18.1 C
Bangalore
Saturday, December 7, 2019

ದೈವಸ್ಥಾನಕ್ಕೂ ತಟ್ಟಿದ ಒತ್ತುವರಿ ಬಿಸಿ

Latest News

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಶ್ರೀಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಬಾಗಲಕೋಟೆ: ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ನೀಡಿದ ಗೀತೋಪದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧೀಶ, ಅದಮಾರು ಶ್ರೀ ಈಶಪ್ರಿಯತೀರ್ಥ...

ಶ್ರೀಪತಿ ಹೆಗಡೆ ಹಕ್ಲಾಡಿ ಶಿರೂರು

ಯಾರೋ ಕೃಷಿ ಮಾಡಿದ ಜಾಗ, ಶಾಲಾ ಪಟ್ಟ ಸ್ಥಳ, ನಿತ್ಯ ಹರಿದ್ವರ್ಣ ಕಾಡು, ಜಲಾನಯನ ಪ್ರದೇಶ ಒತ್ತುವರಿ ಮಾಮೂಲಿನಂತೆ ಆಗಿದ್ದು, ಪ್ರಸಕ್ತ ದೇವಸ್ಥಾನ, ದೈವಸ್ಥಾನಗಳ ಜಾಗ ಹೊಸ ಸೇರ್ಪಡೆ..!

ಬೈಂದೂರು ತಾಲೂಕು, ಶಿರೂರು ಶ್ರೀ ಜೈನ ಶೇಡಿಬೀರ ದೈವಸ್ಥಾನ ಜಾಗಕ್ಕೂ ಒತ್ತುವರಿ ಬಿಸಿ ತಟ್ಟಿದೆ. ಎಲ್ಲಿಯೋ ಇದ್ದ ಗೂಡಂಗಡಿ ರಾತ್ರೋರಾತ್ರಿ ತಂದು ಕೂರಿಸಿ, ವಿದ್ಯುತ್ ಸಂಪರ್ಕ ಪಡೆದಿರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೆಂಬಲವಿದ್ದರೆ ಏನೂ ಮಾಡಲು ಸಾಧ್ಯ ಎಂಬುದಕ್ಕೆ ನಿದರ್ಶನ.

ಶಿರೂರು ಶ್ರೀ ಜೈನ ಶೇಡಿಬೀರ ದೇವಸ್ಥಾನ ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ರಸ್ತೆ ಜಾಗ ಬಿಟ್ಟು ಹಿಂದಕ್ಕೆ ಹೋಗಿದೆ. ಸರ್ವೇ ನಂಬರ್ 94/10ರಲ್ಲಿ ಒಟ್ಟು 11 ಸೆಂಟ್ಸ್ ಜಾಗದಲ್ಲಿ ದೈವಸ್ಥಾನವಿದ್ದು, ರಸ್ತೆ ಮಾರ್ಜಿನ್ ಕಳೆದು ಪ್ರಸಕ್ತ ಮೂರು ಸೆಂಟ್ಸ್ ಜಾಗ ಸಂಕುಚಿತಗೊಂಡಿದೆ. ದೈವಸ್ಥಾನ ಹಿಂದಕ್ಕೆ ಹಾಕಿ ಭದ್ರತೆಗಾಗಿ ಕಂಪೌಂಡ್ ನಿರ್ಮಿಸುವ ಕೆಲಸಕ್ಕೂ ಒತ್ತುವರಿದಾರರು ಅಡ್ಡಗಾಲಿಕ್ಕಿದ್ದಾರೆ. ಭಯವೇ ಇಲ್ಲದೆ ದೈವಸ್ಥಾನ ಜಾಗವನ್ನೇ ಒತ್ತುವರಿ ಮಾಡಿಕೊಳ್ಳುವವರು ಸರ್ಕಾರದ ಜಾಗ ಉಳಿಸುತ್ತಾರಾ ಎಂಬ ಪ್ರಶ್ನೆ ಬೈಂದೂರು ಕ್ಷೇತ್ರದಲ್ಲಿ ಮಾರ್ದ್ವನಿಸುತ್ತಿದೆ. ಒಟ್ಟಾರೆ ಬೈಂದೂರು ಕ್ಷೇತ್ರ ಭೂಬಾಕರ ಸ್ವರ್ಗವಾಗುತ್ತಿದೆ.

ವಿಜಯವಾಣಿ ವರದಿ ಮಾಡಿತ್ತು: ಶಿರೂರು ಪೇಟೆ ಸಮೀಪ ಮನೆಯಿಲ್ಲದಿದ್ದರೂ ಮನೆಯಿದೆ ಎಂದು ಕಂದಾಯ ಇಲಾಖೆ, ವಿಎ ಹಾಗೂ ಬಿಡಿಒ ಮೂಲಕ ನಕಲಿ ದಾಖಲೆ ಸೃಷ್ಟಿಸಿ, 94ಸಿನಲ್ಲಿ ಅರ್ಜಿ ಹಾಕಿ ಜಾಗ ಮಂಜೂರು ಮಾಡಿಕೊಂಡ ವ್ಯಕ್ತಿಯೇ ದೈವಸ್ಥಾನ ಜಾಗಕ್ಕೆ ಕನ್ನಹಾಕಿ ಗೂಡಂಗಡಿ ತಂದಿಟ್ಟಿದ್ದಾರೆ. ಮನೆಯೇ ಇಲ್ಲದಿದ್ದರೂ ಜಾಗ ಮಂಜೂರು ಮಾಡಿಕೊಂಡು ಪ್ರಸಕ್ತ ಶೆಡ್ ನಿರ್ಮಿಸುತ್ತಿದ್ದ ಫೋಟೋ ಸಹಿತ ವಿಜಯವಾಣಿ ವಿಸ್ತೃತ ವರದಿ ಮಾಡಿತ್ತು. ಬೋಗಸ್ ದಾಖಲೆ ಮೂಲಕ ಜಾಗ ಮಂಜೂರು ಮಾಡಿಕೊಂಡ ಬಗ್ಗೆ ಎಸಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಮನೆಯೇ ಇಲ್ಲದ ಸ್ಥಳದಲ್ಲಿ ಮನೆ ಇದೆ ಎಂದು ಸರ್ಟಿಫಿಕೇಟ್ ನೀಡಿದ ವಿಎ, ಪಿಡಿಒ ಹಾಗೂ ಜಾಗ ಮಂಜೂರು ಮಾಡಿದ ತಹಸೀಲ್ದಾರ್ ತಲೆಯ ಮೇಲೆ 94ಸಿ ಕತ್ತಿ ತೂಗುತ್ತಿದೆ.

ದೈವಸ್ಥಾನ ಸಮಿತಿ ಸದಸ್ಯನಿಂದಲೇ ಸಮಸ್ಯೆ: ಶಿರೂರು ಶ್ರೀ ಜೈನ ಶೇಡಿಬೀರ ದೈವಸ್ಥಾನ ಜಾಗದಲ್ಲಿ ರಾತ್ರಿ ಬೆಳಗಾಗುವುದರಲ್ಲಿ ಬಂದು ಕೂತ ಗೂಡಂಗಡಿ ತೆರವು ಮಾಡುವಂತೆ ದೈವಸ್ಥಾನ ಆಡಳಿತ ಮಂಡಳಿ ಸಂಪೂರ್ಣ ದಾಖಲೆ ಸಹಿತ ಉಡುಪಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಫೆ.12 ರಂದು ಮನವಿ ಮಾಡಿದೆ. ಪ್ರತಿ ಡಿಎಸ್ಪಿ, ಬೈಂದೂರು ತಹಸೀಲ್ದಾರ್, ಸ್ಥಳೀಯ ಶಾಸಕ ಹಾಗೂ ಶಿರೂರು ಗ್ರಾಪಂ ಪಿಡಿಒಗೆ ಸಲ್ಲಿಸಲಾಗಿದೆ. ಅಂಗಡಿ ತೆರವು ಕಾರ‌್ಯಾಚರಣೆ ನಿರೀಕ್ಷೆಯಲ್ಲಿ ದೈವಸ್ಥಾನ ಸಮಿತಿ ಇದೆ. ದೈವಸ್ಥಾನ ಸಮಿತಿ ಕಂಪೌಂಡ್ ನಿರ್ಮಿಸಲು ಮುಂದಾದ ಸಂದರ್ಭದಲ್ಲಿ ಜಾಗದ ಒತ್ತುವರಿ ಮೂಲಕ ಅಂಗಡಿ ಇಟ್ಟುಕೊಂಡ ವ್ಯಕ್ತಿ ಹಲ್ಲೆಗೆ ಮುಂದಾಗಿದ್ದು, ಸ್ಥಳಕ್ಕೆ ಬಂದ ಬೈಂದೂರು ಎಸ್ಸೈ ತಿಮ್ಮೇಶ ಯಥಾಃಸ್ಥಿತಿ ಕಾಪಾಡುವಂತೆ, ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿ, ಜನರನ್ನು ಚದುರಿಸಿ ಹೋಗಿದ್ದರು. ಅಂಗಡಿ ಇಟ್ಟು ಬೇರೆಯವರಿಗೆ ನಡೆಸಲು ಬಾಡಿಗೆ ಕೊಟ್ಟ ವ್ಯಕ್ತಿ ದೈವಸ್ಥಾನ ಕಮಿಟಿ ಸದಸ್ಯನಾಗಿದ್ದು, ಅಧ್ಯಕ್ಷರ ಮೇಲೆ ದೂರು ನೀಡಿದ್ದಾರೆ.

