Application : ಮೊಬೈಲ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಲು ಮತ್ತು ಜಾಹೀರಾತು ನೀಡಿ ವಂಚನೆ ಮಾಡುವ ಉದ್ದೇಶವಾಗಿದ್ದ ಆ್ಯಪ್ಗಳನ್ನ ಪತ್ತೆ ಹಚ್ಚಲಾಗಿದೆ. ಸೈಬರ್ ಸೆಕ್ಯುರಿಟಿ ಕಂಪನಿ ಬಿಟ್‌ಡೆಫೆಂಡರ್‌ನ ಸಂಶೋಧಕರು 331 ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚಿ ತೆಗೆದು ಹಾಕಿದ್ದಾರೆ.
ಪ್ಲೇ ಸ್ಟೋರ್‌ನಲ್ಲಿ ದುರುದ್ದೇಶಪೂರಕವಾಗಿ ಕೆಲಸ ಮಾಡುತ್ತಿದ್ದ 331 ಆ್ಯಪ್‌ಗಳನ್ನು ಗೂಗಲ್ ತೆಗೆದುಹಾಕಿದೆ. ಈ ಅಪ್ಲಿಕೇಶನ್‌ಗಳು ಆಂಡ್ರಾಯ್ಡ್ 13 ಭದ್ರತೆಯನ್ನು ಸಹ ಬೈಪಾಸ್ ಮಾಡಿದ್ದು, ಒಟ್ಟಾರೆಯಾಗಿ 60 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿವೆ. ದುರುದ್ದೇಶಪೂರಿತ ಅಪ್ಲಿಕೇಶನ್‌ಗಳಾದ ಅಕ್ವಾಟ್ರಾಕರ್, ಕ್ಲಿಕ್ ಸೇವ್ ಡೌನ್‌ಲೋಡರ್, ಸ್ಕ್ಯಾನ್ ಹಾಕ್, ಟ್ರಾನ್ಸ್‌ಲೇಟ್‌ಸ್ಮಾನ್ ಮತ್ತು ಬೀಟ್‌ವಾಚ್ ಸೇರಿ ಒಟ್ಟು 331 ಆ್ಯಪ್‌ಗಳನ್ನು ಸೈಬರ್ ಸೆಕ್ಯೂರಿಟಿ ಕಂಪನಿ ಸಂಶೋಧಕರು ತೆಗೆದುಹಾಕಿದ್ದಾರೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್‌ಗಳು ವಂಚನೆಯ ಉದ್ದೇಶದಿಂದ ಕೆಲಸ ಮಾಡುತ್ತಿದ್ದ ಕಾರಣದಿಂದ ಇವುಗಳನ್ನು ಡಿಲೀಟ್ ಮಾಡಲಾಗಿದೆ.
ಇದನ್ನ ವೇಪರ್ ಆಪರೇಷನ್ ಎನ್ನಲಾಗಿದ್ದು, ಇದು ಸೈಬರ್ ಅಪರಾಧಿಗಳು ನಡೆಸುವ ಮೋಸದ ಅಭಿಯಾನವಾಗಿದೆ. ಆರಂಭದಲ್ಲಿ 180 ಅಪ್ಲಿಕೇಶನ್ಗಳನ್ನ ಹೊಂದಿದ್ದ ಈ ಜಾಲ ಈಗ 331 ಅಪ್ಲಿಕೇಶನ್ಗಳನ್ನ ಹೊಂದಿತ್ತು. ಇವು ಆರೋಗ್ಯ ವಿಚಾರ, QR ಸ್ಕ್ಯಾನರ್‌ಗಳು, ಟಿಪ್ಪಣಿ ಅಪ್ಲಿಕೇಶನ್‌ಗಳು ಮತ್ತು ಬ್ಯಾಟರಿ ಆಪ್ಟಿಮೈಜರ್‌ಗಳಂತಹ ವರ್ಗಗಳಲ್ಲಿ ಹರಡಿವೆ. ಈ ಅಪ್ಲಿಕೇಶನ್‌ಗಳಲ್ಲಿ ಅಕ್ವಾಟ್ರಾಕರ್, ಕ್ಲಿಕ್‌ಸೇವ್ ಡೌನ್‌ಲೋಡರ್ ಮತ್ತು ಸ್ಕ್ಯಾನ್ ಹಾಕ್ ಸೇರಿಕೊಂಡಿವೆ. ಈ ಅಪ್ಲಿಕೇಷನ್ಗಳನ್ನು 1 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಅಪ್ಲಿಕೇಶನ್‌ಗಳನ್ನು 2024ರ ಅಕ್ಟೋಬರ್ ಮತ್ತು 2025 ರ ಮಾರ್ಚ್ ನಡುವೆ ಪ್ಲೇ ಸ್ಟೋರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬ್ರೆಜಿಲ್, ಅಮೆರಿಕ, ಮೆಕ್ಸಿಕೊ, ಟರ್ಕಿ ಮತ್ತು ದಕ್ಷಿಣ ಕೊರಿಯಾದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾಗಿದೆ. ಭಾರತದಂತಹ ದೇಶಗಳಲ್ಲಿಯೂ ಸಹ, ಕಡಿಮೆ ತಾಂತ್ರಿಕ ಜ್ಞಾನ ಹೊಂದಿರುವರು ಇದನ್ನ ಡೌನ್‌ಲೋಡ್ ಮಾಡಿ ಮೋಸದ ಬಲೆಗೆ ಸಿಲುಕಿಕೊಂಡಿದ್ದಾರೆ.
