ಸುರಕ್ಷಿತ ವಲಯದತ್ತ ದ.ಕ., ಕ್ವಾರಂಟೈನ್ 797ಕ್ಕೆ ಇಳಿಕೆ

blank

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 12 ದಿನವೂ ಕರೊನಾ ವರದಿಗಳು ನೆಗೆಟಿವ್ ಬರುತ್ತಿದ್ದು, ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿ ಇರುವವರ ಸಂಖ್ಯೆಯೂ ಇಳಿಕೆಯಾಗುತ್ತಿದೆ. ಒಂದೊಮ್ಮೆ 5,000 ದಾಟಿದ್ದ ಕ್ವಾರಂಟೈನ್ ಸಂಖ್ಯೆ ಬುಧವಾರ 1,225ಕ್ಕೆ ಇಳಿದಿತ್ತು, ಗುರುವಾರ ಈ ಸಂಖ್ಯೆ 797ಕ್ಕೆ ಇಳಿಕೆಯಾಗಿದೆ.

blank

ದ.ಕ. ಜಿಲ್ಲೆಯಲ್ಲಿ ಒಟ್ಟು 12 ಕರೊನಾ ಪಾಸಿಟಿವ್ ಪತ್ತೆಯಾಗಿದ್ದು, ಇವುಗಳ ಪೈಕಿ 9 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು ಮೂರು ಮಂದಿ ಮಾತ್ರ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿದ್ದಾರೆ. ಸತತ 12 ದಿನಗಳಿಂದ ದ.ಕ. ಜಿಲ್ಲೆಯಲ್ಲಿ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿಲ್ಲ. ಇದು 14 ದಿನ (ಏಪ್ರಿಲ್ 18ರವರೆಗೆ) ಮುಂದುವರಿದರೆ, ಜಿಲ್ಲೆ ರೆಡ್ ರೆನ್‌ನಿಂದ ಆರೆಂಜ್ ರೆನ್‌ಗೆ ಹೋಗಲಿದೆ. ಮತ್ತೆ 14 ದಿನ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗದಿದ್ದರೆ, ಆಗ ಆರೆಂಜ್ ರೆನ್‌ಗೆ ಹೋಗಲಿದೆ. ಪ್ರಸಕ್ತ ಜಿಲ್ಲೆ ಹಾಟ್‌ಸ್ಪಾಟ್ ಕ್ಲಸ್ಟರ್ ಎಂದು ಗುರುತಿಸಲ್ಪಟ್ಟಿದೆ.

ಜಿಲ್ಲೆಯಲ್ಲಿ ಗುರುವಾರದ ವರದಿಯಂತೆ ಬಂದಿರುವ ಎಲ್ಲ 113 ಸ್ಯಾಂಪಲ್‌ಗಳೂ ನೆಗೆಟಿವ್ ಆಗಿವೆ. ಗುರುವಾರ 24 ಮಂದಿಯ ಸ್ಯಾಂಪಲ್ ಟೆಸ್ಟ್‌ಗೆ ಕಳುಹಿಸಲಾಗಿದೆ. ಒಟ್ಟು ಇನ್ನೂ 59 ಸ್ಯಾಂಪಲ್ ವರದಿ ಬರಲು ಬಾಕಿ ಇದೆ.
ಇಎಸ್‌ಐ ಆಸ್ಪತ್ರೆಯಲ್ಲಿ ಇದ್ದ ಶಂಕಿತರ ಪೈಕಿ ಗುರುವಾರ ಒಂದೇ ದಿನ 15 ಮಂದಿಯನ್ನು ಕ್ವಾರಂಟೈನ್ ಅವಧಿ ಪೂರ್ತಿಯಾದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ, ಇನ್ನೂ 10 ಮಂದಿ ಅಲ್ಲಿ ದಿಗ್ಬಂಧನದಲ್ಲಿ ಇದ್ದಾರೆ. ಗುರುವಾರ 11 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ನಿಗಾ ವಹಿಸಲಾಗುತ್ತಿದೆ.

ಜಿಲ್ಲಾಡಳಿತದ ಸೂಚನೆಯನ್ವಯ ಆಶಾ ಹಾಗೂ ಎಂಪಿಡಬ್ಲುೃ ಕಾರ್ಯಕರ್ತೆಯರು ಸಮೀಕ್ಷೆ ಆರಂಭಿಸಿದ್ದು 30 ಸಾವಿರ ಮಂದಿಯ ಮಾಹಿತಿ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿದೆ.

ಕರೊನಾ ಸಭೆ ಇಂದು: ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೂತನ ಮಾರ್ಗಸೂಚಿಗಳನ್ವಯ ಮುಂದೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಏ.17ರಂದು ಬೆಳಗ್ಗೆ 11.30ಕ್ಕೆ ಸಭೆ ಕರೆಯಲಾಗಿದೆ. ದ.ಕ ಜಿಲ್ಲಾಧಿಕಾರಿ ಕಚೇರಿ 2ನೇ ಮಹಡಿಯ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಶಾಸಕರು, ಇತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಉಡುಪಿ 8 ಮಂದಿ ಐಸೊಲೇಶನ್‌ಗೆ:

ಉಡುಪಿ: ಜಿಲ್ಲೆಯಲ್ಲಿ ಕರೊನಾ ಶಂಕಿತ ಗುಣಲಕ್ಷಣಕ್ಕೆ ಸಂಬಂಧಿಸಿ 8 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇದರಲ್ಲಿ ಕೊವಿಡ್-19ಗೆ ಸಂಬಂಧಿಸಿ 4, ತೀವ್ರ ಉಸಿರಾಟದ ಸೋಂಕು ಇರುವ 4 ಮಂದಿ ಸೇರಿದಂತೆ 5 ಪುರುಷರು, ಮೂವರು ಮಹಿಳೆಯರಿದ್ದಾರೆ. ಗುರುವಾರ 178 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಯಾವುದೇ ವರದಿ ಸ್ವೀಕಾರವಾಗಿಲ್ಲ. 409 ವರದಿ ಬರಲು ಬಾಕಿ ಇದೆ. 108 ಮಂದಿ 28 ದಿನದ ಹೋಂ ಕ್ವಾರಂಟೈನ್ ಪೂರೈಸಿದ್ದಾರೆ. ಶುಕ್ರವಾರಕ್ಕೆ 123 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ ಒಬ್ಬರು, ಆಸ್ಪತ್ರೆ ಕ್ವಾರಂಟೈನ್‌ನಿಂದ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಸರಗೋಡಲ್ಲಿ ಮತ್ತೊಂದು ಪ್ರಕರಣ
ಕಾಸರಗೋಡು: ಕೇರಳದಲ್ಲಿ ಗುರುವಾರ ಮತ್ತೆ ಏಳು ಮಂದಿಯಲ್ಲಿ ಕೊವಿಡ್-19 ವೈರಸ್ ಪತ್ತೆಯಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ನಾಲ್ಕು, ಕೋಯಿಕ್ಕೋಡ್ 2 ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಸೋಂಕು ಖಚಿತಗೊಂಡಿರುವ ಕಾಸರಗೋಡು ಚೆಮ್ನಾಡ್ ನಿವಾಸಿ, 20 ವರ್ಷದ ಪ್ರಾಯದ ವ್ಯಕ್ತಿ ಮಾರ್ಚ್ 19ರಂದು ದುಬೈನಿಂದ ಬಂದಿದ್ದು, ಮನೆಯಲ್ಲಿ ನಿಗಾದಲ್ಲಿದ್ದರು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.

ಈ ನಡುವೆ ಕಾಸರಗೋಡಿನ 24 ಮಂದಿ ಸಹಿತ ಕೇರಳದ 27 ಮಂದಿಯ ತಪಾಸಣಾ ವರದಿ ನೆಗೆಟಿವ್ ಆಗಿದ್ದು, ವೈರಸ್‌ನಿಂದ ಮುಕ್ತಿ ಪಡೆದಿದ್ದಾರೆ. ರಾಜ್ಯದಲ್ಲಿ ಇದುವರೆಗೆ 394 ಮಂದಿಗೆ ಕರೊನಾ ವೈರಸ್ ತಗುಲಿದ್ದು, ಪ್ರಸಕ್ತ ವಿವಿಧ ಆಸ್ಪತ್ರೆಗಳಲ್ಲಿ 147 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಕಾಸರಗೋಡಿನಲ್ಲಿ 168 ಮಂದಿ ಕರೊನಾ ಸೋಂಕಿತರಿದ್ದು, ಇವರಲ್ಲಿ 107 ಮಂದಿ ಬಿಡುಗಡೆಯಾಗಿದ್ದಾರೆ. 61 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
blank

ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಮಾರ್ಗ.. ಒಮ್ಮೆ ಟ್ರೈ ಮಾಡಿ | Lizards

Lizards: ಹಲ್ಲಿಗಳು ಹೆಚ್ಚಾಗಿ ಮನೆಯ ಗೋಡೆಗಳ ಮೇಲೆ ಮತ್ತು ಅಡುಗೆಮನೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಲ್ಲಿಗಳ ಬಗ್ಗೆ…

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…

blank