ಗೂಡಂಗಡಿ ಸೂಕ್ತ ಸಮಯದಲ್ಲಿ ತೆರವು ಮಾಡಿಸದಿದ್ದರೆ, ಸೂಕ್ತ ದಾಖಲೆ ಸಹಿತ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹ ನಡೆಸಲು ಹಿಂಜರಿಯುವುದಿಲ್ಲ. ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಭಕ್ತರ ಸಹಕಾರದಲ್ಲಿ ಶ್ರೀ ಶೇಡಿಬೀರ ದೈವಸ್ಥಾನ ಭವ್ಯವಾಗಿ ನಿರ್ಮಾಣ ಮಾಡಿದ್ದು, ಹಿಂದೆ ದೈವಸ್ಥಾನ ಕಂಪೌಂಡ್ ಒಳಗೆ ಯಾವುದೇ ತೆರನಾದ ಅಂಗಡಿ ಮುಂಗಟ್ಟು ಇರಲಿಲ್ಲ. ರಾತ್ರೋರಾತ್ರಿ ಎಲ್ಲಿಂದಲೋ ಅಂಗಡಿ ತಂದು ಸ್ಥಾಪಿಸಿ, ಅದಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಅಂಗಡಿ ತಂದು ಕೂರಿಸಿದವರು ತಾವೇ ಅಂಗಡಿ ನಡೆಸದೆ ಬಾಡಿಗೆ ನೀಡಿದ್ದಾರೆ. ಅಂಗಡಿ ದೈವಸ್ಥಾನ ಜಾಗದಲ್ಲಿ ಕೂತಿದ್ದರಿಂದ ಕಂಪೌಂಡ್ ನಿರ್ಮಾಣ ಕೆಲಸ ಕೂಡಾ ಅರ್ಧಕ್ಕೆ ನಿಂತಿದೆ.
| ವಿಶ್ವನಾಥ ಶೆಟ್ಟಿ ಅಧ್ಯಕ್ಷ, ಶ್ರೀ ಜೈನ ಶೇಡಿಬೀರ ದೈವಸ್ಥಾನ ಶಿರೂರು

ಶ್ರೀ ಜೈನ ಶೇಡಿಬೀರ ದೈವಸ್ಥಾನ ಕಮಿಟಿ ಸದಸ್ಯರಾಗಿದ್ದುಕೊಂಡೇ ದೇವಸ್ಥಾನ ಜಾಗದಲ್ಲಿ ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಗೂಡಂಗಡಿ ತಂದಿಟ್ಟಿರುವುದು ಸರಿಯಾದ ನಡತೆಯಲ್ಲ. ದೈವಸ್ಥಾನ ಜಾಗ ಒತ್ತುವರಿ ಮಾಡಿಕೊಂಡು ಕೂತ ಗೂಡಂಗಡಿಗೆ ವಿದ್ಯುತ್ ಸಂಪರ್ಕಕ್ಕೆ ಎನ್‌ಒಸಿ ಕೊಟ್ಟಿಲ್ಲ. ಆದರೂ ಹಳೆ ಗೂಡಂಗಡಿ ಪರ್ಮಿಷನ್ ದುರುಪಯೋಗ ಮಾಡಿಕೊಂಡು ವಿದ್ಯುತ್ ಸಂಪರ್ಕ ಪಡೆದಿದ್ದು, ಮೆಸ್ಕಾಂ ನೋಟಿಸ್ ನೀಡಿದೆ. ಅದರ ವಿರುದ್ಧ ಕೋರ್ಟ್‌ನಿಂದ ಸ್ಟೇ ತರಲಾಗಿದೆ. ದೈವಸ್ಥಾನ ಜಾಗದಲ್ಲಿ ಕೂತ ಅಂಗಡಿ ತೆರವು ಮಾಡಬೇಕು.
| ನಾಗಯ್ಯ ಶೆಟ್ಟಿ ಸದಸ್ಯ, ಶಿರೂರು ಗ್ರಾಮ ಪಂಚಾಯಿತಿ

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...