ಡೆಡ್ಲಿ ಗೇಮ್​ ಮೊಮೊಗೆ ಮತ್ತೊಂದು ಬಲಿ?

ನವದೆಹಲಿ​: ಡೆಡ್ಲಿ ಆನ್​ಲೈನ್​ ಗೇಮ್​ ‘ಮೊಮೊ’ಗೆ 12ನೇ ತರಗತಿ ವಿದ್ಯಾರ್ಥಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಆ.20ರಂದು ರಾತ್ರಿ 9ರ ಸುಮಾರಿಗೆ ಕಾಮರ್ಸ್​ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದ. ಆದರೆ ಯುವಕ ಮನೆಯಲ್ಲಿ ನೇಣು ಹಾಕಿಕೊಳ್ಳದೆ ಗ್ರಾಮದ ಹೊರಗಿದ್ದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ.

ಆದರೆ ಕೊಟ್ಟಿಗೆಯ ಗೋಡೆಯ ಮೇಲೆ ‘Hanged Man’, ‘Illuminati’ ಹಾಗೂ ‘metal’ ಎಂಬ ಪದಗಳನ್ನು ಕೆತ್ತಿರುವುದು ಕಂಡು ಬಂದಿದ್ದು, ಮೊಮೊ ಚಾಲೆಂಜ್​ನಿಂದ ಪ್ರೇರಿತನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಮೊಮೊ ಆ್ಯಪ್​ನಲ್ಲಿರುವ ‘Hanged Man’ ಚಿತ್ರ ಮನೀಶ್​ ಬಿಡಿಸಿರುವುದು ಎಂದು ಮೃತ ಮನಿಶ್​ ಸರ್ಕಿ ಸೋದರ ಆಪಾದಿಸಿದ್ದಾನೆ.

ಕೊಟ್ಟಿಗೆಯ ಬಳಿ ಇಂಟರ್​ನೆಟ್​ ಕನೆಕ್ಷನ್​ ಚೆನ್ನಾಗಿ ಸಿಗುತ್ತಿದ್ದಕ್ಕೆ ಮೃತ ಯುವಕ ಆಗಾಗ್ಗೆ ಕೊಟ್ಟಿಗೆಗೆ ಬರುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. (ಏಜೆನ್ಸೀಸ್​)