blank

ದಂಡಂ ದಶಗುಣಂ ಯೋಗದಂಡಂ ಶತಗುಣಾಂ ಭವೇತ್

Yoga

Yogakshemaಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ‘ದಂಡಂ ದಶಗುಣಾಂ ಭವೇತ್’ ಎಂದು ಉಲ್ಲೇಖಿತವಾಗಿದ್ದು, ‘ಯೋಗದಂಡಂ ಶತಗುಣಾಂ ಭವೇತ್’ ಎಂಬುದು ಯೋಗಸಾಧಕರ ಅನುಭವ ನುಡಿ. ‘ದಂಡದ ದಶಪಟ್ಟು ಉಪಯೋಗವಾದರೆ; ಯೋಗದಂಡದ ಶತಪಟ್ಟು ಪರಿಣಾಮಕಾರಿ ಉಪಯೋಗ’ ಎಂದು ಅರ್ಥೈಸಬಹುದು.

blank

 

ದಂಡದ ಹತ್ತು ಉಪಯೋಗಗಳು

ವಿಶ್ವಾಮಿತ್ರೇ ಚ ವೃದ್ಧೇ ಚ ರಾತ್ರೌ ಅಪ್ಸು ಕರ್ಧಮೇ |
ಅಂಧೇ ಸರ್ಪೆ ಚ ದಂಡಃ ಸ್ಯಾತ್ ದಶಗುಣಂ ಭವೇತ್ ||

1. ವಿಹಂಗ (ಪಕ್ಷಿಗಳನ್ನು ಓಡಿಸಲು) – ದಂಡವನ್ನು ಹೊಲದಲ್ಲಿ ಪಕ್ಷಿಗಳನ್ನು ಓಡಿಸಲು ಬಳಸಲಾಗುತ್ತದೆ. ಇದು ಬೆಳೆಗಳಿಗೆ ಹಾನಿ ತಡೆಯಲು ಸಹಾಯಕವಾಗುತ್ತದೆ. 2. ಶ್ವ (ಅಪರಿಚಿತ ನಾಯಿಗಳನ್ನು ತಡೆಯಲು)= ಅಪರಿಚಿತ ಅಥವಾ ಉಗ್ರನಾಯಿಗಳಿಂದ ರಕ್ಷಣೆಗೆ ದಂಡವನ್ನು ಉಪಯೋಗಿಸಬಹುದು. 3. ಅಮಿತ್ರ (ಶತ್ರುಗಳಿಂದ ರಕ್ಷಣೆ)- ಶತ್ರುಗಳಿಂದ ರಕ್ಷಿಸಿಕೊಳ್ಳಲು ದಂಡವು ಶಕ್ತಿಯ ಸಂಕೇತವಾಗಿ, ರಕ್ಷಣೆಯ ಸಾಧನವಾಗಿದೆ. 4. ವೃದ್ಧ (ವೃದ್ಧರಿಗೆ ಸಹಾಯ) – ದಂಡವು ವೃದ್ಧರಿಗೆ ಆಧಾರವಾಗಿ, ಸಮರ್ಥವಾಗಿ ನಡೆಯಲು ಸಹಾಯ ಮಾಡುತ್ತದೆ. ಇದು ಅಸಹಾಯಕರ, ಕ್ಷೀಣಬಲದವರ ಆಧಾರದ ಪ್ರಾಮುಖ್ಯವನ್ನು ಸೂಚಿಸುತ್ತದೆ. 5. ರಾತ್ರೌ (ರಾತ್ರಿ ಸಮಯದಲ್ಲಿ)-ಕತ್ತಲಿನಲ್ಲಿ ದಂಡವು ರಕ್ಷಣಾ ಸಾಧನವಾಯಿತು. 6. ಅಂಧೇ (ಕಾಣದವರಿಗೋಸ್ಕರ)- ಅಂಧರಿಗೆ ದಂಡವು ಸಹಾಯಕ ಸಾಧನವಾಗಿ, ಆಪತ್ತುಗಳ ಮಧ್ಯೆ ಸಪಕ್ಷಿತವಾಗಿ ಸಾಗಲು ಮಾರ್ಗದರ್ಶನ ಒದಗಿಸುತ್ತದೆ. 7. ಕರ್ದಮೇ- ಕೆಸರು ಅಥವಾ ಮರಳಿನಲ್ಲಿ ಹುದುಗಿದಾ ಹೊರಬರಲು ಬಳಸಲಾಗುತ್ತದೆ. 8. ಸರ್ಪೆ (ಹಾವಿನಿಂದ ರಕ್ಷಣೆ) – ಹಾವುಗಳಿಂದ ದೂರವಿಡಲು ದಂಡವು ಸಂರಕ್ಷಣಾ ಸಾಧನವಾಯಿತು. 9. ಅಪ್ಸು (ನೀರಿನ ಪಕ್ಕದಲ್ಲಿ) – ನೀರಿನ ಪಕ್ಕದಲ್ಲಿ ಹಾಗೂ ನೀರಿನೊಳಗೆ ದಂಡವು ಸಮತೋಲನ ನೀಡುತ್ತದೆ. ಸುರಕ್ಷಿತ ಸಾಗಲು ಸಹಾಯ ಮಾಡುತ್ತದೆ. 10. ಕ್ರೀಡೆ (ಆಟಗಳಲ್ಲಿ) – ದಂಡವು ಆಟಗಳಲ್ಲಿ ಸಹಾಯಕ ಸಾಧನವಾಯಿತು.

ದಂಡ ಯೋಗ ಅಥವಾ ಯೋಗದಂಡ: ಶಕ್ತಿ, ಭಂಗಿ ಮತ್ತು ಚುರುಕುತನ. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಯೋಗಾಸನಗಳನ್ನು ಅಧಿಕೃತವಾಗಿ ಕ್ರೀಡೆಯಾಗಿ ಪರಿಗಣಿಸಿದ್ದು, ದಂಡ ಯೋಗವು ವೈವಿಧ್ಯಮಯ ಪ್ರಯೋಜನಗಳನ್ನು ಒದಗಿಸುತ್ತದೆ. ಈಗಾಗಲೇ ಯೋಗಾಸನ ಸ್ಪರ್ಧೆಯ ಮೂಲಕ ಒಲಂಪಿಯಾಡ್ ರಾಜ್ಯ-ರಾಷ್ಟ್ರಮಟ್ಟದಲ್ಲಿ ಶಾಲಾ ಕಾಲೇಜು ಸಾರ್ವಜನಿಕ ವಲಯದಲ್ಲಿ ಆರಂಭವಾಗಿದ್ದು ಮುಂಬರುವ ದಿನಗಳಲ್ಲಿ ಏಷಿಯಾಡ್ ಹಾಗೂ ಒಲಂಪಿಕ್ ಕ್ರೀಡೆಯಲ್ಲೂ ಸ್ಥಾನ ಪಡೆಯಲಿದೆ.

ದಂಡ ಯೋಗದ ಪ್ರಯೋಜನಗಳು

  • ಸರಿ ಸೌಷ್ಠವವ ಭಂಗಿ: ದಂಡ ಯೋಗವು ಮೂಳೆ ಮತ್ತು ಮೇರುದಂಡ ಮಧ್ಯ ಶರೀರದ ಮುಖ್ಯ ಭಾಗವನ್ನು ಸದೃಢಗೊಳಿಸಿ ಸರಿಯಾದ ಭಂಗಿಯನ್ನು ಸಾಧಿಸಲು ಸಹಕಾರಿ.
    ಚಲನೆ ಮತ್ತು ಸಮರ್ಥತೆಯನ್ನು ಪಡೆದು ದೇಹದ ಚುರುಕುತನ ಮತ್ತು ಶಕ್ತಿಯನ್ನು ಹೆಚ್ಚಿಸಬಹುದು.
    ವೃದ್ಧರಿಗೆ ಮತ್ತು ಅಂಗವಿಕಲರಿಗೆ ದಂಡವು ಆಧಾರದಂತೆ ಕೆಲಸ ಮಾಡುವುದರಿಂದ ಉಪಯೋಗಕಾರಿಯಾಗಿದೆ.

ಆತ್ಮ ವಿಶ್ವಾಸವೃದ್ಧಿ: ಯೋಗದಂಡದೊಂದಿಗೆ ಅಭ್ಯಾಸವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಭಯವನ್ನು ಕಡಿಮೆ ಮಾಡುತ್ತದೆ.

