More

  ದರ್ಶನ್-ಪ್ರಕಾಶ್ ಮತ್ತೆ ಮಿಲನ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾಗೆ ‘ಮಿಲನ’ ಪ್ರಕಾಶ್ ಅವರು ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಜೋರಾಗಿ ಕೇಳಿಬರುತ್ತಿವೆ.

  ಈ ಹಿಂದೆ ಇವರಿಬ್ಬರ ಜೋಡಿಯಲ್ಲಿ ವೂಡಿಬಂದಿದ್ದ ಕೌಟುಂಬಿಕ ಪ್ರಾಧಾನ್ಯತೆಯ ಚಿತ್ರ ‘ತಾರಕ್’ ಒಳ್ಳೆಯ ಹೆಸರು ಮಾಡಿತ್ತು. ಅಲ್ಲದೆ, ನಟ ದರ್ಶನ್​ಗೆ ವಿಭಿನ್ನ ಇಮೇಜ್ ಕೂಡ ತಂದು ಕೊಟ್ಟಿತ್ತು. ಇದೀಗ ನಟ ದರ್ಶನ್​ಗೆ ನಿರ್ದೇಶಕ ಪ್ರಕಾಶ್ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದು, ದರ್ಶನ್ ಕೂಡ ಒಪ್ಪಿಗೆ ನೀಡಿದ್ದಾರಂತೆ. ಪ್ರಕಾಶ್ ಈಗಾಗಲೇ ಸ್ಕ್ರಿಪ್ಟ್ ಕೆಲಸ ಕೂಡ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಪ್ರಕಾಶ್ ಆಕ್ಷನ್-ಕಟ್ ಹೇಳಿರುವ ಬಹುತೇಕ ಚಿತ್ರಗಳನ್ನು ನಿರ್ವಿುಸಿರುವ ದುಷ್ಯಂತ ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆದರೆ ಈ ಚಿತ್ರದ ಬಗ್ಗೆ ನಟ ದರ್ಶನ್ ಅಥವಾ ನಿರ್ದೇಶಕ ಪ್ರಕಾಶ್ ಅಧಿಕೃತವಾಗಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

  ಇನ್ನು ದರ್ಶನ್​ಗಾಗಿ ‘ಮೆಜೆಸ್ಟಿಕ್’ ಸಿನಿಮಾ ನಿರ್ವಪಕ ಎಂ.ಜಿ.ರಾಮಮೂರ್ತಿ ಅವರು ಚಿತ್ರ ಮಾಡಲು ಮುಂದಾಗಿದ್ದು,‘ಮದಗಜ’ ಎಂಬ ಟೈಟಲ್ ಕೂಡ ಫಿಕ್ಸ್ ಮಾಡಿದ್ದಾರೆ. ನಟ ದರ್ಶನ್ ಸದ್ಯ ‘ರಾಬರ್ಟ್’ ಚಿತ್ರದ ಶೂಟಿಂಗ್​ನಲ್ಲಿ ಬಿಜಿ ಆಗಿದ್ದು, ಮುಂದೆ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬುದಕ್ಕೆ ಅವರಿಂದಲೇ ಉತ್ತರದ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts