ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ: ಘಟನೆಯನ್ನು ಖಂಡಿಸಿದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ

ಚಾಮರಾಜನಗರ: ತಾಲೂಕಿನ ವೀರನಪುರ ಗ್ರಾಮದ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ, ದಲಿತ ವ್ಯಕ್ತಿಯ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿ ಬೆತ್ತಲೆ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಜೂ. 3ರಂದು ಘಟನೆ ನಡೆದಿದ್ದು, ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆದ ಬಳಿಕ ಗಾಯಾಳು ಪ್ರತಾಪ್‌ ಚಿಕ್ಕಪ್ಪನ ಮಗ ಕಾಂತರಾಜು ದೂರು ಸಲ್ಲಿಸಿದ್ದರು. ಕಬ್ಬೆಕಟ್ಟೆ ಶನೇಶ್ಚರ ದೇವಸ್ಥಾನದ ಅರ್ಚಕ ಶಿವಪ್ಪ ಹಾಗೂ ಪುಟ್ಟಸ್ವಾಮಿ ಎಂಬವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಾದ ಬಸವರಾಜು, ಮಾಣಿಕ್ಯ, ಸತೀಶ್‌, ಮೂರ್ತಿ ತಲೆಮರೆಸಿಕೊಂಡಿದ್ದಾರೆ.

ದಲಿತ ಯುವಕನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಆರೋಪಿಸಿ ಯುವಕನ ಸೋದರ ಕಾಂತರಾಜು ದೂರು ನೀಡಿದ್ದಾರೆ. ಪ್ರತಾಪ್‌ ಅವರ ಚಿಕ್ಕಪ್ಪನ ಮಗ ಕಾಂತರಾಜು ನೀಡಿರುವ ದೂರು ಆಧರಿಸಿ, ಪೊಲೀಸರು ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದು, ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಸಮಾಜದಲ್ಲಿ ಜಾತಿ ವೈಷಮ್ಯ ಇನ್ನೂ ಮುಂದುವರಿದಿರುವುದು ದುರದೃಷ್ಟಕರ. ಇಂಥ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು ಎಂದಿದ್ದಾರೆ.

ಏನಿದು ಘಟನೆ?

ದೇವಸ್ಥಾನ ಅಪವಿತ್ರಗೊಳಿಸಿದ ಆರೋಪದ ಮೇಲೆ ಪ್ರತಾಪ್‌ನನ್ನು ಜಾತಿ ನಿಂದನೆ ಮಾಡಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜೂ. 2ರಂದು ರಾತ್ರಿ 12ರ ಸುಮಾರಿಗೆ ಮೈಸೂರಿನಿಂದ ಸ್ಕೂಟರ್‌ನಲ್ಲಿ ಶ್ಯಾನಾಡ್ರಹಳ್ಳಿಗೆ ಬರುತ್ತಿದ್ದಾಗ ರಾಘವಾಪುರದ ಹತ್ತಿರ ಆತನನ್ನು ತಡೆದು ಅವನ ಬಳಿಯಲ್ಲಿದ್ದ ಹಣ, ಚಿನ್ನ ಮತ್ತು ಮೊಬೈಲ್‌ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಅದೇ ರಾತ್ರಿ ಮಾಡ್ರಹಳ್ಳಿ ಹತ್ತಿರವಿರುವ ಕಬ್ಬೆಕಟ್ಟೆ ಪಕ್ಕದ ಶನೇಶ್ಚರ ದೇಗುಲದ ಆವರಣದಲ್ಲಿ ರಾತ್ರಿ ಮಲಗಿದ್ದಾಗ ಬೆಳಗ್ಗೆ ಬಂದ ಅರ್ಚಕ ವಿಚಾರಿಸಿದ್ದಾರೆ. ಜಾತಿ ತಿಳಿಯುತ್ತಿದ್ದಂತೆಯೇ ಮತ್ತೆ ಕೆಲವರನ್ನು ಕರೆದುಕೊಂಡು ಬಂದು ದೇವಸ್ಥಾನ ಅಪವಿತ್ರಗೊಳಿಸಿದ್ದಾನೆಂದು ಕೈಗಳನ್ನು ಹಿಂದಕ್ಕೆ ಕಟ್ಟಿ ಚೆನ್ನಾಗಿ ಹೊಡೆದು ನಂತರ ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವಾಗ ಮತ್ತಿಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನಂತರ ಅದು ವೈರಲ್‌ ಆಗಿತ್ತು.

ಪ್ರಕರಣಕ್ಕೆ ಟ್ವಿಸ್ಟ್‌

ಗುಂಡ್ಲುಪೇಟೆ ತಾಲೂಕು ವೀರನಪುರದಲ್ಲಿ ಶನೇಶ್ಚರ ದೇವಸ್ಥಾನ ಧ್ವಂಸಗೊಳಿಸಿ ಬೆತ್ತಲೆಯಾಗಿ ಓಡಿ ಹೋಗುತ್ತಿದ್ದ ಯುವಕನನ್ನು ಹಗ್ಗದಲ್ಲಿ ಕಟ್ಟಿ ಎಳೆದುಕೊಂಡು ಬರುತ್ತಿದ್ದಾಗ ದೃಶ್ಯವನ್ನು ಸೆರೆಹಿಡಿದು ಕಿಡಿಗೇಡಿಗಳು ವೈರಲ್‌ ಮಾಡಿದ್ದಾರೆ ಎನ್ನಲಾಗಿದೆ.

38 ವರ್ಷದ ಪ್ರತಾಪ್, ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ತಾಲೂಕು ಶ್ಯಾನಾಡ್ರಹಳ್ಳಿಯವರು ಗ್ರಾಮದವನು. ಮೈಸೂರಿನಲ್ಲಿ ವಾಸವಾಗಿರುವ ಈತ ಜೂ. 3ರಂದು ಗುಂಡ್ಲುಪೇಟೆ ಹೊರವಲಯದಲ್ಲಿರುವ ಶನೇಶ್ಚರ ದೇವಾಲಯಕ್ಕೆ ಬೆತ್ತಲೆಯಾಗಿ ನುಗ್ಗಿ ದ್ವಂಸ ಮಾಡಿದ್ದ. ಅಲ್ಲದೆ, ಅರ್ಚಕನ ಮೇಲೆ ಹಲ್ಲೆ ಮಾಡಿದ್ದ. ಅಲ್ಲಿಗೆ ಸ್ಥಳೀಯರು ಬರುತ್ತಿದ್ದಂತೆಯೇ ಅಲ್ಲಿಂದ ಬೆತ್ತಲೆಯಾಗಿಯೇ ಓಡಿದ್ದ. ಬಳಿಕ ಗ್ರಾಮಸ್ಥರು ಆತ ದರೋಡೆಕೋರನಿರಬೇಕೆಂದು ಭಾವಿಸಿ ಬೆನ್ನಟ್ಟಿ ಹಿಡಿದು ಹಗ್ಗ ಕಟ್ಟಿ ಕರೆತಂದಿದ್ದರು. ಆತ ತನ್ನ ಮೈ ಮೇಲೆ ದೇವರು ಬಂದಂತೆ ವರ್ತಿಸಿದ್ದ. ಬಳಿಕ ಸ್ಥಳೀಯರು ಈತನನ್ನು ಗುಂಡ್ಲುಪೇಟೆ ಪೊಲೀಸರಿಗೆ ಒಪ್ಪಿಸಿದ್ದರು.

ನಂತರ ಆತನ ತಂದೆ ಬಂದು ತಮ್ಮ ಮಗ ಮಾನಸಿಕ ಅಸ್ವಸ್ಥ ಎಂದು ತಿಳಿಸಿ ಕರೆದುಕೊಂಡು ಹೋಗಿದ್ದರು. ಸದ್ಯ ಆತನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್)

One Reply to “ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ: ಘಟನೆಯನ್ನು ಖಂಡಿಸಿದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ”

  1. I feel so bad ,,,,,,,,This is incident is too ashamed to the society . People should have at least common humanity towards man . caste-ism still alive in both rural and urban also . So people must understand all are equal , we don’t have any rights to do anything to others . Government should give justice to who really abuse from society in this case.

Leave a Reply

Your email address will not be published. Required fields are marked *