ಹಿರೇಬಾಗೇವಾಡಿ: ಅಪಾಯ ಲೆಕ್ಕಿಸದ ಹೆದ್ದಾರಿ ದಾಟುವ ಸಾಹಸ!

ಹಿರೇಬಾಗೇವಾಡಿ : ಮಳೆ ನಿಂತು ಹದಿನೈದು ದಿನಗಳು ಗತಿಸಿದ್ದರೂ ಇಲ್ಲಿಯ ಧಾರವಾಡ ಬಸ್ ನಿಲ್ದಾಣದ ಬಳಿಯ ಹೆದ್ದಾರಿಯ ಕೆಳ ಸೇತುವೆಯಲ್ಲಿ ನೀರು ತುಂಬಿ ಜನ ಸಂಚಾರ ದುಸ್ತರವಾಗಿದೆ.

ಅಪಾಯಕರವಾದ ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಚರಿಸುವುದನ್ನು ತಪ್ಪಿಸಲು ಮತ್ತು ಸುರಕ್ಷಿತ ಸಂಚಾರ ಮಾಡಲು ಅಶೋಕಾ ಬಿಲ್ಡಕಾನ್ ನವರು ಹೆದ್ದಾರಿಗೆ ಕೆಳ ಸೇತುವೆ ನಿರ್ಮಿಸಿದ್ದಾರೆ. ಪ್ರತಿನಿತ್ಯ ನೂರಾರು ಜನ ಈ ಕೆಳಸೇತುವೆಯ ಮುಖಾಂತರ ಸಂಚರಿಸುತ್ತಾರೆ. ಆದರೆ ಅದರಲ್ಲಿ ಮೊಳಕಾಲಿನವರೆಗೆ ಮಳೆಯ ನೀರು ಶೇಖರಣೆಯಾಗಿದ್ದು, ಅದು ಹೊರ ಹೋಗಲು ದಾರಿ ಇಲ್ಲದೇ ಸಾರ್ವಜನಿಕರಿಗಾಗಿ ಈ ದಾರಿ ಇದ್ದೂ ಇಲ್ಲದಂತಾಗಿದೆ. ಪದೇಪದೆ ಈ ನೀರನ್ನು ಪಂಪಸೆಟ್ ಮುಖಾಂತರ ಹೊರ ಹಾಕಲಾಗಿದ್ದರೂ ಮತ್ತೆ ನೀರು ಬಂದು ನಿಲ್ಲುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಜನ, ಪ್ರಯಾಣಿಕರು, ಮಹಿಳೆಯರು, ಮಕ್ಕಳೆನ್ನದೇ ಜೀವ ಕೈಯಲ್ಲಿ ಹಿಡಿದುಕೊಂಡು ಹೆದ್ದಾರಿ ದಾಟಬೇಕಾಗಿದೆ. ಹೆದ್ದಾರಿಯಲ್ಲಿ ಭರದಿಂದ ಓಡಾಡುವ ವಾಹನಗಳಿಗೆ ಅಡ್ಡಲಾಗಿ ಜನ ದಾಟುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.

ಈ ಬಗ್ಗೆ ಸಮಾಜ ಸೇವಕ ಬಾಪು ನಾವಲಗಟ್ಟಿ, ಜನ ಹೆದ್ದಾರಿ ದಾಟುವಾಗ ಆಕಸ್ಮಿಕವಾಗಿ ಅಪಘಾತಗಳಾದರೆ ಕೆಳಸೇತುವೆ ಇದ್ದೂ ಹೆದ್ದಾರಿಯಲ್ಲೇಕೆ ಬಂದಿರಿ ಎಂದು ಹೆದ್ದಾರಿ ನಿರ್ವಹಣಾ ಅಕಾರಿಗಳು ಮತ್ತು ಪೊಲೀಸರು ಕೇಳುತ್ತಾರೆ. ಅವಘಡ ಗಳಾದರೆ ಹೊಣೆ ಹೊರಬೇಕಾದವರು ಇಲ್ಲಿ ಇರುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಹೆದ್ದಾರಿ ಪ್ರಾ ಕಾರದವರು ವಿಫಲರಾಗಿದ್ದಾರೆ. ಅವೈಜ್ಞಾನಿಕವಾದ ಹೆದ್ದಾರಿ, ಸರ್ವಿಸ್ ರಸ್ತೆ ಮತ್ತು ಒಳಸೇತುವೆಗಳ ನಿರ್ಮಾಣದಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಸಿದ ಅಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಹಿರೇಬಾಗೇವಾಡಿಯ ಧಾರವಾಡ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕೆಳಸೇತುವೆಯಲ್ಲಿ ನೀರು ತುಂಬಿ ಸಂಚಾರ ಸ್ಥಗಿತವಾಗಿ ಜನರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾರೆ.

Leave a Reply

Your email address will not be published. Required fields are marked *