ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪುಟಾಣಿ ಅಭಿಮಾನಿಯೊಬ್ಬರ ಆಸೆಯನ್ನು ನಟ ದರ್ಶನ್ ಈಡೇರಿಸಿದ್ದಾರೆ.
ಪುಟಾಣಿಯ ಹೆಸರು ರತನ್. ಚಿತ್ರನಟ ದರ್ಶನ್ ಅವರನ್ನು ನೋಡಬೇಕು ಎಂಬುದು ರತನ್ ಆಸೆಯಾಗಿತ್ತು. ಇದನ್ನು ಅರಿತ ದರ್ಶನ್, ಆ ಪುಟಾಣಿಯನ್ನು ಮನೆಗೆ ಕರೆಯಿಸಿಕೊಂಡು ಮಾತನಾಡಿಸಿದ್ದಾರೆ. ಆತನ ಜತೆಗೆ ಫೊಟೋ ತೆಗೆಯಿಸಿಕೊಂಡು ಶೀಘ್ರ ಗುಣಮುಖರಾಗುವಂತೆ ಹಾರೈಸಿ ಕಳುಹಿಸಿದ್ದಾರೆ.
ಈ ಫೋಟೋಗಳನ್ನು ಅವರು ಡಿ ಕಂಪನಿ ಆಫೀಸಿಷಿಯಲ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪುಟ್ಟ ಹುಡುಗ ರತನ್ ರವರ ಆಸೆ ಪೂರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ 👌🏽#ChallengingStarDarshan #BoxOfficeSultan #DBoss @dasadarshan @vijayaananth2 @dinakar219 pic.twitter.com/NdxpZmKnBS
— D Company(R)Official (@Dcompany171) January 12, 2020