More

  ನಟ ದರ್ಶನ್ ವಿರುದ್ಧ ರೌಡಿಶೀಟರ್ ಓಪನ್ ಆಗೋ ಸಾಧ್ಯತೆ! ಲೆಕ್ಕವಿಲ್ಲದಷ್ಟೂ ವಿವಾದದಲ್ಲಿದ್ದಾರೆ ಡಿ ಬಾಸ್​​..

  ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ ದರ್ಶನ್​  ಕೊಲೆ ಆರೋಪವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಈ ಹಿಂದೆ ಕೂಡಾ ಹಲವು ಕ್ರಿಮಿನಲ್​​ ವಿವಾದಗಳಲ್ಲಿ ನಟನ ಹೆಸರು ಹೇಳಿ ಬಂದಿತ್ತು. ಆದರೆ ಇದೀಗ ಕೊಲೆ ಆರೋಪದಲ್ಲಿ ನಟ  ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಟನ ವಿರುದ್ಧ ರೌಡಿ ಶೀಟರ್​​ ಓಪನ್​​ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

  ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್ , ಆತನ ಎರಡನೇ ಪತ್ನಿ ಪವಿತ್ರಾ ಗೌಡ   ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

  darshna

  ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ  ಸ್ಥಳ ಮಹಜರು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಇಂದು ಕೂಡ ಚಿತ್ರದುರ್ಗಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಮಹಜರು ಮಾಡಲಿದ್ದಾರೆ. ಸದ್ಯ ಇದರ ಬೆನ್ನಲ್ಲೇ ನಟ ದರ್ಶನ್ ವಿರುದ್ಧ ರೌಡಿಶೀಟರ್ ಓಪನ್ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.

  Darshan (1)

  ದರ್ಶನ್ ಅವರು ಕನ್ನಡ ಚಲಚಿತ್ರದ ನಟನಾದರು ಯಾವಾಗಲೂ ಯಾವುದಾದರೂ ಕಿರಿಕ್ ಸುದ್ದಿಯಲ್ಲಿರುತ್ತಾರೆ. ಪತ್ನಿ ಮೇಲೆ ಹಲ್ಲೆ, ಹೋಟೆಲ್​ನಲ್ಲಿ ಕಿರಿಕ್ ಮಾಡಿಕೊಂಡಿರುವುದು ಸೇರಿದಂತೆ ಈ ಹಿಂದೆ ಅವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಇದೆ. ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್​ಲ್ಲಿ ಸೆಕ್ಷನ್ 302 ಅಡಿ ದರ್ಶನ್ ವಿರುದ್ಧ ದೂರು ದಾಖಲು ಮಾಡಲಾಗಿದೆ. ಇದರಿಂದ ಹಲವು ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದರಿಂದ‌ ದರ್ಶನ್ ವಿರುದ್ಧ ರೌಡಿಶೀಟರ್ ಓಪನ್‌ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

  Actor Darshan

  2011ರಲ್ಲಿ ಮೊದಲ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ 28 ದಿನ ಜೈಲಿನಲ್ಲಿದ್ದ. 2012ರಲ್ಲಿ ಚಿಂಗಾರಿ ಸಿನೆಮಾ ಸಕ್ಸಸ್‌ ಆಗಿತ್ತು. ಈ ವೇಳೆ ನಿರ್ಮಾಪಕ ಮಹದೇವ್ ಮತ್ತು ದರ್ಶನ್ ನಡುವೆ ಕಿರಿಕ್ ಆಗ ಬಗ್ಗೆ ಸುದ್ದಿಯಾಗಿತ್ತು.

  See also  ಕಸ್ಟಮ್ಸ್​ ಅಧಿಕಾರಿಗಳಿಂದ 3.756 ಕೆಜಿ ಚಿನ್ನ, 59 ಸಾವಿರ ವಿದೇಶಿ ಬ್ರ್ಯಾಂಡ್​ ಸಿಗರೇಟ್​ ವಶ!

  2018ರಲ್ಲಿ ಮೈಸೂರಿನ ಕ್ರಾಫ್ಟ್ ಬಜಾರ್ ಎದುರುಗಡೆ ರಸ್ತೆಯಲ್ಲಿ ದರ್ಶನ್ ಕಾರ್ ಅಪಘಾತಕ್ಕೊಳಗಾಗಿತ್ತು. ರಾತ್ರೋರಾತ್ರಿ ಅಪಘಾತಕ್ಕೊಳಾಗಿದ್ದ ಕಾರ್‌ನ್ನು ಮೈಸೂರಿನಿಂದ ಬೇರೆಡೆ ಶಿಫ್ಟ್ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಬಳಿಕ ಶ್ರೀರಂಗಪಟ್ಟಣದ ಸ್ನೇಹಿತನ ತೋಟದ ಮನೆಯಲ್ಲಿ ಆಡಿ ಕ್ಯೂ7 ಕಾರು ಪತ್ತೆಯಾಗಿತ್ತು.

