ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮೀ ಮೇಲೆ ಮತ್ತೆ ಹಲ್ಲೆ ಮಾಡಿದ ದರ್ಶನ್​: ಜಗಳ ಬಿಡಿಸಲು ಬಂದ ರವಿಶಂಕರ್​ಗೂ ಗೂಸಾ

ಬೆಂಗಳೂರು: ಕನ್ನಡ ಚಲನಚಿತ್ರಗಳ ಖ್ಯಾತ ನಟ ದರ್ಶನ್​ ತೂಗುದೀಪ್​ ಇತ್ತೀಚೆಗೆ ಪಾನಮತ್ತರಾಗಿ ತಮ್ಮ ಪತ್ನಿ ವಾಸವಿರುವ ಅಪಾರ್ಟ್​ಮೆಂಟ್​ಗೆ ನುಗ್ಗಿ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾರೆ. ಅದೇ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿರುವ ಹಾಸ್ಯನಟ ರವಿಶಂಕರ್​ ಪತಿಪತ್ನಿಯರ ಜಗಳ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರಿಗೂ ದರ್ಶನ್​ ಚೆನ್ನಾಗಿ ಥಳಿಸಿದರು ಎನ್ನಲಾಗಿದೆ.

ಬೆಳ್​ಬೆಳಗ್ಗೆ ಬೆಳಗೆರೆ ಎಂಬ ಯುಟ್ಯೂಬ್​ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವಿಬೆಳಗೆರೆ ಈ ವಿಷಯ ತಿಳಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರು ಅದರಲ್ಲೂ ವಿಶೇಷವಾಗಿ ಚಲನಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿರುವವರು ತಮ್ಮ ವೈಯಕ್ತಿಕ ಜೀವನದಲ್ಲಿ, ಸಾಂಸಾರಿಕ ಜೀವನದಲ್ಲಿ ಸಂಯಮ ಕಾಯ್ದುಕೊಳ್ಳುವುದು ತುಂಬಾ ಅವಶ್ಯ. ಇದಕ್ಕೆ ಡಾ. ರಾಜ್​ಕುಮಾರ್​, ಕಲ್ಯಾಣ್​ಕುಮಾರ್​ ಹಾಗೂ ಹಾಸ್ಯನಟ ನರಸಿಂಹರಾಜು ಅಂಥವರು ಒಳ್ಳೆಯ ಉದಾಹರಣೆ ಎಂದು ಹೇಳಿದ್ದಾರೆ.

ಬರಬಾರದ ವಯಸ್ಸಿನಲ್ಲಿ, ಬರಬಾರದಷ್ಟು ಹಣ ಬಂದರೆ ಹೀಗೆಲ್ಲ ಆಗುತ್ತದೆ ಎಂದು ಹೇಳಿರುವ ರವಿ ಬೆಳಗೆರೆ, ವಿಜಯಲಕ್ಷ್ಮೀ ಮೇಲೆ ಅತೀವ ಪ್ರೀತಿ ಇದ್ದಾಗ ಆಕೆಯ ಹೆಸರಿನಲ್ಲಿ ದರ್ಶನ್​ ಕೋಟಿಗಟ್ಟಲೆ ಆಸ್ತಿ ಮಾಡಿಟ್ಟಿದ್ದಾನೆ. ಅದನ್ನು ವಾಪಸು ಕೊಡುವಂತೆ ಪತ್ನಿಯನ್ನು ದರ್ಶನ್​ ಪೀಡಿಸುತ್ತಿದ್ದಾನೆ. ಇದಕ್ಕೆ ಆಕೆ ಒಪ್ಪದಿರುವುದೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ಮಾದರಿಯಾಗಬೇಕಿದ್ದವರೆಲ್ಲರಿಗೂ ಬಹುಪತ್ನಿಯರು
ಸಾಮಾನ್ಯ ಜನರಿಗೆ ಮಾದರಿಯಾಗಬೇಕಿದ್ದ ಇತ್ತೀಚಿನ ಪೀಳಿಗೆಯ ನಟರೆಲ್ಲರೂ ಬಹುಪತ್ನಿಯನ್ನು ಹೊಂದುತ್ತಾ, ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿರುವುದಕ್ಕೆ ರವಿ ಬೆಳಗೆರೆ ಬೇಸರ ವ್ಯಕ್ತಪಡಿಸಿದ್ದಾರೆ.
ಏಕಪತ್ನಿಯಲ್ಲಿ ನಿಷ್ಠೆಯೊಂದಿಗೆ ಇವರೆಲ್ಲರೂ ಸಂಸಾರ ಮಾಡುವ ಮೂಲಕ ತಮ್ಮ ಅಭಿಮಾನಿಗಳೆಲ್ಲರಿಗೂ ಮಾದರಿಯಾಗಬೇಕಿತ್ತು. ಆದರೆ ಬ್ಲ್ಯಾಕ್​ ಕೋಬ್ರಾ ಖ್ಯಾತಿಯ ದುನಿಯಾ ವಿಜಯ್​, ದರ್ಶನ್​ ತೂಗುದೀಪ ಅವರಂಥ ನಟರು ಬೇರೆಬೇರೆ ಮಹಿಳೆಯರೊಂದಿಗೆ ಸಂಬಂಧವಿರಿಸಿಕೊಂಡಿದ್ದಾರೆ. ದುನಿಯಾ ವಿಜಯ್​ ತಮ್ಮ ಧರ್ಮಪತ್ನಿ ನಾಗರತ್ನ ಅವರನ್ನು ಬಿಟ್ಟು ಬೇರೊಬ್ಬಳನ್ನು ವಿವಾಹವಾಗಿದ್ದಾರೆ. ಅದರಂತೆ ದರ್ಶನ್​ ಈಗ ಪವಿತ್ರಾ ಗೌಡ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಇವರೆಲ್ಲರಿಗೂ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.

