18.5 C
Bangalore
Monday, December 16, 2019

ಅತ್ತಿಕೊಡ್ಲು, ಅಬ್ಬಿಮಕ್ಕಿ ಅಪಾಯಕಾರಿ ಕಾಲುಸಂಕ

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಶ್ರೀಪತಿ ಹೆಗಡೆ ಹಕ್ಲಾಡಿ ಹೊಸಂಗಡಿ
ತಂತಿ ಮೇಲೆ ಸರ್ಕಸ್ ಬೇಕಾದರೂ ಮಾಡಬಹುದು. ಸಂಕ ದಾಟುವುದು ಕಷ್ಟವೇ ಸರಿ. ಒಂದಲ್ಲ ಎರಡು ಸಂಕ ದಾಟಿ ದಡ ಸೇರುವುದರೊಳಗೆ ಜೀವ ಬಾಯಿಗೆ ಬರುತ್ತದೆ. ಪ್ರತಿದಿನ ಸಂಕದ ಮೇಲೆ ಜನ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಅನಿವಾರ್ಯತೆ ಇದೆ. ಇಂಥ ವ್ಯವಸ್ಥೆ ಹಿನ್ನೆಲೆಯೇ ಗ್ರಾಮೀಣ ಭಾಗದ ಯುವಶಕ್ತಿ ಪೇಟೆ ಸೇರಲು ಕಾರಣ ಎಂದರೆ ಅತಿಶಯೋಕ್ತಿಯಲ್ಲ.

ಬೈಂದೂರು ತಾಲೂಕು ಸಿದ್ದಾಪುರ ಹಾಗೂ ಹೊಸಂಗಡಿ ಗ್ರಾಮದ ಗಡಿ ಭಾಗದಲ್ಲಿರುವ ಅತ್ತಿಕೊಡ್ಲು ಹಾಗೂ ಅಬ್ಬಿಮಕ್ಕಿ ಕಾಲಸಂಕದ ಸಂಕಷ್ಟಕ್ಕೆ ಹೈರಾಣಾಗಿರುವ ಊರು. ಅತ್ತಿಕೊಡ್ಲು ಹೊಸಂಗಡಿ ಗ್ರಾಪಂ ಬಂದರೆ, ಅಬ್ಬಿಮಕ್ಕಿ ಸಿದ್ದಾಪುರ ಗ್ರಾಮದ ತೆಕ್ಕೆಯಲ್ಲಿದೆ. ಕೋಟಿಕೆರೆ ಹೊಳೆ ಕಪ್ಪೆಹೊಂಡ ಹೊಳೆ ಊರಿಗೆ ದಿಗ್ಬಂಧನ ಹಾಕುತ್ತದೆ.

ಕಪ್ಪೆಹೊಂಡ ಹೊಳೆ ಹಾಗೂ ಕೋಟಿಕೆರೆ ಹೊಳೆ ಅತ್ತಿಕೊಡ್ಲು ಹಾಗೂ ಅಬ್ಬಿಮಕ್ಕಿ ಕೃಷಿಗೆ ಜಲ ಮೂಲ. ಕುಡಿಯುವ ನೀರಿನಿಂದ ಹಿಡಿದು ಕೃಷಿ ಕಾಯಕದ ವರೆಗೆ ಈ ಎರಡು ಹೊಳೆ ಜೀವಜಲ ತವರು. ಅದೇ ಮಳೆಗಾಲದಲ್ಲಿ ಹೊಳೆಯ ರಕ್ಕಸ ಶಕ್ತಿಗೆ ಸಂಚಾರ ಕಬ್ಬಿಣದ ಕಡಲೆ.

ಅಬ್ಬಿಮಕ್ಕಿ ಹಾಗೂ ಅತ್ತಿಕೊಡ್ಲು ಪರಿಸರದಲ್ಲಿ 20ಕ್ಕೂ ಹೆಚ್ಚು ಮನೆಗಳಿದ್ದು, 100ಕ್ಕೂ ಮಿಕ್ಕ ಜನರಿದ್ದಾರೆ. ಕೃಷಿ ಇಲ್ಲಿನ ಪ್ರಮುಖ ಉದ್ಯೋಗ. ಇಲ್ಲಿನ ಸಂಪರ್ಕ ಸೇತು ಕಾಲುಸಂಕ ಭದ್ರವಾಗಿಲ್ಲ. ಅಲ್ಲಾಡುವ ಅಂಕುಡೊಂಕು ಸಂಕದ ಮೇಲೆ ಅಲ್ಲಾಡುವ ಆಧಾರ ಕೈಪಿಡಿ ಹಿಡಿದು ದಾಟುವುದೇ ದೊಡ್ಡ ಸಾಹಸ. ಜೋರು ಮಳೆ ಬಂದರೆ, ಸಂಕದ ಮೇಲೆ ನೀರು ನುಗ್ಗುತ್ತದೆ. ಜೋರು ಮಳೆಗೆ ಕೃಷಿ ಕಾಯಕದಿಂದ ಹಿಡಿದು ಎಲ್ಲ ಚಟುವಟಿಕೆ ನಿಲ್ಲುವ ಜತೆಗೆ ಇಡೀ ಊರು ಜಲಸ್ತಂಭನಕ್ಕೆ ಒಳಗಾತ್ತದೆ. ನೀರು ಹೆಚ್ಚಾದಾಗ ಸಂಕ ದಾಟುವ ಸಾಹಸಕ್ಕೆ ಇಳಿದರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ. ಅದೆಷ್ಟೋ ಬಾರಿ ಸಂಕ ದಾಟುವಾಗ ನೀರಿಗೆ ಬಿದ್ದವರೂ ಇದ್ದಾರೆ. ಜಾನುವಾರು ಕೊಚ್ಚಿ ಹೋಗಿದ್ದೂ ಇದೆ.

ಪರಿಸರ ವಾಸಿಗಳು ಕಾಲುಸಂಕ ಮಾಡಿಕೊಡಿ ಎಂದು ಸ್ಥಳೀಯ ಗ್ರಾಪಂಗೆ ಮನವಿ ಮಾಡಿದ್ದಾರೆ. ಜನಪ್ರತಿನಿಧಿಗಳನ್ನು ವಿನಂತಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.

ಜಾಗ ಕೊಡುವವರಿದ್ದಾರೆ: ಅತ್ತಿಕೊಡ್ಲು ಅಬ್ಬಿಮಕ್ಕಿ ಹೊಳೆಗೆ ಸ್ಥಳೀಯರು ಕಾಲುಸಂಕ ಮಾಡಿಕೊಳ್ಳುತ್ತಾರೆ. ಸಂಕಕ್ಕೆ ಬೇಕಾದ ಅಡಕೆ ಮರವನ್ನು ಸ್ಥಳೀಯ ಕೃಷಿಕರು ನೀಡುತ್ತಿದ್ದು, ಸಂಕಕ್ಕೆ ತಗಲುವ ವೆಚ್ಚ ಸ್ಥಳೀಯರೇ ಭರಿಸಿಕೊಳ್ಳುತ್ತಾರೆ. ಕೃಷಿಗೆ ಬೇಕಾದ ಗೊಬ್ಬರ, ಸೊಪ್ಪು ಎಲ್ಲವೂ ಸಂಕದ ಮೂಲಕವೇ ತರಬೇಕು. ಸಣ್ಣ ಊರು ಎರೆಡೆರಡು ಕಾಲುಸಂಕ ಮಾಡುವುದಕ್ಕೆ ಆಗುವುದಿಲ್ಲ ಎಂಬ ಸಬೂಬು ಹೇಳಿದರೂ, ಎರಡೂ ಹೊಳಗೆ ‘ವಿ’ ಆಕಾರದಲ್ಲಿ ಒಂದೇ ಫುಟ್‌ಬ್ರಿಜ್ ಮೂಲಕ ಸಂಪರ್ಕ ನೀಡಲು ಸಾಧ್ಯವಿದೆ. ಕಾಲುಸಂಕಕ್ಕೆ ಜಾಗ ಬಿಟ್ಟುಕೊಡಲು ಜಾಗದ ಮಾಲೀಕರು ಸಿದ್ಧವಿದ್ದರೂ ಫುಟ್‌ಬ್ರಿಜ್ ಮಾಡಲು ಕಾಲ ಬಂದಿಲ್ಲ.

