ಕರಾವಳಿ ಕ್ಷೇತ್ರಗಳಲ್ಲಿ ಮತದಾನ ದಾಖಲೆ

<<ದ.ಕ. ಶೇ.77.90 ಮತ ಚಲಾವಣೆ>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ದ.ಕ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಶೇ.77.90 ಮತದಾನವಾಗಿದ್ದು, ಇದುವರೆಗೆ ನಡೆದ ಎಲ್ಲ ಮತದಾನದ ಪ್ರಮಾಣವನ್ನು ಮೀರಿದೆ.
2018ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.77.64 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಶೇ.77.19 ಮತದಾನವಾಗಿತ್ತು.
ಜಿಲ್ಲೆಯಲ್ಲಿ 17,24,460 ಮತದಾರರಿದ್ದು, 13,43,378 ಮಂದಿ ಮತ ಚಲಾಯಿಸಿದ್ದಾರೆ. ಈ ಪೈಕಿ 6,53, 655 ಪುರುಷರು ಹಾಗೂ 6,89,693 ಮಹಿಳೆಯರು. ಜಿಲ್ಲೆಯಲ್ಲಿ ಈ ಬಾರಿ 26,605 ಯುವ ಮತದಾರರು ನೋಂದಣಿಯಾಗಿದ್ದು, ಈ ಪೈಕಿ ಶೇ.85ರಷ್ಟು ಮಂದಿ ಮತ ಚಲಾಯಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯ ಮತ ಪ್ರಮಾಣಕ್ಕೆ ಹೋಲಿಸಿದರೆ ಮಂಗಳೂರು ದಕ್ಷಿಣದಲ್ಲಿ ಶೇ.2.74, ಸುಳ್ಯದಲ್ಲಿ ಶೇ.1.16 ಮತ ಪ್ರಮಾಣ ಹೆಚ್ಚಳವಾಗಿದೆ. ಉಳಿದ ಕ್ಷೇತ್ರಗಳಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗಿಲ್ಲ.

ವಿಧಾನಸಭಾ ಕ್ಷೇತ್ರವಾರು ಮತ ಪ್ರಮಾಣದ ವಿವರ  (ಆವರಣದಲ್ಲಿ 2018ರ ವಿಧಾನಸಭೆ ಚುನಾವಣೆಯ ಮತ ಪ್ರಮಾಣ )
ಬೆಳ್ತಂಗಡಿ: ಶೇ.80.92 (ಶೇ.81.40 )
ಮೂಡುಬಿದಿರೆ: ಶೇ.75.96 (ಶೇ.75.41)
ಮಂಗಳೂರು ಉತ್ತರ: ಶೇ.75.31( ಶೇ.74.55 )
ಮಂಗಳೂರು ದಕ್ಷಿಣ: ಶೇ.70.21(ಶೇ.67.47)
ಮಂಗಳೂರು: ಶೇ.75.49 (ಶೇ.75.73)
ಬಂಟ್ವಾಳ: ಶೇ.80.24 (ಶೇ.81.89)
ಪುತ್ತೂರು: ಶೇ.82.28 (ಶೇ.81.70)
ಸುಳ್ಯ: ಶೇ.84.16 (ಶೇ. 83.0)
ಒಟ್ಟು: ಶೇ.77.90 (ಶೇ.77.64)