ಶ್ರೀ ಕ್ಷೇತ್ರ ಧರ್ಮಸ್ಥಳದ ನೀರಿನ ಸಮಸ್ಯೆ ನೀಗಿಸಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದ್ದೇನು ಗೊತ್ತೇ?

ಬೆಂಗಳೂರು: ದಕ್ಷಿಣ ಭಾರತ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳ ಈಗಾಗಲೇ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀರನ್ನು ಒದಗಿಸಲು ಮುಂದಾಗಿದೆ.

ಬಿಬಿಎಂಪಿ ನೌಕರರ ಸಂಘದ ಪದಾಧಿಕಾರಿಗಳು 75 ಸಾವಿರ ಲೀಟರ್​​​​​​​​​ ನೀರನ್ನು ಧರ್ಮಸ್ಥಳಕ್ಕೆ ಸರಬರಾಜು ಮಾಡಿದ್ದಾರೆ. ನೀರಿನ ಸರಬರಾಜು ವಾಹನಕ್ಕೆ ಮೇಯರ್​​ ಗಂಗಾಬಿಕೆ ಮಂಗಳವಾರ ಹಸಿರು ನಿಶಾನೆ ತೋರಿದರು.

ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ 75 ಸಾವಿರ ಲೀಟರ್​ನೀರನ್ನು ಕ್ಯಾನ್​ಗಳು ಮತ್ತು ಬಾಟಲ್​ಗಳಲ್ಲಿ ಸರಬರಾಜು ಮಾಡಲಾಗುತ್ತಿದೆ ಎಂದು ಮೇಯರ್​​ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *