ಮೇಷ: ಸಂತಾನ ಲಾಭವಾಗಿ ಅಪರಿಮಿತ ಸಂತಸ. ವಿವಾಹ ಯೋಗ. ಉದ್ಯೋಗಸ್ಥರು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಶುಭಸಂಖ್ಯೆ: 6
ವೃಷಭ: ಮೇಲಧಿಕಾರಿಗಳಿಂದ ಸಹಾಯ ಸಿಗಲಿದೆ. ಹಣ ಹೂಡಿಕೆಯಲ್ಲಿ ಶುಭ. ಮೂಳೆಯ ಸಮಸ್ಯೆ ಕಾಣಿಸಿಕೊಳ್ಳುವ ಸಂಭವ. ಶುಭಸಂಖ್ಯೆ: 5
ಮಿಥುನ: ಆರೋಗ್ಯದ ನಿಮಿತ್ತ ಹಣವ್ಯಯವಾಗುವುದು. ಮಗನ ವಿವಾಹದ ವಿಷಯದಲ್ಲಿ ತೊಂದರೆ. ಅನಾರೋಗ್ಯದ ಭೀತಿ ಕಾಡಲಿದೆ. ಶುಭಸಂಖ್ಯೆ: 4
ಕಟಕ: ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿದೆ. ಸ್ಥಿರಾಸ್ತಿಯು ಲಭ್ಯವಾಗಿ ಮಾನಸಿಕ ನೆಮ್ಮದಿ. ಹಣ ಹೂಡಿಕೆಗೆ ಚಿಂತನೆ. ಶುಭಸಂಖ್ಯೆ: 8
ಸಿಂಹ: ತರಬೇತಿ ಸಂಸ್ಥೆಯವರಿಗೆ ಅಪಾರ ಜನಪ್ರಿಯತೆ ಲಭ್ಯ. ಕ್ಯಾಂಟೀನ್ ವ್ಯಾಪಾರದಲ್ಲಿ ಲಾಭ. ಬಂಧುಗಳೊಂದಿಗೆ ವಾಗ್ವಾದ. ಶುಭಸಂಖ್ಯೆ: 7
ಕನ್ಯಾ: ಲೇಖಕರಿಗೆ ಶುಭದಿನ. ಬರಹಗಾರರಿಗೆ ಅತ್ಯುತ್ತಮ ಸಮಯ. ಪಾಲುದಾರಿಕೆಯ ವ್ಯವಹಾರದಲ್ಲಿ ನಿರೀಕ್ಷೆಗಿಂತ ಅಧಿಕ ಲಾಭ. ಶುಭಸಂಖ್ಯೆ: 6
ತುಲಾ: ಅಧ್ಯಯನದಲ್ಲಿ ಆಸಕ್ತಿ ತಾಳುವಿರಿ. ದಂತ ವೈದ್ಯರಿಗೆ ಶುಭ. ರಾಜಕೀಯ ಕ್ಷೇತ್ರದ ಮಹಿಳೆಯರಿಗೆ ಆಲಸ್ಯದಿಂದ ಅಡೆತಡೆ. ಶುಭಸಂಖ್ಯೆ: 1
ವೃಶ್ಚಿಕ: ಮನೆಯ ನವೀಕರಣದ ಚಿಂತನೆ ಮಾಡುವಿರಿ. ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ. ಹಣದ ದುಂದುವೆಚ್ಚ ಅಪೇಕ್ಷಣೀಯವಲ್ಲ. ಶುಭಸಂಖ್ಯೆ: 6
ಧನುಸ್ಸು: ಮಾತಿನಲ್ಲಿ ಕಾಠಿಣ್ಯ ಅಗತ್ಯವಾದರೂ ತಾಳ್ಮೆ ಕಳೆದುಕೊಳ್ಳಬೇಡಿ. ಗೊಂದಲದ ವಾತಾವರಣ. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ. ಶುಭಸಂಖ್ಯೆ: 8
ಮಕರ: ಹತ್ತಿ ಬೆಳೆಗಾರರಿಗೆ ವಿಶೇಷ ಬೇಡಿಕೆ ಬರುವುದು. ವಿವಾಹದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಿವಾಹ ನಿಶ್ಚಯವಾಗುವ ಸಂಭವ. ಶುಭಸಂಖ್ಯೆ: 2
ಕುಂಭ: ರಾಜಕಾರಣಿಗಳಿಗೆ ಶುಭದಾಯಕ ಸಮಯ. ಅನಾರೋಗ್ಯದಿಂದ ಶಾರೀರಿಕ, ಮಾನಸಿಕ ಬಳಲಿಕೆ. ಔಷಧ ವ್ಯಾಪಾರಸ್ಥರಿಗೆ ಶುಭ. ಶುಭಸಂಖ್ಯೆ: 3
ಮೀನ: ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ. ಔಷಧ ತಯಾರಿ ಉದ್ಯಮದವರಿಗೆ ವಿಶೇಷ ಆದಾಯ. ಮಾತಿನಲ್ಲಿ ನಿಯಂತ್ರಣವಿದ್ದರೆ ಕ್ಷೇಮ. ಶುಭಸಂಖ್ಯೆ: 4
ಲಖನೌ ತಂಡದಲ್ಲಿ ನಾನು…LSG ಮಾಲೀಕ ಸಂಜೀವ್ ಜೊತೆಗಿನ ವಿವಾದದ ಕುರಿತು ಮೌನಮುರಿದ KL Rahul
Orange ಜ್ಯೂಸ್ನಿಂದಾಗಿ ಬದಲಾಯ್ತು ಮಹಿಳೆಯ ಬದುಕು; ಲಾಟರಿಯಲ್ಲಿ ಗೆದ್ದಿದ್ದು ಕೋಟಿ ಕೋಟಿ