ಕೃಷಿ ಚಟುವಟಿಕೆಗೆ, ಜೀವನ ಸಾಗಿಸಲು ಕಾಲುಸಂಕವೇ ಪ್ರಮುಖ ಆಧಾರ ಕೊಂಡಿ. ನನ್ನ ಸ್ವಂತ ಜಾಗ ತಿರುಗಾಡಲು ಫುಟ್‌ಬ್ರಿಜ್ ಮಾಡಲು ಬಿಟ್ಟುಕೊಡುವ ಜತೆಗೆ ಬ್ರಿಜ್ ಮೆಟೀರಿಯಲ್ ಸಾಗಿಸಲು ನಮ್ಮ ಗದ್ದೆಯಲ್ಲಿ ಅವಕಾಶ ಮಾಡಿಕೊಡುತ್ತೇನೆ ಎಂದರೂ ನಮ್ಮ ಕಷ್ಟಕ್ಕೆ ಯಾರೂ ಬಂದಿಲ್ಲ. ಅಭಿವೃದ್ಧಿ ನಗರಕ್ಕೆ ಸೀಮಿತವಾಗಿದೆ. ಹಳ್ಳಿಗಳನ್ನು ನಿರ್ಲಕ್ಷಿೃಸುವುದರಿಂದ ಗ್ರಾಮೀಣ ಭಾಗದ ಯುವ ಜನತೆ ಕೃಷಿ ಬದುಕಿಗೆ ವಿದಾಯ ಹೇಳಿ ಪಟ್ಟಣ ಸೇರುತ್ತಿದ್ದಾರೆ. ನಾವು ನಮ್ಮೂರಲ್ಲೇ ಉಳಿಬೇಕು ಅಂತಿದ್ದರೆ ನಮಗೊಂದು ಫುಟ್‌ಬ್ರಿಜ್ ಮಾಡಿಕೊಡಲಿ.
ಚಂದ್ರಶೇಖರ ಶೆಟ್ಟಿ, ಕೃಷಿಕ, ಅಬ್ಬಿಮಕ್ಕಿ

ಜೋರು ಮಳೆಯಿದ್ದು, ಹಳ್ಳ ಉಕ್ಕಿ ಹರಿಯುತ್ತಿದ್ದರೆ ಮನೆಯವರು ಬಂದು ಸಂಕ ದಾಟಿಸಿ ಹೋಗಿ ಸಾಯಂಕಾಲ ಕರೆದುಕೊಂಡು ಹೋಗಬೇಕು. ವಿಪರೀತ ಮಳೆಯಿದ್ದು, ಸಂಕದಮೇಲೆ ನೀರು ಹರಿಯುತ್ತಿದ್ದರೆ, ಕಾಲೇಜಿಗೆ ಅನಿವಾರ್ಯ ರಜೆ ಮಾಡಬೇಕಾಗುತ್ತದೆ. ಜಟಾಪಟಿ ಮಳೆಯಲ್ಲಿ ಕೊಡೆಹಿಡಿದು ಕಾಲಸಂಕ ದಾಟುವುದರೊಳಗೆ ಬಟ್ಟೆಬರೆ ಅರ್ಧ ಒದ್ದೆಯಾಗಿ ಅಲ್ಲಿಂದ ಮೂರು ಕಿ.ಮೀ. ನಡೆದು ಬಸ್ ಹಿಡಿಯುವದರೊಳಗೆ ಪೂರ್ತಿ ಒದ್ದೆಯಾಗುತ್ತೇವೆ. ಫುಟ್‌ಬ್ರಿಜ್ ಮಾಡಿಕೊಟ್ಟು, ರಸ್ತೆ ಅಭಿವೃದ್ಧಿ ಆದರೆ ಮಳೆಗಾಲದಲ್ಲಿ ಆಟೋದಲ್ಲಿ ಹೋಗಿ ಬರಲು ಅನುಕೂಲವಾಗುತ್ತದೆ.
ಸ್ವಾತಿ, ಬಸ್ರೂರು ಕಾಲೇಜಿನಲ್ಲಿ ಓದುತ್ತಿರುವ ಪರಿಸರದ ವಿದ್ಯಾರ್ಥಿನಿ

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...