ಮಲೇಬೆನ್ನೂರು: ಹರಿಹರ ತಾಲೂಕು ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ (ಅಜ್ಜಯ್ಯ) ಶ್ರಾವಣ ಮಾಸದ ಅಮಾವಾಸ್ಯೆಗೆ ಭಾನುವಾರ ಭಕ್ತ ಸಾಗರವೇ ಹರಿದುಬಂದಿತ್ತು.
ತುಂಗಭದ್ರಾ ನದಿದಂಡೆಯ ಗ್ರಾಮ ಸುಕ್ಷೇತ್ರ ಉಕ್ಕಡಗಾತ್ರಿಯ ಪವಾಡ ಪುರುಷ, ಭವರೋಗ ಹರವೈದ್ಯನೆಂದೇ ಖ್ಯಾತಿ ಪಡೆದ ಕರಿಬಸವೇಶ್ವರ ಸ್ವಾಮಿ ಅಜ್ಜಯ್ಯನ ಗದ್ದಗೆ ದರ್ಶನಕ್ಕೆ ಪ್ರತಿ ಅಮಾವಾಸ್ಯೆಗೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ.
ಅನೇಕರು ಕರಿಬಸವೇಶ್ವರನ ದರ್ಶನ ಪಡೆದು ಹರಕೆ ಕಟ್ಟಿಕೊಂಡರು. ಕಟ್ಟಿಕೊಂಡ ಹರಕೆ ಈಡೇರಬೇಕಾದರೆ ಐದು ಅಮಾವಾಸ್ಯೆಗೆ ಉಕ್ಕಡಗಾತ್ರಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಬೇಕು. ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ನಿಂಬೆಹಣ್ಣು ತುಳಿದರೆ ಸಾಕು ಸಮಸ್ಯೆಗಳನ್ನು ಅಜ್ಜಯ್ಯ ಬಗೆಹರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.
ನದಿ ದಂಡೆಯಲ್ಲಿ ಕಟ್ಟೆಚ್ಚರ
ನದಿಯಲ್ಲಿ ಹೆಚ್ಚಿನ ನೀರು ಬರುತ್ತಿರುವುದರಿಂದ ದಂಡೆಯಲ್ಲಿ ಸ್ನಾನ ಮಾಡುವ ಭಕ್ತರಿಗೆ ಬ್ಯಾರಿಕೇಡ್ ಹಾಕಿ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ. ಭಕ್ತರು ದಂಡೆಯಲ್ಲಿ ಸ್ಥಾನ ಮಾಡಿ ಅಜ್ಜಯ್ಯನ ದರ್ಶನ ಪಡೆಯಬೇಕು. ನದಿಯಲ್ಲಿ ಯಾರೂ ಇಳಿಯುವಂತಿಲ್ಲ.