ಅಪಾಯಕ್ಕೆ ಹಾದಿ…ಹಾನಗಲ್ಲ ಪುರಾತನ ಕುರುಬ ಬಾವಿ

ಹಾನಗಲ್ಲ: ಸ್ಥಳೀಯ ಪುರಸಭೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆಧುನೀಕರಣ, ಸೌಂದಯೀಕರಣಗೊಳಿಸಿದ್ದ ಪಟ್ಟಣದ ಪುರಾತನವಾದ ಕುರುಬ ಬಾವಿ ಅತಿಯಾದ ಮಳೆಯಿಂದಾಗಿ ತುಂಬಿದೆ. ಆದರೆ, ಈ ಬಾವಿಯ ಸುತ್ತಲೂ ನಿಂತಿರುವ ನೀರು ತೆರವುಗೊಳಿಸದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಪಟ್ಟಣದ ಕುರುಬ ಬಾವಿ ಶತಮಾನಗಳಷ್ಟು ಪುರಾತನವಾದ್ದರಿಂದ ಅದನ್ನು ಸ್ಮಾರಕವನ್ನಾಗಿ ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಬಾವಿಯ ಹೊರಭಾಗದ ಆವರಣದಲ್ಲಿ ಉದ್ಯಾನ ನಿರ್ವಿುಸಲಾಗಿತ್ತು. ಐದಾರು ದಶಕಗಳ ಕಾಲ ಈ ಬಾವಿಯ ನೀರನ್ನು ಪಟ್ಟಣದ ಜನತೆ ಕುಡಿಯಲು ಬಳಸುತ್ತಿದ್ದರು. ನಂತರದಲ್ಲಿ ಪುರಸಭೆ ಬಾವಿಯ ನೀರನ್ನು ಪೈಪ್​ಲೈನ್ ಮೂಲಕ ಕುಡಿಯಲು ಸರಬರಾಜು ಮಾಡಿತ್ತು. ಇತ್ತೀಚೆಗೆ ಕುಡಿಯಲು ಆನೆಕೆರೆಯ ನೀರನ್ನು ಬಳಸಿಕೊಂಡಿದ್ದರಿಂದ ಈ ಬಾವಿ ನಿರ್ಲಕ್ಷ್ಯಕ್ಕೊಳಗಾಯಿತು. ಬಾವಿಯ ಸುತ್ತಲೂ ನಿಲ್ಲುವ ನೀರನ್ನು ಹೊರ ಹಾಕಲು ರೂಪಿಸಿದ್ದ ವ್ಯವಸ್ಥೆ ಕೈಕೊಟ್ಟಿದೆ. ಬಾವಿಯ ಆವರಣದಲ್ಲಿ ನೀರು ನಿಂತು ಬಿದ್ದ ಕಸವೆಲ್ಲ ಕೊಳೆತು ಮಲಿನಗೊಂಡಿದೆ.

ಇದೀಗ ಬಾವಿ ತುಂಬಿ ಸುತ್ತ ನೀರು ನಿಂತಿದೆ. ಹೀಗಾಗಿ ಬಾವಿ ಕಾಣದ ಹಂತ ತಲುಪಿದೆ. ಪಕ್ಕದ ಇಂದಿರಾನಗರ ಬಡಾವಣೆಯ ಸಣ್ಣ ಮಕ್ಕಳು ನೀರಿಗಿಳಿದರೆ ಜೀವಕ್ಕೆ ಅಪಾಯ ಎದುರಾಗಲಿದೆ. ಬಾವಿಯ ಮೇಲ್ಭಾಗದಲ್ಲಿ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಅಲ್ಲಲ್ಲಿ ಬಾಯ್ದೆರೆದುಕೊಂಡಿದ್ದು, ಈಜಾಡುವ ಮಕ್ಕಳು ಅದರಲ್ಲಿ ಬೀಳಬಹುದಾದ ಸಾಧ್ಯತೆಯೂ ಇದೆ. ಇದರಿಂದ ಯಾವುದೆ ಸಂದರ್ಭದಲ್ಲಿಯೂ ಅನಾಹುತಗಳು ನಡೆಯಬಹುದಾಗಿದೆ. ಇಲ್ಲಿ ನಿಂತಿರುವ ನೀರಿನಿಂದಾಗಿ ಈ ಪ್ರದೇಶದಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಪುರಸಭೆಯವರು ಸಮಸ್ಯೆಯ ಗಂಭೀರತೆ ಅರಿತು, ಕೂಡಲೇ ಬಾವಿಯ ಆವರಣದಲ್ಲಿರುವ ನೀರನ್ನು ಹೊರಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಲಮೂಲ ರಕ್ಷಿಸಿ

