ನಾಳೆ ದಿಗ್ವಿಜಯ ಪಾರ್ಲಿಮೆಂಟ್ ಫೈಟ್

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಣ ಕಾವೇರತೊಡಗಿದೆ. ಪ್ರಮುಖ ರಾಜಕೀಯ ಪಕ್ಷಗಳು ಆಗಲೇ ಕೆಲವು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದು, ಅಭ್ಯರ್ಥಿಯ ಜತೆ ರಂಗಕ್ಕೆ ಇಳಿಯಲು ಸಜ್ಜಾಗಿದೆ.

ಲೋಕಸಭೆಯಲ್ಲಿ ದೀರ್ಘ ಕಾಲದಿಂದ ದಕ್ಷಿಣ ಕನ್ನಡದಲ್ಲಿ ಅಧಿಪತ್ಯ ಸ್ಥಾಪಿಸಿಕೊಂಡಿರುವ ಬಿಜೆಪಿ ಗೆಲುವಿನ ಓಟ ಮುಂದುವರಿಸುತ್ತದೆಯೋ ? ಬಿಜೆಪಿ ಗೆಲುವಿನ ರಥದ ಕುದುರೆಗಳನ್ನು ಕಟ್ಟಿಹಾಕಲು ಹೊಸ ಮುಖದೊಂದಿಗೆ ಸಜ್ಜಾಗಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಯಶಸ್ವಿಯಾಗುತ್ತದೆಯೇ? ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಇಂತಹ ಸನ್ನಿವೇಶದಲ್ಲಿ ಇರುವ ಮನಸಲ್ಲಿ ಮೂಡಿದ ಅಚ್ಚರಿ, ಆತಂಕ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಆಸಕ್ತಿ ಇದೆಯೇ? ನಿಮ್ಮ ನೆಚ್ಚಿನ ‘ದಿಗ್ವಿಜಯ ನ್ಯೂಸ್’ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕುರಿತು ಮಾ.24 ರಂದು ಮಂಗಳೂರು ಮಿನಿ ಪುರಭವನ ಸಭಾಂಗಣದಲ್ಲಿ ‘ಪಾರ್ಲಿಮೆಂಟ್ ಫೈಟ್’ ಕಾರ‌್ಯಕ್ರಮದ ಮೂಲಕ ಬಹಿರಂಗ ಚರ್ಚೆಗೆ ಒಂದು ಅಪರೂಪದ ವೇದಿಕೆ ಸಿದ್ಧಪಡಿಸಿದೆ. ಇದರಲ್ಲಿ ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದೆ.

ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಬಿಜೆಪಿ ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು, ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್‌ಮಹಮ್ಮದ್ ತುಂಬೆ, ಅವರ ಪಕ್ಷ ಹಾಗೂ ಮೈತ್ರಿಕೂಟದ ಬೆಂಬಲಿಗರು, ಕಾರ‌್ಯಕರ್ತರು ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಕ್ಷೇತ್ರದಲ್ಲಿ ಯಾವ್ಯಾವ ಅಭಿವೃದ್ಧಿ ಕಾರ‌್ಯಗಳು ನಡೆದಿವೆ. ಇನ್ನೂ ಏನೇನು ನಡೆದಿವೆ? ಆದ್ಯತೆಗಳೇನು? ಜನಪ್ರತಿನಿಧಿಗಳು ನೀಡಿರುವ ಭರವಸೆ ಈಡೇರಿವೆಯೇ? ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಏನು?

ಇದು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸುಸಂದರ್ಭ. ಮಿಸ್ ಮಾಡ್ಕೋಬೇಡಿ.
ಹಾಗೆ ಮತ್ತೆ ಈ ಇಡೀ ಕಾರ‌್ಯಕ್ರಮ ದಿಗ್ವಿಜಯ ನ್ಯೂಸ್‌ನ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಸ್ಥಳ: ಮಿನಿ ಪುರಭವನ ಸಭಾಂಗಣ (ಕುದ್ಮಲ್ ರಂಗರಾವ್ ಪುರಭವನ ಸಮೀಪ).
ದಿನ: ಮಾ.17 (ಭಾನುವಾರ)
ಸಮಯ: ಸಾಯಂಕಾಲ 5ಕ್ಕೆ.