ಮೊದಲ ಪ್ರಧಾನಿ ಮಹಮದ್ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿ ಆಸೆಯಾಗಿತ್ತು

ಪಣಜಿ: ಭಾರತದ ಮೊದಲ ಪ್ರಧಾನಿ ಮಹಮದ್​ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು. ಆದರೆ, ಜವಾಹಾರ್​ ಲಾಲ್​ ನೆಹರೂ ಅದನ್ನು ನಿರಾಕರಿಸಿದ್ದಲ್ಲದೆ ತಾವೇ ಪ್ರಧಾನಿ ಹುದ್ದೆಗೇರಿದರು. ನೆಹರೂ ತಮ್ಮ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಯಾಗಿದ್ದರು ಎಂದು ಟಿಬೇಟಿಯನ್​ ಅಧ್ಯಾತ್ಮಗುರು ದಲೈ ಲಾಮಾ ಬುಧವಾರ ಹೇಳಿದರು.

ಹಾಗೊಮ್ಮೆ ಗಾಂಧೀಜಿಯವರ ಇಚ್ಛೆಯಂತೆ ಮಹಮದ್​ ಅಲಿ ಜಿನ್ನಾ ಅವರೇ ಪ್ರಧಾನಿಯಾಗಿದ್ದರೆ ಭಾರತ ಯಾವ ಕಾರಣಕ್ಕೂ ವಿಭಜನೆಯಾಗುತ್ತಿರಲಿಲ್ಲ. ಆದರೆ ಅವರ ಆಸೆ ಕೈಗೂಡಲಿಲ್ಲ ಎಂದು ಗೋವಾದಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತ, ನನಗೆ ಅಪಾಯಕಾರಿ ಊಳಿಗಮಾನ್ಯ ಪದ್ಧತಿಗಿಂತ ಪ್ರಜಾಪ್ರಭುತ್ವ ವ್ಯವಸ್ಥೆ ಸಾವಿರ ಪಾಲು ಉತ್ತಮ ಎನಿಸುತ್ತದೆ. ಪ್ರಜೆಗಳ ಕೈಯಲ್ಲೇ ನಿರ್ಧರಿಸುವ ಅಧಿಕಾರವಿರುತ್ತದೆ ಎಂದರು.

ಗಾಂಧೀಜಿ ಜಿನ್ನಾ ಅವರನ್ನು ಪ್ರಧಾನಿ ಮಾಡಲು ತುಂಬ ಆಸೆ ಇಟ್ಟುಕೊಂಡಿದ್ದರೂ ನೆಹರೂ ಅವರು ಆಗಗೊಡಲಿಲ್ಲ. ನೆಹರು ಅವರಿಗೆ ತಾನು ಪ್ರಧಾನಿ ಆಗಬೇಕೆಂಬ ಸ್ವಲ್ಪಮಟ್ಟಿಗಿನ ಸ್ವಯಂಕೇಂದ್ರಿತ ವರ್ತನೆಯೇ ಅದಕ್ಕೆ ಆಸ್ಪದ ನೀಡಲಿಲ್ಲ ಅನಿಸುತ್ತೆ ಎಂದರು.

Leave a Reply

Your email address will not be published. Required fields are marked *