ಆರಂಭದಲ್ಲಿ ಈ ಅಪ್ಲಿಕೇಶನ್‌ಗಳನ್ನು ಕೇವಲ ಜಾಹಿರಾತು ನೀಡುವ ಉದ್ದೇಶಕ್ಕಾಗಿ ಅಭಿವೃದ್ಧಿ ಪಡಿಸಲಾಗಿತ್ತು. ನಂತರ ಕಮಾಂಡ್-ಅಂಡ್-ಕಂಟ್ರೋಲ್ (C2) ಸರ್ವರ್‌ನಿಂದ ನವೀಕರಣ ಮಾಡುವ ಮೂಲಕ ಅಪಾಯಕಾರಿ ಕೋಡ್ ಅನ್ನು ಅಭಿವೃದ್ಧಿ ಪಡಿಸಲಾಯ್ತು. ಕೆಲವು ಅಪ್ಲಿಕೇಶನ್‌ಗಳು ಗೂಗಲ್ ವಾಯ್ಸ್ ನಂತಹ ವಿಶ್ವಾಸಾರ್ಹ ಅಪ್ಲಿಕೇಶನ್‌ಗಳಂತೆ ಕಾಣುವಂತೆ ತಮ್ಮ ಹೆಸರುಗಳನ್ನು ಹೊಂದಿರುತ್ತವೆ. ಈ ಅಪ್ಲಿಕೇಶನ್‌ಗಳನ್ನು ಬಳಕೆದಾರರ ಹಸ್ತಕ್ಷೇಪವಿಲ್ಲದೆ ಸಕ್ರಿಯಗೊಳಿಸಲಾಗುತ್ತದೆ. ಈ ಆ್ಯಪ್ ಮೂಲಕ ನಕಲಿ ಲಾಗಿನ್ ಪುಟಗಳನ್ನು ಸೃಷ್ಟಿಸುವ ಮೂಲಕ ಫೇಸ್‌ಬುಕ್, ಯೂಟ್ಯೂಬ್ ಮತ್ತು ಪಾವತಿ ಗೇಟ್‌ವೇಗಳಿಂದ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿದ್ದರು.
ಭದ್ರತಾ ಕ್ರಮಗಳು
ಗೂಗಲ್ ಈ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಆದರೆ ವರದಿಯ ಪ್ರಕಾರ ಕೆಲವು ಅಪ್ಲಿಕೇಶನ್‌ಗಳು ಇನ್ನೂ ಲಭ್ಯವಿವೆ. ಬಳಕೆದಾರರ ಮೊಬೈಲ್ ಫೋನ್‌ಗಳಿಂದ ಈ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಅಗತ್ಯ ಎಂದು ಬಿಟ್‌ಡೆಫೆಂಡರ್ ಸಂಶೋಧಕರು ಎಚ್ಚರಿಸಿದ್ದಾರೆ. ಇದಕ್ಕಾಗಿ, ಬಳಕೆದಾರರಿಗೆ ಈ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಮತ್ತು ಅವರ ಫೋನ್ ಸುರಕ್ಷತೆಯನ್ನು ಪರಿಶೀಲಿಸಲು ಸಹ ವಿನಂತಿಸಲಾಗಿದೆ.
ನೀವು ಡೌನ್‌ಲೋಡ್ ಮಾಡಿದ್ದೀರಾ?
ನೀವು ಇತ್ತೀಚೆಗೆ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ ಮೊದಲು ಅವುಗಳನ್ನು ನಿಮ್ಮ ಫೋನ್‌ನಿಂದ ತೆಗೆದುಹಾಕಿ. ಅಲ್ಲದೆ ನಕಲಿ ಲಾಗಿನ್ ಪುಟಗಳು ಅಥವಾ ಫುಲ್ ಸ್ಕ್ರೀನ್ ಜಾಹೀರಾತುಗಳಿಂದಾಗಿ ನೀವು ಯಾವುದೇ ಅನುಮಾನಾಸ್ಪದ ವಿಷಯವನ್ನು ಗಮನಿಸಿದರೆ, ನಿಮ್ಮ ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಾಯಿಸಿ. ನಿಮ್ಮ ಮೊಬೈಲ್ ಭದ್ರತೆಗೆ ಆದ್ಯತೆ ನೀಡುವ ಮೂಲಕ ಸೂಕ್ತ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿ.