ದೇಶದಲ್ಲೇ ಈ ದಾಖಲೆ ಮಾಡಿದ 2ನೇ ಚಿತ್ರ ಯಜಮಾನ: ದಚ್ಚುಗೆ ದಚ್ಚುನೇ ಸಾಟಿಯೆಂದ ಅಭಿಮಾನಿಗಳು

ಬೆಂಗಳೂರು: ಸ್ಯಾಂಡಲ್​ವುಡ್​ ಅಂಗಳದಲ್ಲಿ ಭಾರೀ ನಿರೀಕ್ಷೆ ಸೃಷ್ಟಿಸಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಯಜಮಾನ ಚಿತ್ರ ಹೊಸ ದಾಖಲೆಯೊಂದನ್ನು ಬರೆದಿದೆ.

ಈಗಾಗಲೇ ಸುಮಧುರವಾದ ಹಾಡುಗಳಿಂದ ಸಂಚಲನ ಉಂಟುಮಾಡಿರುವ ಯಜಮಾನ ಚಿತ್ರ ಇದೀಗ ಟ್ರೇಲರ್​ ಮೂಲಕ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 10 ಮಿಲಿಯನ್ಸ್​(1 ಕೋಟಿ) ವೀಕ್ಷಣೆ ಪಡೆದು ದೇಶದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ.

ತಮಿಳು ನಟ ಇಳಯ ದಳಪತಿ ವಿಜಯ್ ಅಭಿನಯದ​ ಮರ್ಸೆಲ್ ಚಿತ್ರದ ಟ್ರೇಲರ್ 11 ಮಿಲಿಯನ್ ವೀಕ್ಷಣೆ ಪಡೆದು ಮೊದಲ ಸ್ಥಾನದಲ್ಲಿದೆ.

ಯಜಮಾನನ ಅಬ್ಬರಕ್ಕೆ ಫಿದಾ ಆಗಿರುವ ಯೂಟ್ಯೂಬ್‌ ಇಂಡಿಯಾ ದಚ್ಚು ಚಿತ್ರವನ್ನು ಗುಣಗಾನ ಮಾಡಿ ಟ್ವೀಟ್ ಮಾಡಿದೆ. ಯೂಟ್ಯೂಬ್ ಇಂಡಿಯಾ ಅಫಿಶಿಯಲ್ ಟ್ವಿಟರ್ ಅಕೌಂಟ್​ನಲ್ಲಿ ಯಜಮಾನ ಚಿತ್ರದ ಟ್ರೇಲರ್ ಶೇರ್ ಮಾಡಿಕೊಂಡಿದೆ.

ದರ್ಶನ್​ ವೃತ್ತಿ ಬದುಕಿನ ಮಹತ್ವದ ಚಿತ್ರವಾಗಿರುವ ಯಜಮಾನ ಚಂದನವನದಲ್ಲಿ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿಸಿದೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಪಕಿ ಶೈಲಾಜನಾಗ್, ಬಿ. ಸುರೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪಿ.ಕುಮಾರ್ ಜೊತೆ ವಿ.ಹರಿಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ‌ಮಾರ್ಚ್​ 1ಕ್ಕೆ ಚಿತ್ರ ಬಿಡುಗಡೆಯಾಗಲಿದೆ. (ದಿಗ್ವಿಜಯ ನ್ಯೂಸ್​)