ದರ್ಶನ್​ ಆಪ್ತ ಬಳಗದಲ್ಲಿದ್ದ ಮ್ಯಾನೇಜರ್​ ಶ್ರೀನಿವಾಸ್​ ತಂಡದಿಂದ ಔಟ್​, ಅವರೊಂದಿಗೆ ವ್ಯವಹಾರ ಮಾಡದಂತೆ ಮನವಿ

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದರ್ಶನ್​ ತೂಗುದೀಪ ಅವರ ಮ್ಯಾನೇಜರ್​ ಆಗಿದ್ದಲ್ಲದೆ, ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್​ ಈಗ ಡಿ ಬಾಸ್​ ತಂಡದಿಂದ ಹೊರಬಿದ್ದಾರೆ.

ದರ್ಶನ್​ ಅಭಿಮಾನಿಗಳ ಅಫೀಷಿಯಲ್​ ಫ್ಯಾನ್​ ಪೇಜ್​ನಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ದರ್ಶನ್​ ಅವರನ್ನು ಸಂಪರ್ಕಿಸುವವರು ಹಾಗೂ ಅವರ ವ್ಯವಹಾರಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್​ ಅವರನ್ನು ಸಂಪರ್ಕಿಸುವವರು ಇನ್ಮುಂದೆ ಯಾವುದೇ ಕಾರಣಕ್ಕೂ ಶ್ರೀನಿವಾಸ್​ ಅವರನ್ನು ಸಂಪರ್ಕಿಸಬಾರದು ಅಫೀಷಿಯಲ್​ ಫ್ಯಾನ್​ ಪೇಜ್​ನಲ್ಲಿ ಸೂಚನೆ ನೀಡಲಾಗಿದೆ.

ಈ ಹಿಂದೆ ಮಲ್ಲಿಕಾರ್ಜುನ್​ ಎಂಬುವರು ದರ್ಶನ್​ ಅವರ ಮ್ಯಾನೇಜರ್​ ಆಗಿದ್ದರು. ಆದರೆ, ಸಾಕಷ್ಟು ವಂಚನೆ ಮಾಡಿದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಇದರ ಅರಿವಿಲ್ಲದ ಜನರು ಅವರನ್ನು ಸಂಪರ್ಕಿಸಿದ್ದರಿಂದ ದರ್ಶನ್​ಗೆ ಸಾಕಷ್ಟು ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್​ ವಿಚಾರದಲ್ಲಿ ಹೀಗಾಗದಂತೆ ಎಚ್ಚರ ವಹಿಸುವ ಉದ್ದೇಶದಿಂದ ಈ ಮಾಹಿತಿ ಒದಗಿಸಿರುವುದಾಗಿ ಪೇಜ್​ನಲ್ಲಿ ತಿಳಿಸಲಾಗಿದೆ. ಈ ವಿಚಾರವಾಗಿ ದರ್ಶನ್​ ಎಲ್ಲಿಯೂ ಕಮೆಂಟ್ ಮಾಡಿಲ್ಲ.

Leave a Reply

Your email address will not be published. Required fields are marked *