ದಂಡ ಸಮಕೋನಾಸನದಿಂದ ಡೊಂಕು ಬೆನ್ನು ಬಿಗಿತ ನಿವಾರಣೆ

Yoga

Yogakshemaದಂಡಂ ದಶಗುಣಂ ಭವೇತ್ ಎಂಬ ಪ್ರಸಿದ್ಧ ಸಂಸ್ಕೃತ ವಾಕ್ಯವು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿತವಾಗಿದ್ದು, ಇದನ್ನು ದಂಡದ ಹತ್ತು ಪರಿಣಾಮಕಾರಿ ಉಪಯೋಗ ಎಂದೂ ಅರ್ಥೈಸಬಹುದು. ದಂಡವನ್ನು ಲಟ್ಟಿ, ಕರುವು, ಲಾಟಿ, ಕೋಲು, ಸಾಲಿಗೆ, ಕೇನ್​ಚೆಂಬು, ಬಲೆಗೆ, ತೆರೆಗಾ, ಗದ್ರಿ, ಯಂತ್ರದಂಡ, ಹಗ್ಗದಕೋಲು, ಚಡ್ಡಿ ಮುಂತಾಗಿ ಕರೆಯುವರು. ಆಡು ಭಾಷೆಯಲ್ಲಿ ದಡ್ಡನಿಗೆ, ಅಸಮರ್ಥನಿಗೆ ಆಲಸಿಗೆ, ಸಾಧಿಸುವಲ್ಲಿ ಅಸಡ್ಡೆ ತೋರುವವನಿಗೆ ದಂಡ ಎನ್ನುವುದು ರೂಢಿ. ಅಪರಾಧಿಗೆ ಶಿಕ್ಷೆ ನೀಡುವ ಕ್ರಮ-ನಿಯಮಕ್ಕೂ ದಂಡ ಎನ್ನುವರು. ದಂಡದಲ್ಲಿ ಲಘುದಂಡ, ಮಹಾದಂಡ, ಶಿಕ್ಷಾದಂಡ, ಆರ್ಥಿಕ ದಂಡ, ಅತ್ಯಂತ ಕಠಿಣ ದಂಡ, ಕಾನೂನು ದಂಡ, ಆರೋಗ್ಯ ದಂಡ, ಫೌಜುದಾರಿ ದಂಡ, ಅನಾಶಾಸ್ತ್ರದ ದಂಡ, ಅಜೀವ ದಂಡಗಳು ದಂಡಸಂಹಿತೆಯಲ್ಲಿವೆ.

blank

ಭಾರತೀಯ ಪರಂಪರೆಯಲ್ಲಿ ದಂಡದ ಉಪಯೋಗವು ಆಧ್ಯಾತ್ಮಿಕ ಅನುಷ್ಠಾನ, ಔಷಧೋಪಯೋಗ, ಆತ್ಮರಕ್ಷಣಾ ತಂತ್ರ ಮತ್ತು ದೈನಂದಿನ ಬದುಕಿನಲ್ಲಿ ವಿಭಿನ್ನ ಕೆಲಸಗಳಿಗೆ ಪ್ರಮುಖವಾಗಿದೆ. ಭಾರತೀಯ ಸಂಸ್ಕೃತಿಯ ವಿವಿಧ ಆಯಾಮಗಳಲ್ಲಿ ದಂಡವು ಹೇಗೆ ಬಳಕೆಯಾಗಿದೆ ಎಂಬುದನ್ನು ಸ್ಥೂಲವಾಗಿ ವಿವರಿಸಲಾಗಿದೆ.

1. ಯೋಗದಂಡ: ಯೋಗಿಗಳು, ಋಷಿ- ಮುನಿಗಳು ತಮ್ಮಧ್ಯಾನ, ಪ್ರಾಣಾಯಾಮ, ತಪಸ್ಸಾಧನೆಗೆ ಸಹಾಯಕ ಸಾಧನವಾಗಿ ಬಳಸು ವರು. ಉಸಿರಾಟದ ನಿಯಂತ್ರಣವನ್ನು ನಿರ್ವಹಿಸಲು ಹಾಗೂ ಧ್ಯಾನದ ಸಮಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹಾಗೂ ದೀರ್ಘಕಾಲ ಕುಳಿತುಕೊಳ್ಳಲು ಶಾರೀರಿಕ ಬೆಂಬಲ ನೀಡುತ್ತದೆ. ಪ್ರಾಣಾಯಾಮ ಅಭ್ಯಾಸದಲ್ಲಿ ಇಡಾ ಪಿಂಗಳ(ಎಡ-ಬಲ ನಾಸಿಕ) ನಾಡಿಗಳಿಂದ ಸಮಾನ ಉಸಿರಾಟವನ್ನು ಹೊಂದಲು ದಂಡವನ್ನು ಉಪಯೋಗಿಸುತ್ತಿದ್ದರು.

