದ್ದಾರೆ.

ಮೃತ ಪೂರ್ವಿಕಾ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ನಿವಾಸಿ. ಕೆಲವು ದಿನಗಳ ಹಿಂದೆ ಪೂರ್ವಿಕಾ ನಟ ದರ್ಶನ್​ ಅವರನ್ನು ನೋಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅದರಂತೆ ದರ್ಶನ್​ ಪೂರ್ವಿಕಾ ಮನೆಗೆ ಭೇಟಿ ನೀಡಿ ಆಸೆಯನ್ನು ಈಡೇರಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಪೂರ್ವಿಕಾ ಇಂದು ಅಸುನೀಗಿದ್ದು, ಬೆಸಗರಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One Reply to “ತನ್ನ ಆಸೆಯಂತೆ ನಟ ದರ್ಶನ್​ ಕಣ್ತುಂಬಿಕೊಂಡು ಶಾಶ್ವತವಾಗಿ ಕಣ್ಮುಚ್ಚಿದ ಅಭಿಮಾನಿ”

  1. ಇಂತಹ ಸಾವುಗಳು ಸಂಭವಿಸುವುದೇ ಪ್ರಾಕೃತಿಕ ವಿಕೋಪಗಳಿಂದ. ಹೃದಯ ಸಂಬಂಧಿತ ಕಾಯಿಲೆಯೂ ಅದರಲ್ಲೊಂದು. ಆ ಮಗುವಿನ ಆತ್ಮಕ್ಕೆ ಶಾಂತಿ ಕೋರಬಹು‍ದಷ್ಟೆ.

Comments are closed.