ಅಪಘಾತದ ನಂತರವೂ ಕಾರ್ ​ರೇಸ್​ನಲ್ಲಿ ಭಾಗವಹಿಸುತ್ತಾರಾ ಡಿ ಬಾಸ್​?

ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡ ನಂತರ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಗ್ರಾವಲ್​ಫೆಸ್ಟ್​ ಕಾರ್​ ರೆಸ್​ನಲ್ಲಿ ಭಾಗವಹಿಸುತ್ತಾರಾ,ಇಲ್ಲವಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಅದಕ್ಕೀಗ ಸ್ವತಃ ಆಯೋಜಕರೇ ಉತ್ತರ ನೀಡಿದ್ದಾರೆ.

ಹೌದು, ಗ್ರಾವಲ್ ಫೆಸ್ಟ್​ ಕಾರ್​ ರೇಸ್​ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದ ದರ್ಶನ್​ ರೇಸ್​​ಗಾಗಿ ಸತತ ಹತ್ತು ದಿನ ಅಭ್ಯಾಸ ಮಾಡಿದ್ದರು. ಇದಕ್ಕಾಗಿ ವಿಶೇಷ ಡ್ರೈವಿಂಗ್​ ಲೈಸೆನ್ಸ್​ ಅನ್ನೂ ಪಡೆದುಕೊಂಡಿದ್ದರು. ಅಪಘಾತವಾದ ನಂತರ ರೇಸ್​ನಲ್ಲಿ ಭಾಗವಹಿಸಬಹುದೆ ಎಂದು ವೈದ್ಯರ ಬಳಿಯೂ ಕೇಳಿದ್ದರು. ಎಲ್ಲವೂ ಸರಿ ಇದ್ದಿದ್ದರೆ ದರ್ಶನ್ 1600 CC, ಇಂಡಿಯನ್ ಓಪನ್, ಇಂಟರ್‌ನ್ಯಾಷನಲ್ ಓಪನ್ ವಿಭಾಗದಲ್ಲಿ ಕಾರು ಓಡಿಸಬೇಕಿತ್ತು.

ಅಪಘಾತದಿಂದ ನಿರಾಸೆ ಹೊಂದಿರುವ ದರ್ಶನ್​ ರೇಸ್‌ನಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಭಾನುವಾರ ನಡೆಯುವ ಕಾರ್ಯಕ್ರಮ ವೀಕ್ಷಿಸಲು ಮಾತ್ರ ಬರಲಿದ್ದಾರೆ. ಎಂದು ಮೈಸೂರಿನಲ್ಲಿ ಗ್ರಾವೆಲ್ ಫೆಸ್ಟ್ ಆಯೋಜಕ ಅರುಣ್ ಅರಸ್ ಮತ್ತು ಫಾಲ್ಗುಣ ಅರಸ್‌ ಮಾಹಿತಿ ನೀಡಿದ್ದಾರೆ.

ದರ್ಶನ್ ಮೈಸೂರಿಗೆ ತೆರಳಿರುವುದು ರೇಸ್​ನಲ್ಲಿ ಭಾಗವಹಿಸಲು ಅಲ್ಲ, ಕೇವಲ ಕಾರ್ಯಕ್ರಮ ನೋಡಲು ಎಂಬುದರ ಬಗ್ಗೆ ​ ಸ್ಪಷ್ಟನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)