2. ಚಾರಣ ದಂಡ: ಹಿಮಾಲಯ ಮುಂತಾದ ಪರ್ವತ ಚಾರಣ ಸಾಹಸಿಗರಿಗೆ ಗುಡ್ಡ, ಕಣಿವೆ, ಪರ್ವತ, ಪ್ರದೇಶಗಳಲ್ಲಿ, ತುರ್ತು ಸಂದರ್ಭ ಮತ್ತು ಕಷ್ಟಕರ ಪರಿಸರದಲ್ಲಿ ಪ್ರಯಾಣ ಮಾಡುವವರಿಗೆ ಬಳಸುವ ಆಧಾರ ಧೈರ್ಯದಂಡವಾಗಿದೆ. ವನ್ಯ ಪ್ರಾಣಿಗಳಿಂದ ರಕ್ಷಣೆಗೂ ಸಹಾಯಕ.

3. ಔಷಧೋಪಯೋಗದಲ್ಲಿ ದಂಡ: ಆಯುರ್ವೆದ ಮತ್ತು ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಶುಶ್ರೂಷೆಗೆ ಕೆಲವು ಸಸ್ಯ ಮತ್ತು ಮರಗಳನ್ನು ಔಷಧೀಯ ಗುಣಗಳಿಗಾಗಿ ಬಳಸುತ್ತಾರೆ. ಈ ವಿಶೇಷ ಮರದಿಂದ ಮಾಡಿದ ದಂಡಗಳನ್ನು ಕೆಲವು ರೀತಿಯ ಚಿಕಿತ್ಸೆ ಹಾಗೂ ಶಕ್ತಿಯ ಸಮತೋಲನಕ್ಕಾಗಿ ಬಳಸುತ್ತಾರೆ.

ಔಷಧೀಯ ಮರ: ನೀಮ್ ಚಂದನ ಮತ್ತು ಪೀಪ್ಪಲ್ ಮರದ ದಂಡಗಳಿಗೆ ಚರ್ಮ ಮತ್ತು ಆರೋಗ್ಯಕ್ಕೆ ಲಾಭದಾಯಕ ವಾಗುವ ಗುಣಗಳಿವೆ. ನೀಮ್ ದಂಡಕ್ಕೆ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಇದನ್ನು ಹಳ್ಳಿಗಳಲ್ಲಿ ದಂತ ಶುಭ್ರವಾಗಿಯೂ ಬಳಸುತ್ತಾರೆ.

4. ನಿಯಮ ಮತ್ತು ಅಧಿಕಾರದ ಸಂಕೇತವಾಗಿ ದಂಡ: ಇತಿಹಾಸದಲ್ಲಿ ದಂಡವು ಶಾಸನ, ನಿಯಮ ಮತ್ತು ಅಧಿಕಾರಕ್ಕೆ ಸಂಬಂಧಿಸಿದಂತೆ ಬಳಸಲ್ಪಟ್ಟಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ದಂಡ ನೀತಿಯ ಶಾಸನ ನೀತಿ- ಅನುಸಂಧಾನ ಮುಖ್ಯವಾಗಿದೆ.

ಸನ್ಯಾಸ ದಂಡ: ವೈರಾಗ್ಯ, ತ್ಯಾಗ, ಶಿಸ್ತು ಮತ್ತು ಆಧ್ಯಾತ್ಮಿಕ ಅಧಿಪತ್ಯದ ಪ್ರತೀಕವಾಗಿದ್ದು ಮಠಗಳಲ್ಲಿ ಮತ್ತು ಸನ್ಯಾಸ ಪರಂಪರೆಯಲ್ಲಿ ದಂಡವು ಅನುಷ್ಠಾನದಲ್ಲಿನ ಕಟ್ಟುಪಾಡು ಮತ್ತು ಶ್ರದ್ಧೆಯ ದ್ಯೋತಕವಾಗಿದೆ.

ದಂಡ ಸಮಕೋನಾಸನ: (ದಂಡ ಸಹಿತ ಸಮಕೋನಾಸನ ದಲ್ಲಿ ನಿಲ್ಲುವ ಭಂಗಿ ) ಪಾದಗಳನ್ನು ಜೋಡಿಸಿ ತೋಳು- ಭುಜದ ಇಕ್ಕೆಲಗಳಲ್ಲಿ ದಂಡವನ್ನು ಆಧರಿಸಿ ಕೈಗಳು ಸುತ್ತಿರಲಿ. ನಿತಂಬವನ್ನು ಸ್ವಲ್ಪ ಹೊರಗೆ ತಳ್ಳಿದಂತೆ ಮಾಡಿ ಬೆನ್ನನ್ನು ಸ್ವಲ್ಪ ಕಮಾನಿನಂತೆ ಮುಂದಕ್ಕೆ ಬಾಗಿಸಿ ಈಗ ಬೆನ್ನು ಅಡ್ಡದಾಗಿ ಬಾಗಿದ್ದು ಕಾಲುಗಳಿಗೆ ಸಮಕೋನದಲ್ಲಿರಲಿ. ತಲೆ, ಕುತ್ತಿಗೆ ಬೆನ್ನು ಒಂದೇ ನೇರದಲ್ಲಿರಲಿ. ಮುಂದೆ ನೋಡುವಂತೆ ದೃಷ್ಟಿ ಇರಲಿ. ಅಂತಿಮ ಸ್ಥಿತಿಯಲ್ಲಿ 5 ಸೆಕೆಂಡುಗಳವರೆಗೆ ಇರಿ. ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ. ದಂಡ ಆಧರಿಸಿದ ತೋಳುಗಳು, ತಲೆ ಮತ್ತು ಬೆನ್ನು ನೇರ ರೇಖೆಯಲ್ಲಿರಬೇಕು. ಕೈಗಳನ್ನು ದಂಡವನ್ನು ಕೆಳಗಿಸಿ. 3 ರಿಂದ 5 ಸುತ್ತು ಅಭ್ಯಾಸ ಮಾಡಿ

ಉಸಿರಾಟ: ಮುಂದಕ್ಕೆ ಬಾಗುವಾಗ ಉಸಿರನ್ನು ಬಿಡಿ. ದಂಡ ಸಹಿತ ತೋಳುಗಳನ್ನು ತಲೆಯಿಂದ ಮೇಲಕ್ಕೆ ಎತ್ತರಿಸುವಾಗ ಉಸಿರನ್ನು ಒಳಗಡೆ ತೆಗೆದುಕೊಳ್ಳಿ ಅಂತಿಮ ಸ್ಥಿತಿಯಲ್ಲಿ ಸಹಜ ಉಸಿರಾಟ ವಿರಲಿ.

ವಿಧಿ ನಿಷೇಧಗಳು: ತೀವ್ರ ಸಯಾಟಿಕ , ಬೆನ್ನು ಹುರಿ ನೋವಿರುವವರು ಮಾಡಬಾರದು.

ಪ್ರಯೋಜನಗಳು: ಈ ಆಸನವು ಬೆನ್ನಿನ ಮೇಲ್ಬಾಗ ಅಂದರೆ ಎದೆಯ ನೇರ ಹಿಂಭಾಗಕ್ಕಿರುವ ಬೆನ್ನಿಗೆ ಉತ್ತಮ . ಡೊಂಕಾದ ಬೆನ್ನು, ಬಿಗಿತ ಹಾಗೂ ಭಂಗಿದೋಷಗಳಿಗೆ ಉತ್ತಮ.

Border-Gavaskar ಟ್ರೋಫಿಯ ಮೊದಲ ಪಂದ್ಯಕ್ಕೆ ಮಳೆ ಭೀತಿ; ಪಿಚ್​ ಯಾರಿಗೆ ಸಹಕಾರಿ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ಮೆಗಾ ಹರಾಜಿನಲ್ಲಿ ಈತ 25-30 ಕೋಟಿ ರೂ. ಪಡೆಯುವುದು ಪಕ್ಕಾ; ಯುವ ಸ್ಟಾರ್​ ಆಟಗಾರನ ಕುರಿತು ಭವಿಷ್ಯ ನುಡಿದ Suresh Raina

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank