ಮುಂಬೈ: ಬಾಲಿವುಡ್ ನಟರು ಹಾಲಿವುಡ್ ಚಿತ್ರಗಳಲ್ಲಿ ನಟಿಸುವುದಕ್ಕೆ ಆಡಿಷನ್ ಕೊಡುವುದು ಬಹಳ ಸಹಜವಾದ ವಿಷಯ. ಆದರೆ, ಹಾಲಿವುಡ್ ನಟರು ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದಕ್ಕೆ ಆಡಿಷನ್ ಕೊಡುವುದು ಬಹಳ ಅಪರೂಪವೇ. ಅದರಲ್ಲೂ ಜೇಮ್ಸ್ ಬಾಂಡ್ ಖ್ಯಾತಿಯ ಡೇನಿಯಲ್ ಕ್ರೇಗ್, ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಆಡಿಷನ್ ಕೊಟ್ಟರಂತೆ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲವಂತೆ.

ಇದನ್ನೂ ಓದಿ: ಕಾಶ್ಮೀರದ ಶಾಲೆಯೊಂದರ ಕಟ್ಟಡಕ್ಕೆ ಅಕ್ಷಯ್ ಕುಮಾರ್ ತಂದೆ ಹೆಸರು!
ಅಂದಹಾಗೆ, ಕ್ರೇಗ್ ಆಡಿಷನ್ ಕೊಟ್ಟ ಚಿತ್ರ ಯಾವುದು ಗೊತ್ತಾ? ಆಮೀರ್ ಖಾನ್ ಅಭಿನಯದ ‘ರಂಗ್ ದೇ ಬಸಂತಿ’. ಈ ವಿಷಯವನ್ನು ಸ್ವತಃ ಆ ಚಿತ್ರದ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ತಾ ಹೇಳಿಕೊಂಡಿದ್ದಾರೆ. ‘ದಿ ಸ್ಟ್ರೇಂಜರ್ ಇನ್ ದಿ ಮಿರರ್ ‘ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಈ ವಿಷಯವನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಲೀಕ್ ಆಯ್ತು ಕೃತಿ ಸನೋನ್ ಅಭಿನಯದ ಮಿಮಿ
‘ಚಿತ್ರದಲ್ಲಿ ಕೆಲವು ಬ್ರಿಟಿಷ್ ಅಧಿಕಾರಿಗಳ ಪಾತ್ರಗಳಿವೆ. ಅದರಲ್ಲಿ ಜೇಮ್ಸ್ ಮೆಕೆನ್ಲಿ ಎಂಬ ಬ್ರಿಟಿಷ್ ಜೈಲರ್ನ ಪಾತ್ರಕ್ಕೆ ಸೂಕ್ತ ಕಲಾವಿದರ ಹುಡುಕಾಟದಲ್ಲಿದ್ದೆವು. ಈ ಸಂದರ್ಭದಲ್ಲಿ ಡೇನಿಯಲ್ ಆಡಿಷನ್ ಕೊಟ್ಟಿದ್ದರು. ಇದೇ ಸಮಯದಲ್ಲಿ ಅವರಿಗೆ ಜೇಮ್ಸ್ ಬಾಂಡ್ ಪಾತ್ರ ಮಾಡುವುದಕ್ಕೆ ಅವಕಾಶ ಬಂತು. ಕೊನೆಗೆ ಸ್ವಲ್ಪ ಸಮಯಾವಕಾಶ ಕೇಳಿದರು. ಕೊನೆಗೆ ಅವರು ನಮ್ಮ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ’ ಎಂದು ರಾಕೇಶ್ ಮೆಹ್ರಾ ಹೇಳಿಕೊಂಡಿದ್ದಾರೆ.