  vijayalakshmi darshan

  2019ರಲ್ಲಿ ಯಜಮಾನ ಚಿತ್ರೀಕರಣದ ವೇಳೆ ಸಹನಟನ ಮೇಲೆ ಹಲ್ಲೆ ಪ್ರಕರಣ. 2021ರಲ್ಲಿ 10 ವರ್ಷದ ಬಾಲಕಿ ಮೇಲೆ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಫಾರ್ಮ್‌ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕ ಈ ಅಪರಾಧ ಎಸಗಿದ್ದ. ಬಳಿಕ ಆತನಿಗೆ ಶಿಕ್ಷೆ ಆಗಿತ್ತು. ಇದು ಕೂಡ ವಿವಾದವಾಗಿತ್ತು. 2021ರಲ್ಲಿ ದರ್ಶನ್ ಹೆಸರಲ್ಲಿ ಸಾಲ ಪಡೆಯಲು ಯತ್ನ ಎಂಬ ಆರೋಪದ ಮೇಲೆ ಉಮಾಪತಿ ಶ್ರೀನಿವಾಸಗೌಡ ವಿರುದ್ಧ ದರ್ಶನ್ ಆರೋಪ. ಇದು ಬಹಳ ವಿವಾದವಾಗಿತ್ತು.

  Darshan

  ದರ್ಶನ್ ಹಿಂಬಾಲಕರಿಂದ ನನಗೆ ಜೀವ ಬೆದರಿಕೆಯಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು. ಬೆಂಗಳೂರಿನಲ್ಲಿರುವ ದರ್ಶನ್ ನಿವಾಸ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ.ಸಂದರ್ಶನವೊಂದರಲ್ಲಿ ನಿರ್ದೇಶಕ ಪ್ರೇಮ್ ವಿರುದ್ಧ ಅವನೇನು ದೊಡ್ಡ ಪುಡಾಂಗ? ಅವನಿಗೆನೂ ಎರಡು ಕೊಂಬಿದೆಯಾ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ರಕ್ಷಿತಾ ಮತ್ತು ಪ್ರೇಮ್ ಅಸಮಾಧಾನ ಹೊರ ಹಾಕಿದ್ದರು.ಮಾಧ್ಯಮಗಳ ವಿರುದ್ಧ ಕಿರಿಕ್ ಮಾಡಿಕೊಂಡಿದ್ದ ದರ್ಶನ್, ಅವ್ಯಾಚ್ಯ ಪದಗಳಿಂದ ನಿಂದಿಸಿದ್ದರಿಂದ ಮಾಧ್ಯಮಗಳು 2 ವರ್ಷ ಬ್ಯಾನ್ ಮಾಡಿದ್ದವು. ಬಳಿಕ ಇತ್ತೀಚೆಗೆ ಸಂಧಾನ ನಡೆದು ಕ್ಷಮೆ ಕೇಳಿದ್ದರು.

  darshan 3

  ದರ್ಶನ್ ಫ್ಯಾನ್ ಮತ್ತು ಜಗ್ಗೇಶ್ ಫ್ಯಾನ್ ಗಲಾಟೆ ನಡೆದಿತ್ತು. ಈ ವಿಚಾರದಲ್ಲಿ ಕೊನೆಗೆ ಜಗ್ಗೇಶ್ ಒತ್ತಾಯಪೂರ್ವಕ ಕ್ಷಮೆ ಕೇಳಿದ್ದರು. ಇದರಲ್ಲೂ ದರ್ಶನ್ ಕೈವಾಡದ ವಿವಾದವಿತ್ತು.ದರ್ಶನ್ ಕೂಡ ಹುಲಿ ಉಗುರು ಧರಿಸಿರುವ ಫೋಟೋ ವೈರಲ್ ಆಗಿ ವಿವಾದ ಉಂಟಾಗಿತ್ತು.ಫಾರ್ಮ್ ಹೌಸ್‌ನಲ್ಲಿ ದರ್ಶನ್ ವನ್ಯಜೀವಿಗಳನ್ನು ಸಾಕಿದ್ದಾರೆ ಎನ್ನುವ ಆರೋಪ, ಇದು ಕೂಡ ವಿವಾದವಾಗಿತ್ತು. ಕಾಟೇರ ಸಿನೆಮಾ ಸಕ್ಸಸ್‌ ಖುಷಿಯಲ್ಲಿ ಜೆಟ್‌ಲ್ಯಾಗ್ ರೆಸ್ಟೋ ಬಾರ್‌ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿ ವಿವಾದವಾಗಿತ್ತು. ದರ್ಶನ್ ಸಾಕು ನಾಯಿ ಬಿಟ್ಟು ಕಚ್ಚಿಸಿದ್ದಾರೆ ಎಂದು ಮಹಿಳೆ ಒಬ್ಬರು ದೂರು ನೀಡಿದ್ದರು. ಇದು ಕೂಡ ವಿವಾದವಾಗಿತ್ತು.

  See also  ಒಂದು ಲಕ್ಷ ಮತಗಳ ಅಂತರದಲ್ಲಿ ಶ್ರೇಯಸ್ ಗೆಲವು:ಅನುಪಮಾ ಮಹೇಶ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts