ಹನುಮಂತನ ದೇಗುಲಗಳ ನಿರ್ವಹಣೆ ಜವಾಬ್ದಾರಿ ನೀಡಿ ಎಂದು ದಲಿತರ ಮನವಿ

ಆಗ್ರಾ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಹಿಂದು ದೇವತೆ ಹನುಮಂತನನ್ನು ದಲಿತ ಎಂದು ತಿಳಿಸಿದ ಬೆನ್ನಲ್ಲೇ ಆಗ್ರಾದ ದಲಿತ ಸಮುದಾಯ ಹನುಮಂತನ ದೇವಾಲಯಗಳ ನಿರ್ವಹಣೆಯನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ 30 ಜನರು ಗುರುವಾರ ಹನುಮಾನ್​ ಚಾಲೀಸಾ ಪಠಿಸುತ್ತಾ, ದಲಿತ ದೇವತೆ ಹನುಮಾನ್​ ಕಿ ಜೈ ಎಂಬ ಘೋಷಣೆ ಕೂಗುತ್ತಾ ದೆಹಲಿ-ಕಾನ್​ಪುರ್​ ಹೆದ್ದಾರಿಯ ಲಂಗ್ರೆ ಕಿ ಚೌಕಿಯಲ್ಲಿ ಹನುಮಂತನ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ನಾಯಕ ಅಮಿತ್​ ಸಿಂಗ್​ ಹನುಮಂತ ನಮ್ಮ ಸಮುದಾಯಕ್ಕೆ ಸೇರಿದವರು ಎಂಬುದು ನಮಗೆ ಗೊತ್ತೇ ಇರಲಿಲ್ಲ. ಕಳೆದ ವಾರ ನಮ್ಮ ಮುಖ್ಯಮಂತ್ರಿಗಳು ಈ ವಿಷಯವನ್ನು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿರುವ ಹನುಮಂತನ ದೇವಾಲಯಗಳ ಆಡಳಿತವನ್ನು ದಲಿತ ಸಮುದಾಯಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಬುಧವಾರ ಅಲ್ವಾರ್​ ಜಿಲ್ಲೆಯ ಮಾಳಖೇಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ, ಹನುಮಂತ ಒಬ್ಬ ಅರಣ್ಯ ನಿವಾಸಿಯಾಗಿದ್ದು, ಎಲ್ಲಾ ಭಾರತೀಯ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ ಎಂದು ಹೇಳಿದ್ದರು. (ಏಜೆನ್ಸೀಸ್​)

ಹನುಮಂತನನ್ನು ದಲಿತ ಎಂದ ಯುಪಿ ಸಿಎಂ ಯೋಗಿಗೆ ಲೀಗಲ್​ ನೋಟಿಸ್​