ದರ್ಶನ್​ ಮತ್ತು ಯಶ್​ ಜೋಡೆತ್ತುಗಳಲ್ಲ, ಪೈರನ್ನು ಕದ್ದು ತಿನ್ನುವ ಎತ್ತುಗಳು: ಸಿಎಂ ಕುಮಾರಸ್ವಾಮಿ ಲೇವಡಿ

ಮಂಡ್ಯ: ಲೋಕಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್​ ಪರ ಪ್ರಚಾರ ಮಾಡಲು ಮುಂದಾಗಿರುವ ಕನ್ನಡ ಚಲನಚಿತ್ರ ನಟರಾದ ದರ್ಶನ್​ ಮತ್ತು ಯಶ್​ ಅವರನ್ನು ಸಿಎಂ ಎಚ್​.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ತಾವಿಬ್ಬರೂ ಉಳುಮೆ ಮಾಡುವ ಜೋಡೆತ್ತುಗಳು ಎಂದು ಅವರಿಬ್ಬರೂ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರು ಉಳುಮೆ ಮಾಡುವ ಜೋಡೆತ್ತುಗಳಲ್ಲ, ಪೈರನ್ನು ಕದ್ದು ತಿನ್ನುವ ಕಳ್ಳೆತ್ತುಗಳು ಎಂದು ಟೀಕಿಸಿದ್ದಾರೆ. ದರ್ಶನ್​ ಬಳಸಿರುವ ಪದಗಳನ್ನು ಕೆಲವರು ಕೇಳಿರಬಹುದು. ಎಲ್ಲರೂ ಕೇಳಿದರೆ ಅವರಿಗೆ ಮಂಡ್ಯ ಜಿಲ್ಲೆಗೆ ಕಾಲಿಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಇವರಿಬ್ಬರೂ ಎಲ್ಲಿದ್ದರು. ಈಗ ಇವರಿಬ್ಬರೂ ಅಮ್ಮನನ್ನು ಉಳಿಸಲು ಬಂದಿದ್ದಾರಲ್ಲ, ಆಗ ನೀರಿನಲ್ಲಿದ್ದ ಶವಗಳನ್ನು ಎತ್ತಲು ಇವರು ಬಂದಿದ್ದರಾ? ಮಾತನಾಡಿದರೆ ತುಂಬಾ ವಿಷಯಗಳಿವೆ. ನಾಳೆಯ ಸಾರ್ವಜನಿಕ ಸಭೆಯಲ್ಲಿ ಎಲ್ಲವನ್ನೂ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

One Reply to “ದರ್ಶನ್​ ಮತ್ತು ಯಶ್​ ಜೋಡೆತ್ತುಗಳಲ್ಲ, ಪೈರನ್ನು ಕದ್ದು ತಿನ್ನುವ ಎತ್ತುಗಳು: ಸಿಎಂ ಕುಮಾರಸ್ವಾಮಿ ಲೇವಡಿ”

  1. The more you talk gowda, you expose yourself.very cheap. this shows your alianation from voters.

Comments are closed.