11 Replies to “ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮೀ ಮೇಲೆ ಮತ್ತೆ ಹಲ್ಲೆ ಮಾಡಿದ ದರ್ಶನ್​: ಜಗಳ ಬಿಡಿಸಲು ಬಂದ ರವಿಶಂಕರ್​ಗೂ ಗೂಸಾ”

  1. 3 ದಿನದ ಹಿಂದೆ ಕುಟುಂಬ ನ್ಯಾಯಾಲಯದಲ್ಲಿ ದರ್ಶನ ತೂಗುದೀಪ ಕೇಸ್ ಗೆ ಬಂದಿದ್ದರು ಪತ್ನಿ ವಿಚ್ಛೇದನಕ್ಕಾಗಿ

 1. ಅಯ್ಯೋ ರವಿಬೆಳಗೆರೆ ಎನು ಸಾಚಾನಾ? ಎರಡನೇ ಹೆಂಡತಿ ಅವರೀಗೂ ಇದ್ದಾಳೆ. ಆಕೆಗೆ ಪ್ರಿಯಕರ ಬೇರೆ. ಆತನನ್ನು ಮುಗಿಸಲು ಸುಪಾರಿಕೊಟ್ಟು ತಾವು ಜೈಲು ಸೇರಿ ಮುದ್ದೆ ಮೆದ್ದು ಬಂದಿಲ್ಲವೇ? ಬೆಕ್ಕು ನೂರಾರು ಇಲಿ ತಿಂದು ಕಾಶಿ ಯಾತ್ರೆ ಮಾಡಿದಂತೆ.

  1. ರವಿ ಬೆಳಗೆರೆ ಸಾಚ ಹೌದೋ ಅಲ್ಲವೋ ಅದು ವಿಷಯ ಅಲ್ಲ. ಈ ಸಂದರ್ಭದಲ್ಲಿ ಅವರು ಹೇಳುತ್ತಿರುವುದು ಸರಿಯೋ ತಪ್ಪೊ ಅದು ಮುಖ್ಯ.
   ದರ್ಶನ್/ಯಾರಾದರೂ ಅವರ ಪತ್ನಿಗೆ/ಯಾರ ಮೇಲಾದರೂ ಹಲ್ಲೆ ಮಾಡಿದ್ದರೆ ಅದು ತಪ್ಪು ಮೇಲಾಗಿ ಇದು ( ಮಾಧ್ಯಮಗಳ ವರದಿ ಪ್ರಕಾರ ) ಎರಡನೇ ಬಾರಿ ಆಗುತ್ತಿರುವುದು ದೊಡ್ಡ ತಪ್ಪು.