ದಂಡ ಝಾಲನಾ ಲುರ್ಹಕಣಾಸನ: (ತೂಗುವುದು ಮತ್ತು ಉರುಳುವುದು) ಇದೊಂದು ಪವನಮುಕ್ತಾಸನ ಪ್ರಕಾರ. ಬೆನ್ನಿನ ಮೇಲೆ ಅಂಗಾತ ಮಲಗಿರಿ. ಎರಡೂ ಕಾಲುಗಳನ್ನು ಎದೆಯತ್ತ ಬಾಗಿಸಿ. ಪಾದಗಳೆರಡರ ಅಡ್ಡವಾಗಿ ದಂಡವನ್ನು ಬಳಸಿ ಕೈಗಳಿಂದ ಎದೆ ಭಾಗಕ್ಕೆ ಎಳೆದುಕೊಳ್ಳಿರಿ. ಪೃಷ್ಠವು ನೆಲಕ್ಕಿಂತ ಸ್ವಲ್ಪ ಮೇಲಿರಲಿ. ಇಡೀ ದೇಹವನ್ನು ಹಿಂದಕ್ಕೂ ಮುಂದಕ್ಕೂ ಬೆನ್ನು ಹುರಿಯ ಮೇಲೆ ತೂಗಾಡಿಸಿ. ಮುಂದೆ ತೂಗುವಾಗ ಪಾದಗಳ ಕೆಳಗೆ ದಂಡ ಆಧಾರವಿರಲಿ. ಮಂಡಿಯ ಕೆಳಗೆ ಕೈಗಳನ್ನು ಬಳಸಿ ದಂಡ ಹಿಡಿದು ಅಭ್ಯಾಸ ಮಾಡಲು ಕಷ್ಟವಾದರೆ, ಮೊಣಕಾಲಿನ ಪಕ್ಕದ ತೊಡೆಗಳ ಬದಿಯನ್ನು ದಂಡ ಬಳಸಿ ಅಭ್ಯಾಸಮಾಡಿ.

ಉಸಿರಾಟ: ಅಭ್ಯಾಸದುದ್ದಕ್ಕೂ ಶ್ವಾಸೋಚ್ವಾಸ ಸಹಜವಾಗಿರಲಿ. ಗಮನ ಚಲನೆಯ ಸಮನ್ವಯತೆಯ ಕಡೆಗಿರಲಿ. ಶವಾಸನದಲ್ಲಿ ವಿಶ್ರಮಿಸುವಾಗ ಬೆನ್ನು ಮತ್ತು ಪೃಷ್ಠದ ಮೇಲೆ ಆಸನದ ಪರಿಣಾಮದ ಕಡೆಗಿರಲಿ.

ವಿಧಿ ನಿಷೇಧಗಳು: ತೀವ್ರ ಬೆನ್ನು ನೋವಿನ ಸಮಸ್ಯೆ ಇರುವವರು ಇದನ್ನು ಮಾಡಬಾರದು.

ಪ್ರಯೋಜನಗಳು: ಬೆನ್ನು, ಪೃಷ್ಠ ಹಾಗೂ ನಿತಂಬಗಳಿಗೆ ಈ ಆಸನವು ಮಾಲೀಶು ಮಾಡುತ್ತದೆ. ಬೆಳಗ್ಗೆ ಎದ್ದಕೂಡಲೇ ಮೊದಲಿಗೇ ಈ ಆಸನ ಮಾಡುವುದು ವಾತಪ್ರಕೋಪ ನಿವಾರಣೆಗೆ ಪರಿಣಾಮಕಾರಿ.

ಅಭ್ಯಾಸ ಸೂಚನೆ: ಬೆನ್ನು ಹುರಿಗೆ ಘಾಸಿಯಾಗದಂತೆ ನೋಡಿಕೊಳ್ಳಲು ಮಡಿಸಿದ ಕಂಬಳಿ- ಹಾಸುಗೆ ಬಳಸಿ. ಹಿಂದಕ್ಕೆ ತೂಗುವಾಗ ತಲೆಯು ಮುಂದೆಯೇ ಇರಬೇಕು. ತಲೆಯು ನೆಲಕ್ಕೆ ಬಡಿಯದಂತೆ ಎಚ್ಚರವಹಿಸಿ.

ತಟಸ್ಥ ತಾಣದಲ್ಲಿ ತ್ರಿಕೋನ ಸರಣಿ ಆಡಿ ಎಂದ Pak​; ಬೇಡಿಕೆಗೆ ಸೊಪ್ಪು ಹಾಕದ ICC-Bcci

ಕುಡ್ಕೊಂಡ್​ ಬಂದಿದ್ದೀಯಾ ಬ**** ಅಭಿಮಾನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ Rohit Sharma; ವಿಡಿಯೋ ವೈರಲ್​

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank