More

  ಸಂಕ್ರಾಂತಿ ವಿಶೇಷ: ಗಯಾದ ದಕ್ಷಿಣಾರ್ಕ ದೇವಸ್ಥಾನ

  ಬಿಹಾರದ ಗಯಾದಲ್ಲಿರುವ ಪ್ರಾಚೀನ ಸೂರ್ಯ ದೇವಾಲಯಕ್ಕೆ ದಕ್ಷಿಣಾರ್ಕ ದೇಗುಲ ಎಂದೂ ಕರೆಯುತ್ತಾರೆ. ಇದರ ಮುಂದಿರುವ ಸೂರ್ಯಕುಂಡ ಅರ್ಥಾತ್ ದಕ್ಷಿಣ ಮಾನಸ ಸರೋವರ ಸುಪ್ರಸಿದ್ಧ. ಈ ದೇವಸ್ಥಾನ 13ನೇ ಶತಮಾನದಲ್ಲಿ ಆಂಧ್ರದ ವಾರಂಗಲ್​ನ ದೊರೆ ಪ್ರತಾಪರುದ್ರ ನಿರ್ವಿುಸಿದ್ದು ಎಂಬ ಪ್ರತೀತಿ ಇದೆ. ಪೂರ್ವ ದಿಕ್ಕಿಗೆ ಮುಖ ಮಾಡಿರುವ ದೇವಸ್ಥಾನದಲ್ಲಿ ಗರ್ಭಗುಡಿಯ ಎದುರಿಗೇ ದೊಡ್ಡ ಸಭಾಮಂಟಪವಿದೆ. ಅದರಲ್ಲಿರುವ ಭಾರಿ ಕಲ್ಲುಕಂಬಗಳಲ್ಲಿ ಶಿವ, ವಿಷ್ಣು, ಸೂರ್ಯ, ದುರ್ಗೆ ಮುಂತಾದವರ ಆಕರ್ಷಕ ಕೆತ್ತನೆಗಳಿವೆ. ಮಗಧ ಪ್ರಾಂತ್ಯದಲ್ಲಿ ಪ್ರಾಚೀನ ಕಾಲದಿಂದಲೂ ಸೂರ್ಯೋಪಾಸಕರ ಸಂಖ್ಯೆ ಹೆಚ್ಚು. ಹಾಗಾಗಿ ಗಯಾದಲ್ಲೇ ಉತ್ತರಾರ್ಕ ಮತ್ತು ಗಯಾದಿತ್ಯ ಎಂಬ ಇನ್ನೆರಡು ಸೂರ್ಯ ದೇವಸ್ಥಾನಗಳೂ ಇವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts