Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ದರ್ಶನ್​ಗೆ ಮಂಡ್ಯದ ಅಭಿಮಾನಿ ದೇವರಿಂದ ಓಂಕಾರ ಸೇವೆ

Friday, 16.02.2018, 12:58 PM       No Comments

 

ಮಂಡ್ಯ: ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 41ನೇ ಹುಟ್ಟುಹಬ್ಬವನ್ನು ಅಭಿಮಾನಿಯೊಬ್ಬರು ವಿಭಿನ್ನವಾಗಿ ಆಚರಿಸಿರುವ ಮೂಲಕ ಅಭಿಮಾನ ಮೆರೆದಿದ್ದಾನೆ.

ಓಂಕಾರ್ ಮೆನ್ಸ್ ಪಾರ್ಲರ್ ಮಾಲೀಕ ಓಂಕಾರ್‌ ಅವರು ದರ್ಶನ್​ ಹುಟ್ಟುಹಬ್ಬದ ಹಿನ್ನೆಲೆ ತಮ್ಮ ಪಾರ್ಲರ್‌ಗೆ ಬರುವ ಗ್ರಾಹಕರಿಗೆ ಉಚಿತವಾಗಿ ಸೇವಿಂಗ್, ಕಟಿಂಗ್​ ಸೇವೆಯನ್ನು ಶುಕ್ರವಾರ ಬೆಳಗ್ಗೆಯಿಂದ ಮಾಡುತ್ತಿದ್ದಾರೆ.

ಪಾರ್ಲರ್ ಮುಂಭಾಗ ಕೇಕ್ ಕತ್ತರಿಸಿ ಗ್ರಾಹಕರಿಗೆ ಸಿಹಿ ವಿತರಿಸಿದ ಓಂಕಾರ್​ ಮೂಲತಃ ಆಂಧ್ರಪ್ರದೇಶದರು. ಸುಮಾರು ಹತ್ತು ವರ್ಷದಿಂದ ಮಂಡ್ಯದಲ್ಲಿ ನೆಲೆಸಿದ್ದಾರೆ.

ದುಡಿಮೆಗೆಂದು ಬಂದ ಯುವಕನಿಗೆ ದರ್ಶನ್‌ ಬಗ್ಗೆ ಅಪಾರ ಪ್ರೀತಿಯಿದೆ. ತೆಲುಗು ಮನೆ ಭಾಷೆಯಾಗಿದರೂ ದರ್ಶನ್ ಸಿನೆಮಾ ಇವರಿಗೆ ಅಚ್ಚುಮೆಚ್ಚು. ಜೀವನದಲ್ಲಿ ಒಮ್ಮೆಯಾದರೂ ದರ್ಶನ್ ಅವರನ್ನು ಭೇಟಿ ಮಾಡಬೇಕೆಂಬ ಹಂಬಲ ಅಭಿಮಾನಿ ಓಂಕಾರ್​ ಅವರದ್ದಾಗಿದೆ.

ಬೆಂಗಳೂರಿನ ಆರ್​.ಆರ್​.ನಗರ ನಿವಾಸದಲ್ಲಿ ಸಂಭ್ರಮ

ದರ್ಶನ್​ ಅಭಿಮಾನಿಗಳ ಜತೆಗೆ ಬೆಂಗಳೂರಿನ ತಮ್ಮ ಆರ್​.ಆರ್​.ನಗರದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಸಾರಥಿಯ ಮನೆ ಮುಂದೆ ಅವರ ಬೃಹತ್ ಕಟೌಟ್​ಗಳು ರಾರಾಜಿಸುತ್ತಿವೆ. ಹುಟ್ಟುಹಬ್ಬಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಸಂಭ್ರಮಾಚರಣೆಯಲ್ಲಿ ಸಹೋದರ ದಿನಕರ್ ತೂಗುದೀಪ ಭಾಗಿಯಾಗಿದ್ದಾರೆ. ಚಿತ್ರರಂಗದ ಹಲವರು ಶುಭಕೋರಿದ್ದಾರೆ.

Leave a Reply

Your email address will not be published. Required fields are marked *

Back To Top