ಎಷ್ಟೋ ವರ್ಷದ ನಂತರ ಒಟ್ಟಿಗೆ ಕಾಣಿಸಿಕೊಂಡ್ರು ಚಾಲೆಂಜಿಗ್​ ಸ್ಟಾರ್​ ದಂಪತಿ

ತುಮಕೂರು: ಸುಮಾರು ಐದು ವರ್ಷಗಳ ನಂತರ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮಿ, ದರ್ಶನ್​ ಅವರನ್ನು ಸಾರ್ವಜನಿಕವಾಗಿ ಮೀಟ್​ ಮಾಡಿದ್ದಾರೆ.

ಹೌದು, ಕುಣಿಗಲ್​ನಲ್ಲಿ ನಡೆಯುತಿದ್ದ ‘ಯಜಮಾನ’ ಚಿತ್ರದ ಸೆಟ್​ನಲ್ಲಿ, ದರ್ಶನ್​​ ಹಾಗೂ ವಿಜಯಲಕ್ಷ್ಮಿ ದಂಪತಿ ಭೇಟಿ ಮಾಡಿದ್ದಾರೆ. ಸುಮಾರು 5 ವರ್ಷಗಳ ನಂತರ ದಂಪತಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

2011ರಲ್ಲಿ ದಂಪತಿ ನಡುವೆ ನಡೆದಿದ್ದ ಘಟನೆ ನಂತರ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದರ್ಶನ್​ ಆರ್​.ಆರ್​.ನಗರದ ಮನೆಯಲ್ಲಿ ವಾಸವಿದ್ದರೆ, ವಿಜಯಲಕ್ಷ್ಮಿ ಹೊಸಕೆರೆಹಳ್ಳಿಯಲ್ಲಿರುವ ಫ್ಲ್ಯಾಟ್​​ನಲ್ಲಿ ವಾಸ ಮಾಡುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಇಬ್ಬರೂ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. ಆದರೆ ಇಂದು ದಿಢೀರನೆ ಇಬ್ಬರೂ ಶೂಟಿಂಗ್​ ಸೆಟ್​ನಲ್ಲಿ ಕಾಣಿಸಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗುತ್ತಿದೆ.

ದರ್ಶನ್​ ಫ್ಯಾನ್ಸ್​ ತಮ್ಮ ಪೇಜ್​ಗಳಲ್ಲಿ ಈ ಫೋಟೋವನ್ನು ಶೇರ್​ ಮಾಡಿ, ಇಬ್ಬರನ್ನೂ ಒಟ್ಟಿಗೆ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)