ಬಾವಿಯ ಸುತ್ತಮುತ್ತ ಇರುವ ಜಾಗ ಸುಂದರಗೊಳಿಸಲು 2014ರಲ್ಲಿ ಪುರಸಭೆ ಸುಮಾರು 16.50 ಲಕ್ಷ ರೂಪಾಯಿ ವೆಚ್ಚದಲ್ಲಿ ಬಾವಿಯ ಸುತ್ತ ಕಬ್ಬಿಣದ ಗ್ರಿಲ್ ಅಳವಡಿಸಿ, ಸುತ್ತ ಬಂಡ್ ನಿರ್ವಿುಸಿ ವಿವಿಧ ಗಿಡ ನೆಟ್ಟು ಉದ್ಯಾನದ ರೂಪ ಕೊಡಲಾಗಿತ್ತು. ನೀರೆತ್ತುವ ಯಂತ್ರದ ಸಹಾಯದಿಂದ ಕಾರಂಜಿ ಅಳವಡಿಸಿದ್ದರು. ಈಗ ಅದೆಲ್ಲವೂ ನೀರು ಪಾಲಾಗಿದೆ. ಜಲಮೂಲಗಳನ್ನು ಉಳಿಸುವ ನಿಟ್ಟಿನಲ್ಲಿ ಇಂಥ ಬಾವಿಗಳ ನಿರ್ವಹಣೆ ಕೈಗೊಂಡು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕಾದ ಅಗತ್ಯವಿದೆ.

ಪುರಾತನವಾದ ಕುರುಬ ಬಾವಿಯ ಆವರಣ ಪೂರ್ತಿ ನೀರಿನಿಂದ ತುಂಬಿಕೊಂಡಿದೆ. ಬಾವಿಯೇ ಕಾಣದಂತಾಗಿದೆ. ಇದರಲ್ಲಿ ಮಕ್ಕಳು ಪಾಲಕರ ಕಣ್ತಪ್ಪಿಸಿ ನೀರಿಗಿಳಿಯುತ್ತಿರುವ ಘಟನೆ ನಡೆಯುತ್ತಿವೆ. ಮಕ್ಕಳು ನೀರಿಗಿಳಿಯದಂತೆ ಭದ್ರತೆ ಕೈಗೊಳ್ಳುವ ಅಗತ್ಯವಿದೆ. ಈ ಆವರಣದಲ್ಲಿರುವ ನೀರನ್ನು ತೆರವುಗೊಳಿಸಿ, ಬಾವಿ ಮೊದಲಿನಂತೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಪುರಸಭೆ ಮುಂದಾಗಬೇಕು.

| ಸಂತೋಷ ಭಜಂತ್ರಿ, ಇಂದಿರಾನಗರ ನಿವಾಸಿ

ಮಳೆಯಿಂದಾಗಿ ಬಾವಿಯಲ್ಲಿ ಅಂತರ್ಜಲ ಹೆಚ್ಚಾಗಿದೆ. ಈ ಬಾವಿಯು ತಗ್ಗಿನಲ್ಲಿದ್ದು, ಮೇಲಿಂದ ಮೇಲೆ ಹೆಚ್ಚು ಮಳೆಯಾಗುತ್ತಿರುವುದರಿಂದ ನೀರು ಶೇಖರಣೆಯಾಗುತ್ತಿದೆ. ಈ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಮಕ್ಕಳು ಬಾವಿಯತ್ತ ಬರದಂತೆ ಸಾರ್ವಜನಿಕರೂ ಕಾಳಜಿ ವಹಿಸಬೇಕಿದೆ.

| ನಾಗರಾಜ ಮಿರ್ಜಿ, ಪುರಸಭೆ ಇಂಜಿನಿಯರ್ ಹಾನಗಲ್ಲ

Share This Article

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

30 ದಿನಗಳಲ್ಲೇ ಸ್ಲಿಮ್ ಆ್ಯಂಡ್​ ಫಿಟ್​ ಆಗಬೇಕಾ? ಪ್ರತಿದಿನ ಇಡ್ಲಿ ತಿನ್ನಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…