 2. ಯಾರ ಕಣ್ಣಿಗೂ ಬೀಳದ ದರ್ಶನ್ ಜೀವನದ ಸಾಂಸಾರಿಕ ಒಡಕು ಈ ಬೇರೆಯವರನ್ನು ಕುಡುಕ ಎನ್ನುವ ದೊಡ್ಡ ಕುಡುಕ ರವಿಬೆಳೆಗೆರೆ ಎನ್ನುವ ಹೆಣ್ಣು ಬಾಕನಿಗೆ
  (ಉತ್ತಮ ಪತ್ರ ಕರ್ತ ಅನ್ನೋದರಲ್ಲಿ ಎರಡು ಮಾತಿಲ್ಲ, ಕೆಲವೊಂದು ವಿಚಾರಗಳ ಹೊರತಾಗಿ) ಕಂಡಿರುವುದು ವಿಸ್ಮಯ ವೇ ಸರಿ,, ನೀನು ಪಕ್ಕಾ ದರ್ಶನ್ ವಿರೋಧಿ ಅನ್ನೋದು ಇಡೀ ಕರ್ನಾಟಕ ಕ್ಕೆ ಗೊತ್ತಿರುವಾಗ ಸುದ್ದಿಮಾಡುವ ಹುಚ್ಚಿನಿಂದ ಈ ರೀತಿಯ ಸುಳ್ಳು ಸುದ್ದಿ ಮಾಡಬೇಡ ಬೆಳಗೆರೆ,,
  ನಿನ್ನ ಮಗಳು ಸಾರ್ವಜನಿಕ ವಾಗಿ ಎಣ್ಣೆ ಹೊಡೆಯುವಾಗ, ಧಮ್ ಹೊಡೆಯುವಾಗ ಇಲ್ಲದ ಹೆಣ್ಣಿನ ಮೇಲಿನ ಕಾಳಜಿ, ಈಗ ಬಂದಿರುವುದು ಮೆಚ್ಚಬೇಕಾದದ್ದೆ..‌ ದರ್ಶನ್ ಮಾಡುವ ಪ್ರತಿಯೊಂದು ಕೆಟ್ಟ ಕೆಲಸಗಳು ಬೀಳುವ ನಿನ್ನ ಕಣ್ಣಿಗೆ ಅವರು ಮಾಡುವ ಒಂದಾದರೂ ಸಾಮಾಜಿಕ ಕಳಕಳಿಯುಳ್ಳ ಕೆಲಸ ನಿನ್ನ ಕಣ್ಣಿಗೆ ಬೀಳದಿರುವುದು ದುರಂತವೇ ಸರಿ….

  ಇದು ಕೇವಲ ಪತ್ರಿಕೆ ಓದುತ್ತಿದ್ದ ಕಾಲವಲ್ಲ,,, ನೀನ್ ಹೇಳಿದ್ದೇ ನಿಜ ಅಂತ ನಂಬೋಕೆ….ಇದು ಸಾಮಾಜಿಕ ಜಾಲತಾಣಗಳ ಯುಗ, ಪ್ರಪಂಚವೇ ಅಂಗೈಲಿರುತ್ತದೆ…

  ನೆನಪಿರಲಿ.

  ಉಮೇಶ್ ಕೋಟೆ

 3. Mr. Ravi Belagare has no morality comment on such celebrity family dispute. Why does he pokes his nose when he himself involved in worst situations. A person living in glass house should not throw stones on others.

 4. Avru sachana evru sachana anodh bittu avr en elthidare anodna thilkolodu mukya film nali hero agodala mukya ethavrige katkondavrge maklige madlu hero agli

 5. ರವಿ ಬೆಳಗೆರೆಗೆ ಈ ವಿಚಾರಗಳನ್ನು ಮಾತನಾಡುವ ನೈತಿಕತೆ ಇಲ್ಲ .ತಮ್ಮ ಬದುಕನ್ನು ಹೀಗೆ ಅನಾವರಣ ಮಾಡಿಕೊಳ್ಳಿ.ಜನಗಳಿಗೆ ರವಿ ಯೋಗ್ಯತೆಯೂ ತಿಳಿಯಲಿ

 6. Darshan should not cheat to his wife and son. He is a very good actor. What ever differences in the family good family life also is important. His son should not suffer because of his behaviour. When he has his hard days his wife Vijayalakshmi supported him. He should not forget that and ran away with a lady.

Leave a Reply

Your email address will not be published. Required fields are marked *